“ತುಳುನಾಡಿನ ಸಂಪ್ರದಾಯವೇ ಚಂದ”- ಹುಟ್ಟೂರಿನ ಬಗ್ಗೆ ನಟ ಸುನೀಲ್ ಶೆಟ್ಟಿ ವಿಶೇಷ ಪೋಸ್ಟ್! ಮಾವನ ಮಾತು ನಿಜವೆಂದ ಕೆಎಲ್ ರಾಹುಲ್
Suniel Shetty: ಸುನೀಲ್ ಶೆಟ್ಟಿ ಸದ್ಯ ಮುಂಬೈನಲ್ಲಿ ನೆಲೆಸಿದ್ದರೂ, ತನ್ನ ಮೂಲದ ಬಗ್ಗೆ ಎಂದಿಗೂ ಮರೆತವರಲ್ಲ. ಇವರು ಹುಟ್ಟಿದ್ದು ಮಂಗಳೂರಿನ ಮುಲ್ಕಿ ಎಂಬಲ್ಲಿ. ಹಿಂದಿ, ಮಲಯಾಳಂ, ತಮಿಳು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 110 ಸಿನಿಮಾಗಳಲ್ಲಿ ನಟಿಸಿದ್ದಾರೆ.
Suniel Shetty Latest News: ಬಾಲಿವುಡ್ ನಟ ಸುನೀಲ್ ಶೆಟ್ಟಿ ಇತ್ತೀಚೆಗೆ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದು, ತನ್ನ ಮೂಲ ನೆಲದ ಸಂಪ್ರದಾಯ ಹಾಗೂ ಅಲ್ಲಿನ ಭಾಷೆಯ ಬಗ್ಗೆ ವಿಶೇಷವಾಗಿ ಮೆಚ್ಚುಗೆ ಸೂಚಿಸಿದ್ದಾರೆ. ಅಂದಹಾಗೆ ಈ ಪೋಸ್ಟ್’ನ್ನು ಕ್ರಿಕೆಟಿಗ ಕೆಎಲ್ ರಾಹುಲ್ ಕೂಡ ರಿಪೋಸ್ಟ್ ಮಾಡಿಕೊಂಡು, ಮಾವನ ಮಾತು ಅಕ್ಷರಶಃ ನಿಜ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್ ಜೊತೆ ನನ್ನ ಮದುವೆ’- ವಿಚ್ಛೇದನದ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಬಹಿರಂಗಪಡಿಸಿದ ಶಿಖರ್ ಧವನ್!
ಸುನೀಲ್ ಶೆಟ್ಟಿ ಸದ್ಯ ಮುಂಬೈನಲ್ಲಿ ನೆಲೆಸಿದ್ದರೂ, ತನ್ನ ಮೂಲದ ಬಗ್ಗೆ ಎಂದಿಗೂ ಮರೆತವರಲ್ಲ. ಇವರು ಹುಟ್ಟಿದ್ದು ಮಂಗಳೂರಿನ ಮುಲ್ಕಿ ಎಂಬಲ್ಲಿ. ಹಿಂದಿ, ಮಲಯಾಳಂ, ತಮಿಳು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 110 ಸಿನಿಮಾಗಳಲ್ಲಿ ನಟಿಸಿದ್ದಾರೆ.
1992ರಲ್ಲಿ ಸಿನಿರಂಗಕ್ಕೆ ಕಾಲಿಟ್ಟ ಸುನೀಲ್ ಶೆಟ್ಟಿ ‘ಬಲ್ವಾನ್’ ಚಿತ್ರದ ಮೂಲಕ ಸದ್ದು ಮಾಡಿದ್ದರು. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ಅದಾದ ಬಳಿಕ ದಿಲ್ವಾಲೆ (1994), ಅಂತ್ (1994), ಮೊಹ್ರಾ (1994), ಗೋಪಿ ಕಿಶನ್ (1994), ಕೃಷ್ಣ (1996), ರಕ್ಷಕ್ (1996), ಬಾರ್ಡರ್ (1997) ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಇದೀಗ ತಾನು ಹುಟ್ಟಿ ಬೆಳೆದ ನಾಡಿನ ಬಗ್ಗೆ ಇನ್’ಸ್ಟಾಗ್ರಾಂನಲ್ಲಿ ವಿಶೇಷ ಪೋಸ್ಟ್ ಶೇರ್ ಮಾಡಿರುವ ಸುನೀಲ್ ಶೆಟ್ಟಿ, ಎಲ್ಲಕ್ಕಿಂತ ಮೇಲು ತುಳುನಾಡಿನ ಸಂಪ್ರದಾಯ-ಪದ್ಧತಿ ಎಂದು ಕೊಂಡಾಡಿದ್ದಾರೆ. ಇದಲ್ಲದೆ, ಕೆಎಲ್ ರಾಹುಲ್ ಕೂಡ ಈ ಪೋಸ್ಟ್ ಅನ್ನು ತಮ್ಮ ಅಧಿಕೃತ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಟೀಂ ಇಂಡಿಯಾದ ಕೋಚಿಂಗ್’ನಲ್ಲಿ 1000 ಪಟ್ಟು ಹೆಚ್ಚು ರಾಜಕೀಯ- ತನ್ನದೇ ತಂಡದ ಬಗ್ಗೆ ಕೆಎಲ್ ರಾಹುಲ್ ಶಾಕಿಂಗ್ ಹೇಳಿಕೆ
ಇನ್ನು ದೇವಿಪ್ರಸಾದ್ ಕಯ್ಯ ಎಂಬವರು ಈ ಪೋಸ್ಟ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ