Mitchell Starc IPL Status : ಮುಂಬರುವ ಐಪಿಎಲ್ ಸೀಸನ್‌ಗಾಗಿ ಹರಾಜಿನಲ್ಲಿ ಭಾಗವಹಿಸುವ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಒಟ್ಟು 333 ಆಟಗಾರರ ಮೇಲೆ ಈ ಬಾರಿ ಬಿಡ್ಡಿಂಗ್ ನಡೆಯಲಿದೆ. ಇವರಲ್ಲಿ 214 ಭಾರತೀಯ ಹಾಗೂ 119 ವಿದೇಶಿ ಆಟಗಾರರು. 116 ಕ್ಯಾಪ್ಡ್ ಮತ್ತು 215 ಅನ್‌ಕ್ಯಾಪ್ಡ್ ಆಟಗಾರರು ಈ ಹರಾಜಿನಲ್ಲಿ ಸೇರಿಕೊಳ್ಳಲಿದ್ದಾರೆ. ಕಳೆದ 9 ವರ್ಷಗಳಿಂದ ಈ ಲೀಗ್‌ನಿಂದ ಹೊರಗುಳಿದಿರುವ ಆಟಗಾರರೊಬ್ಬರು ಐಪಿಎಲ್ 2024 ಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಆಟಗಾರ ಈ ಋತುವಿನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಬಿಕರಿಯಾಗಲಿದ್ದಾರೆ ಎಂದೇ ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಅತ್ಯಂತ ದುಬಾರಿಯಾಗಬಹುದು ಈ ಬೌಲರ್ : 
2023 ರ ವಿಶ್ವಕಪ್ ನಲ್ಲಿ  ಫಾಸ್ಟ್ ಬೌಲರ್ ಮಿಚೆಲ್ ಸ್ಟಾರ್ಕ್ ಬಹಳ ಮುಖ್ಯ ಪಾತ್ರ ವಹಿಸಿದ್ದರು. ಈ ಋತುವಿನಲ್ಲಿ ಐಪಿಎಲ್ ಗೆ ನೊಂದಾಯಿಸಿಕೊಂಡಿರುವ ಇವರು ಅತ್ಯಂತ ದುಬಾರಿ ಆಟಗಾರನಾಗಿ ಹೊರ ಹೊಮ್ಮಬಹುದು ಎಂದು ಹೇಳಲಾಗುತ್ತಿದೆ.  ಸ್ಟಾರ್ಕ್ 2015 ರಲ್ಲಿ ಅಂದರೆ ಬರೋಬ್ಬರಿ 9 ವರ್ಷಗಳ ಹಿಂದೆ ಐಪಿಎಲ್ ಆಡಿದ್ದರು. ಐಪಿಎಲ್ 2018ರ ಹರಾಜಿನಲ್ಲಿಯೂ ಅವರ ಹೆಸರು ಕಾಣಿಸಿಕೊಂಡಿತ್ತು. KKR 9.4 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಪಾವತಿಸುವ ಮೂಲಕ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಗಾಯದ ಕಾರಣದಿಂದಾಗಿ ಈ ಋತುವಿನಿಂದ ತಮ್ಮ ಹೆಸರನ್ನು ಹಿಂದಕ್ಕೆ ತೆಗೆದುಕೊಂಡರು. ಅಂದಿನಿಂದ ಅವರು ಈ ಲೀಗ್‌ನಿಂದ ಹೊರಗುಳಿದಿದ್ದಾರೆ. ಅವರು ಕೊನೆಯದಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಇದೀಗ 9 ವರ್ಷಗಳ ಬಳಿಕ ಈ ಲೀಗ್ ನಲ್ಲಿ ಮತ್ತೆ ಆಡಲು ನಿರ್ಧರಿಸಿದ್ದಾರೆ. ಅವರ ಮೂಲ ಬೆಲೆ 2 ಕೋಟಿ . 


ಇದನ್ನೂ ಓದಿ :  Tulsi Meghwar: ಕ್ರೀಡಾ ಜಗತ್ತಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿದ ಪಾಕಿಸ್ತಾನದ ಮೊದಲ ಹಿಂದೂ ಹುಡುಗಿ ಈಕೆ


ಆಕಾಶ್ ಚೋಪ್ರಾ ಅಭಿಪ್ರಾಯ ಕೂಡಾ ಇದೇ : 
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ಕಾಮೆಂಟರಿ ಮಾಡುತ್ತಿರುವ ಆಕಾಶ್ ಚೋಪ್ರಾ ಕೂಡಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮಿಚೆಲ್ ಸ್ಟಾರ್ಕ್ ಹಲವಾರು ಮಿಲಿಯನ್ ಡಾಲರ್ ಗಳಿಗೆ  ಮಾರಾಟವಾಗಬಹುದು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.  ಆಸ್ಟ್ರೇಲಿಯಾದಲ್ಲಿ ಆಡುವ ಬಹುತೇಕ ಎಲ್ಲರೂ ಟಾಟಾ ಐಪಿಎಲ್ ಹರಾಜಿಗೆ ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ ಅತ್ಯಂತ ಜನಪ್ರಿಯವಾದವರೆಂದರೆ ಸ್ಟಾರ್ಕ್. ಇವರು  ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವಾಗ ಅವರು ಉತ್ತಮ ಪ್ರದರ್ಶನ ನೀಡಿದ್ದರು. 


ಐಪಿಎಲ್‌ನ ಅಂಕಿಅಂಶಗಳು ಹೀಗಿವೆ : 
ಮಿಚೆಲ್ ಸ್ಟಾರ್ಕ್ ಐಪಿಎಲ್‌ನ ಕೇವಲ ಎರಡು ಸೀಸನ್‌ಗಳನ್ನು ಆಡಿದ್ದಾರೆ. 2014ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ  ಅವರು 2014 ಮತ್ತು 2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ಅವರು 27 ಪಂದ್ಯಗಳಲ್ಲಿ ಒಟ್ಟು 34 ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.  


ಇದನ್ನೂ ಓದಿ :  ರಿಂಕು ಸಿಂಗ್ ಸ್ಫೋಟಕ ಸಿಕ್ಸರ್’ಗೆ ಪೀಸ್… ಪೀಸ್.. ಆಯ್ತು ಮೀಡಿಯಾ ಹೌಸ್ ಗ್ಲಾಸ್! ವಿಡಿಯೋ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ