csk spinner and team india player piyush chawla: ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಪಿಯೂಷ್ ಚಾವ್ಲಾ ತಮ್ಮ ನಿವೃತ್ತಿಯ ಬಗ್ಗೆ ಕುತೂಹಲಕಾರಿ ಉತ್ತರವನ್ನು ನೀಡಿದ್ದಾರೆ. ಪೃಥ್ವಿ ಶಾ ನಿವೃತ್ತಿಯ ಬಗ್ಗೆ ಕೇಳಿದ ಪ್ರಶ್ನೆಗೆ.. ನಾನು ಸಚಿನ್ ತೆಂಡೂಲ್ಕರ್ ಜೊತೆ ಆಡಿದ್ದೇನೆ ಮತ್ತು ಅವರ ಮಗನ ಜೊತೆಯೂ ಆಡಿದ್ದೇನೆ.. ಈಗ ನಿನ್ನ ಮಗನ ಜೊತೆ ಆಟವಾಡುತ್ತೇನೆ ಆಮೇಲೆ ನಿವೃತ್ತಿಯಾಗುತ್ತೇನೆ ಎಂದು ಪಿಯೂಷ್ ಚಾವ್ಲಾ ಉತ್ತರ ನೀಡಿದ್ದಾರೆ.. 


COMMERCIAL BREAK
SCROLL TO CONTINUE READING

ಪಿಯೂಷ್ ಚಾವ್ಲಾ ಅವರ ಅಂತರರಾಷ್ಟ್ರೀಯ ವೃತ್ತಿಜೀವನವು ಅಷ್ಟೋಂದು ವಿಶೇಷವಾಗಿಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ 3 ಟೆಸ್ಟ್, 25 ODI, 7 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ ಅವರು ಟೆಸ್ಟ್‌ನಲ್ಲಿ 7, ಏಕದಿನದಲ್ಲಿ 32 ಮತ್ತು ಟಿ20ಯಲ್ಲಿ 4 ವಿಕೆಟ್‌ಗಳನ್ನು ಪಡೆದರು. 2006ರಲ್ಲಿ ಪದಾರ್ಪಣೆ ಮಾಡಿದ್ದ ಪಿಯೂಷ್ ಚಾವ್ಲಾ ಡಿಸೆಂಬರ್ 2012ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯ ಆಡಿದ್ದರು. ಆ ಬಳಿಕ ಟೀಂ ಇಂಡಿಯಾ ಪರವಾಗಿ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಲಿಲ್ಲ. 2011ರ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು.


ಇದನ್ನೂ ಓದಿ- ಸ್ಟಾರ್‌ ನಟಿ ನಯನತಾರಾ ಟ್ವಿಟರ್‌ ಅಕೌಂಟ್‌ ಹ್ಯಾಕ್‌ ಮಾಡಿದ ಕಿಡಿಗೇಡಿಗಳು..ಅಭಿಮಾನಿಗಳ ಬಳಿ ವಿಶೇಷ ಮನವಿ ಮುಂದಿಟ್ಟ ನಟಿ! 


ಪಿಯೂಷ್ ಚಾವ್ಲಾ ಅವರ ಅಂತರರಾಷ್ಟ್ರೀಯ ವೃತ್ತಿಜೀವನವು ಬಹಳ ಹಿಂದೆಯೇ ಕೊನೆಗೊಂಡಿದ್ದರೂ, ಅವರು ಇನ್ನೂ ಐಪಿಎಲ್ ಸೇರಿದಂತೆ ಇತರ ದೇಶೀಯ ಲೀಗ್‌ಗಳಲ್ಲಿ ಆಡುತ್ತಿದ್ದಾರೆ. ಚಾವ್ಲಾ ಅವರಿಗೆ 35 ವರ್ಷ ವಯಸ್ಸು ಆದರೆ ಇದು ಅವರ ಫಿಟ್ನೆಸ್ ಮೇಲೆ ಹೆಚ್ಚು ಪರಿಣಾಮ ಬೀರಲಿಲ್ಲ. ಇತ್ತೀಚೆಗೆ ಶುಭಂಕರ್ ಮಿಶ್ರಾ ಪಾಡ್‌ಕಾಸ್ಟ್‌ನಲ್ಲಿ, ಪಿಯೂಷ್ ಚಾವ್ಲಾ ಅವರು ಧೋನಿ ಮೊದಲು ನಿವೃತ್ತರಾಗುತ್ತಾರಾ ಅಥವಾ ನೀವೇ ಎಂದು ಪ್ರಶ್ನೆಯನ್ನು ಕೇಳಿದರು. ಈ ಕುರಿತು ಅವರು ಹೇಳಿದ್ದು.. ಎಂಎಸ್ ಧೋನಿ ಮೊದಲು ನಿವೃತ್ತಿಯಾಗದ ಮೇಲೆ ನಾನು ನಿವೃತ್ತಿ ಹೊಂದುತ್ತೇನೆ ಎಂದಿದ್ದಾರೆ.. ಅಲ್ಲದೇ ನಾನು ಸಚಿನ್ ತೆಂಡೂಲ್ಕರ್ ಜೊತೆ ಆಡಿದ್ದೇನೆ ಮತ್ತು ಅವರ ಮಗನ ಜೊತೆಯೂ ಆಡಿದ್ದೇನೆ.. ಈಗ ನಿನ್ನ ಮಗನ ಜೊತೆ ಆಟವಾಡುತ್ತೇನೆ ಆಮೇಲೆ ನಿವೃತ್ತಿಯಾಗುತ್ತೇನೆ ಎಂದು ಪಿಯೂಷ್ ಚಾವ್ಲಾ ಉತ್ತರ ನೀಡಿದ್ದಾರೆ.. 


ಐಪಿಎಲ್‌ನಲ್ಲಿ ಪಿಯೂಷ್ ಚಾವ್ಲಾ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಐಪಿಎಲ್ 2023 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವಾಗ ಅವರು ಅದ್ಭುತ ಪ್ರದರ್ಶನ ನೀಡಿದರು. ಕಳೆದ ಋತುವಿನಲ್ಲಿಯೂ ಅವರು ಇದೇ ತಂಡದ ಸದಸ್ಯರಾಗಿದ್ದರು. ಈಗ ಅವರು ಯಾವ ತಂಡಕ್ಕೆ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.


ಇದನ್ನೂ ಓದಿ-ಸೌಂದರ್ಯಕ್ಕೂ ಸೈ ,ಆರೋಗ್ಯಕ್ಕೂ ಜೈ ಈ ಚಿನ್ನ!ಬಂಗಾರದ ಓಲೆ, ಸರ, ಬಳೆ ಈ ರೋಗಗಳಿಂದ ನೀಡುವುದು ಶಾಶ್ವತ ಮುಕ್ತಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.