ಶೋಯೆಬ್ ಮಲಿಕ್-ಸಾನಿಯಾ ಮಿರ್ಜಾ ವಿಚ್ಚೇದನಕ್ಕೆ ಇದೇ ಮೂಲ ಕಾರಣವಂತೆ!

Shoaib Malik-Sania Mirza Divorce Reason: ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಇತ್ತೀಚೆಗೆ ವಿಚ್ಚೇದನ ಪಡೆದಿದ್ದಾರೆ.. ಆದರೆ ಇದೀಗ ಇವರ ದಾಂಪತ್ಯ ಜೀವನದಲ್ಲಿ ಏನಾಯಿತು ಎಂಬ ಮಾಹಿತಿ ಹೊರಬಿದ್ದಿದೆ.

Written by - Savita M B | Last Updated : Jan 22, 2024, 08:16 AM IST
  • ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಕ್ರಿಕೆಟಿಗ ಶೋಯೆಬ್ ಮಲಿಕ್
  • ಆಯೇಷಾ ಸಿದ್ದಿಕ್ ಗೆ ವಿಚ್ಛೇದನ ನೀಡಿದ ನಂತರ ಮಿರ್ಜಾರನ್ನು ವಿವಾಹವಾದರು
  • ಸದ್ಯ ಅವರಿಗೆ 5 ವರ್ಷದ ಮಗನಿದ್ದಾನೆ...
ಶೋಯೆಬ್ ಮಲಿಕ್-ಸಾನಿಯಾ ಮಿರ್ಜಾ ವಿಚ್ಚೇದನಕ್ಕೆ ಇದೇ ಮೂಲ ಕಾರಣವಂತೆ! title=

Shoaib Malik-Sania Mirza Divorce: ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಕ್ರಿಕೆಟಿಗ ಶೋಯೆಬ್ ಮಲಿಕ್ 2010 ತನ್ನ ಮೊದಲ ಪತ್ನಿ ಆಯೇಷಾ ಸಿದ್ದಿಕ್ ಗೆ ವಿಚ್ಛೇದನ ನೀಡಿದ ನಂತರ ಮಿರ್ಜಾಳನ್ನು ವಿವಾಹವಾದರು. ಸದ್ಯ ಅವರಿಗೆ 5 ವರ್ಷದ ಮಗನಿದ್ದಾನೆ...

ಇದೇ ವೇಳೆ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು... ಅಲ್ಲದೆ, ಸಾನಿಯಾ ಮಿರ್ಜಾ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಮಲಿಕ್ ಜೊತೆಗಿನ ಎಲ್ಲ ಪೋಟೋಗಳನ್ನು ಸಹ ತೆಗೆದುಹಾಕಿದ್ದರು.. ಅದೇ ರೀತಿ ಮಲಿಕ್ ಕೂಡ ಸಾನಿಯಾ ಮಿರ್ಜಾ ಅವರ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.. ಕೆಲವು ದಿನಗಳ ಹಿಂದೆ ಸಾನಿಯಾ ಮಿರ್ಜಾ ತಮ್ಮ ಕಷ್ಟದ ಜೀವನದ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದು, ಮದುವೆ ಕಷ್ಟ, ವಿಚ್ಛೇದನ ಕಷ್ಟ ಎಂದು ಹೇಳಿದ್ದರು... 

ಇದನ್ನೂ ಓದಿ-IND vs ENG: ಟೆಸ್ಟ್ ಶತಕವನ್ನು ಶ್ರೀರಾಮನಿಗೆ ಅರ್ಪಿಸಿದ ಭಾರತದ ಕ್ರಿಕೆಟಿಗ, ವಿಡಿಯೋ ವೈರಲ್

ಅವರು ಪೋಸ್ಟ್ ಮಾಡಿದ ಒಂದೆರಡು ದಿನಗಳಲ್ಲಿ, ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದರು. ಇಬ್ಬರೂ ತಮ್ಮ ಮದುವೆಯ ಫೋಟೋಗಳನ್ನು ತಮ್ಮ Instagramನಲ್ಲಿ ಪೋಸ್ಟ್ ಮಾಡಿ... ಅದಕ್ಕೆ ಹೊಸ ಇನ್ನಿಂಗ್ಸ್ ಎಂದು ಬರೆದುಕೊಂಡಿದ್ದಾರೆ.. 

ಇದನ್ನೂ ಓದಿ-IND vs BAN: ಟೀಂ ಇಂಡಿಯಾ ನಾಯಕನ ಜೊತೆ ಜಗಳಕ್ಕೆ ನಿಂತ ಬಾಂಗ್ಲಾ ಆಟಗಾರರು… ಮುಂದಾಗಿದ್ದೇನು? ವಿಡಿಯೋ ನೋಡಿ

ಸದ್ಯ ಮಿರ್ಜಾ ಕುಟುಂಬ ಮತ್ತು ಸಾನಿಯಾ ಟೀಮ್ ಈ ಕುರಿತು ಮಾತನಾಡಿದ್ದು.. "ಸಾನಿಯಾ ಮಿರ್ಜಾ ಯಾವಾಗಲೂ ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕರ ಕಣ್ಣಿನಿಂದ ದೂರವಿಟ್ಟಿದ್ದಾರೆ. ಆದರೆ, ಕೆಲ ತಿಂಗಳ ಹಿಂದೆಯಷ್ಟೇ ಶೋಯೆಬ್ ಮಲಿಕ್ ವಿಚ್ಛೇದನ ಪಡೆದಿರುವ ಹಿನ್ನೆಲೆಯಲ್ಲಿ ಹಂಚಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಶೋಯೆಬ್ ಅವರ ಹೊಸ ಪಯಣ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ.. ಅವರಿಗೆ ಅಭಿನಂದನೆಗಳನ್ನೂ ಸಲ್ಲಿಸುತ್ತೇನೆ.. ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳು ಅವರ ವೃತ್ತಿಜೀವನದ ಈ ನಿರ್ಣಾಯಕ ಹಂತದಲ್ಲಿ ಯಾವುದೇ ರೀತಿಯ ಊಹಾಪೋಹಗಳನ್ನು ತಡೆಯಬೇಕು... ಅವರ ಖಾಸಗಿತನವನ್ನು ಗೌರವಿಸಬೇಕು ಎಂದಿದ್ದಾರೆ.. 

ಇದೀಗ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಅವರ ಬೇರ್ಪಡಿಕೆಗೆ ಕಾರಣವೇನು ಎಂಬುದರ ಕುರಿತು ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಇವರಿಬ್ಬರ ವಿಚ್ಚೇದನಕ್ಕೆ ಶೋಯೆಬ್ ಮಲಿಕ್ ಅವರ ವಿವಾಹೇತರ ಸಂಬಂಧವೇ ಕಾರಣ ಎನ್ನಲಾಗಿದೆ... ಸಾನಿಯಾ ಮಿರ್ಜಾ ಈ ಸಂಬಂಧವನ್ನು ಕೊನೆಗೊಳಿಸುವಂತೆ ಪದೇ ಪದೇ ಕೇಳಿಕೊಂಡಿದ್ದಾರೆ. ಆದರೆ, ಅದ್ಯಾವುದಕ್ಕೂ ಶೋಯೆಬ್ ಮಲಿಕ್ ಒಪ್ಪಿಕೊಳ್ಳಲಿಲ್ಲ.. ಇದರಿಂದ ಸಾನಿಯಾ ಮಿರ್ಜಾ ಕಂಗಾಲಾಗಿದ್ದಾರೆ ಎಂದು ಶೋಯೆಬ್ ಮಲಿಕ್ ಸಹೋದರಿ ಹೇಳಿದ್ದಾರೆ. ಆದರೆ ಸಾನಿಯಾ ಮಿರ್ಜಾ ಜೊತೆಗಿನ ಸಂಬಂಧ ಮುರಿದುಬಿದ್ದ ನಂತರ ಶೋಯೆಬ್ ಮಲಿಕ್ ಮದುವೆಯಾಗಿದ್ದನ್ನು ಹಲವು ಅಭಿಮಾನಿಗಳು ಟೀಕಿಸುತ್ತಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News