IPL 2024 Dates : ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ನ 17 ನೇ ಸೀಸನ್ ಮಾರ್ಚ್ 22 ರಿಂದ ಪ್ರಾರಂಭವಾಗಬಹುದು ಎನ್ನಲಾಗಿದೆ. ಟಿ20 ಕ್ರಿಕೆಟ್ ಲೀಗ್‌ನ ಅಂತಿಮ ಪಂದ್ಯ ಮೇ 26 ರಂದು ನಡೆಯುವ ಸಾಧ್ಯತೆ ಇದೆ. ಐಪಿಎಲ್ 2024 ಮತ್ತು ಟಿ 20 ವಿಶ್ವಕಪ್ 2024 ಟೂರ್ನಮೆಂಟ್ ನಡುವೆ ಕೇವಲ 5 ದಿನಗಳು ಬಾಕಿ ಉಳಿಯುತ್ತವೆ. ಜೂನ್ 1, 2024 ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ನೆಲದಲ್ಲಿ T20 ವಿಶ್ವಕಪ್ ಆರಂಭವಾಗಲಿದೆ.T20 ವಿಶ್ವಕಪ್ 2024ರಲ್ಲಿ ಭಾರತದ ಮೊದಲ ಪಂದ್ಯ ಐರ್ಲೆಂಡ್ ವಿರುದ್ಧ ಜೂನ್ 5 ರಂದು ನಡೆಯಲಿದೆ.


COMMERCIAL BREAK
SCROLL TO CONTINUE READING

IPL 2024 ಮಾರ್ಚ್ 22 ರಿಂದ ಪ್ರಾರಂಭ ಸಾಧ್ಯತೆ: 
ಕ್ರಿಕ್‌ಬಜ್ ವರದಿಯ ಪ್ರಕಾರ, ಮಾರ್ಚ್ 22 ರಿಂದ ಮೇ 26 ರವರೆಗೆ ಐಪಿಎಲ್ 2024 ಅನ್ನು ಆಯೋಜಿಸಲು ಬಿಸಿಸಿಐ ಸಿದ್ದತೆ ನಡೆಸುತ್ತಿದೆ.WPL ನ ಎರಡನೇ ಋತುವನ್ನು ಫೆಬ್ರವರಿ 22 ರಿಂದ ಮಾರ್ಚ್ 17 ರವರೆಗೆ ಆಯೋಜಿಸಬಹುದು.ಪ್ರಸ್ತುತ, ಲೋಕಸಭೆ ಚುನಾವಣೆಯ ದಿನಾಂಕದಿಂದಾಗಿ ಐಪಿಎಲ್ 2024 ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ.ಲೋಕಸಭೆ ಚುನಾವಣೆಯ ದಿನಾಂಕ ಬಹಿರಂಗಗೊಂಡ ನಂತರವೇ ಐಪಿಎಲ್ 2024 ರ ವೇಳಾಪಟ್ಟಿಯ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ.ಚುನಾವಣಾ ದಿನಾಂಕಗಳನ್ನು ಘೋಷಿಸಿದ ತಕ್ಷಣ, ಐಪಿಎಲ್ 2024 ರ  ಅಧಿಕೃತ ವೇಳಾಪಟ್ಟಿ ಕೂಡಾ ಪ್ರಕಟವಾಗುತ್ತದೆ. 


ಇದನ್ನೂ ಓದಿ :  ಶೋಯೆಬ್ ಮಲಿಕ್-ಸಾನಿಯಾ ಮಿರ್ಜಾ ವಿಚ್ಚೇದನಕ್ಕೆ ಇದೇ ಮೂಲ ಕಾರಣವಂತೆ!


ಬಿಸಿಸಿಐ ಮುಂದಿನ ಬಹು ದೊಡ್ಡ ಸವಾಲು : 
ಐಪಿಎಲ್ ಫೈನಲ್ ತನಕ ತಮ್ಮ ಆಟಗಾರರು ಲಭ್ಯರಿರುತ್ತಾರೆ ಎಂಬ ಭರವಸೆಯನ್ನು ಬಿಸಿಸಿಐ ಬಹುತೇಕ ಕ್ರಿಕೆಟ್ ಮಂಡಳಿಗಳಿಂದ ಪಡೆದುಕೊಂಡಿದೆ. ಆದರೂ T20 ವಿಶ್ವಕಪ್ ಜೂನ್ 1 ರಿಂದ ಪ್ರಾರಂಭವಾಗುತ್ತದೆ ಎನುವುದನ್ನು ಪರಿಗಣಿಸಿ, ಕೆಲವು ಆಟಗಾರರು IPL 2024 ರ ಋತುವಿನ ಮಧ್ಯದಲ್ಲಿ ನಿರ್ಗಮಿಸಬಹುದು.ಸಾರ್ವತ್ರಿಕ ಚುನಾವಣೆಗಳ ಜೊತೆಗೆ ಐಪಿಎಲ್ 2024 ಅನ್ನು ಆಯೋಜಿಸುವುದು ಮತ್ತು ಭಾರತದಲ್ಲಿಯೇ ಲೀಗ್ ಅನ್ನು ಆಯೋಜಿಸುವುದು ಬಿಸಿಸಿಐನ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಈ ಮಧ್ಯೆ, ಭಾರತದ ಆಟಗಾರರು ಹೈದರಾಬಾದ್‌ನಲ್ಲಿ ನೆಟ್ ಸೆಷನ್ ನಡೆಸಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಹೆಚ್ಚಿನ ಆಟಗಾರರು ಭಾಗವಹಿಸಿದ್ದರು.


ಇದನ್ನೂ ಓದಿ :  IND vs ENG: ಟೆಸ್ಟ್ ಶತಕವನ್ನು ಶ್ರೀರಾಮನಿಗೆ ಅರ್ಪಿಸಿದ ಭಾರತದ ಕ್ರಿಕೆಟಿಗ, ವಿಡಿಯೋ ವೈರಲ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.