ನವದೆಹಲಿ: 2021ರ ಟಿ-20 ವಿಶ್ವಕಪ್‌(T20 World Cup 2021)ನಲ್ಲಿ ಟೀಂ ಇಂಡಿಯಾ ದೊಡ್ಡ ನಿರಾಸೆಯನ್ನು ಅನುಭವಿಸಿದೆ. ಲೀಗ್ ನಲ್ಲಿಯೇ ಟೂರ್ನಿಯಿಂದ ಹೊರಬಿದ್ದಿರುವ ಭಾರತ ತಂಡ ಕೋಟ್ಯಂತರ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಮೂಡಿಸಿದೆ. ನಮಿಬಿಯಾ ವಿರುದ್ಧದ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ವಿರಾಟ್ ಕೊಹ್ಲಿ ಟಿ-20 ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ. ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡ ಬಳಿಕ ವಿಶ್ವದ ಶ್ರೇಷ್ಠ ಆಟಗಾರನಿಗೆ ಅದೃಷ್ಟವೇ ಖುಲಾಯಿಸಲಿಲ್ಲ.


COMMERCIAL BREAK
SCROLL TO CONTINUE READING

ಹೌದು, ವಿರಾಟ್ ಕೊಹ್ಲಿ(Virat Kohli) ನಾಯಕತ್ವದ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ. ಭಾರತಕ್ಕಾಗಿ ಕೊಹ್ಲಿ ಒಂದೇ ಒಂದು ಐಸಿಸಿ ಪಂದ್ಯಾವಳಿ ಗೆಲ್ಲಲು ಸಾಧ್ಯವಾಗಲಿಲ್ಲ. ಟಿ-20 ವಿಶ್ವಕಪ್ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ನಾಯಕತ್ವ ತೊರೆಯುವುದಾಗಿ ಕೊಹ್ಲಿ ಘೋಷಿಸಿದ್ದರು. ಅದರಂತೆ ಅವರಿಗ ಟಿ-20 ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇದಾದ ಬಳಿಕ ಕೊಹ್ಲಿಯ ಏಕದಿನ ಹಾಗೂ ಟೆಸ್ಟ್ ನಾಯಕತ್ವಕ್ಕೂ ಅಪಾಯ ಎದುರಾಗಿದೆ. ಪ್ರಸ್ತುತ ವಿಶ್ವದ ಅತ್ಯುತ್ತಮ ಆಟಗಾರನೆಂಬ ಹೆಗ್ಗಳಿಕೆ ಹೊಂದಿರುವ ಕೊಹ್ಲಿ ನಾಯಕತ್ವದಲ್ಲಿ ವಿಫಲರಾಗಿದ್ದಾರೆ.   


ಇದನ್ನೂ ಓದಿ: India vs Namibia: ನಮೀಬಿಯಾ ವಿರುದ್ಧದ ಗೆಲುವಿನೊಂದಿಗೆ T20I ನಾಯಕತ್ವಕ್ಕೆ ಕೊಹ್ಲಿ ವಿದಾಯ


ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ(Team India) ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲದಿರುವುದು ಕೋಟ್ಯಂತರ ಅಭಿಮಾನಿಗಳಿಗೆ ನೋವು ತಂದಿದೆ. ಇದಷ್ಟೇ ಅಲ್ಲ ಐಪಿಎಲ್ ಪಂದ್ಯಾವಳಿಯಲ್ಲೂ ಕೊಹ್ಲಿ ಒಮ್ಮೆಯೂ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಎಲ್ಲಕ್ಕಿಂತಲೂ ಹೆಚ್ಚಾಗಿ ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾ ಒಮ್ಮೆಯೂ ಪಾಕಿಸ್ತಾನದ ವಿರುದ್ಧ ಸೋಲು ಕಂಡಿರಲಿಲ್ಲ. ಆದರೆ ಕೊಹ್ಲಿ ನಾಯಕತ್ವದಲ್ಲಿ ಮೊದಲ ಬಾರಿ ಹೀನಾಯ ಸೋಲು ಕಾಣಬೇಕಾಯಿತು. ವಿಶ್ವದ ಶ್ರೇಷ್ಠ ಕ್ರಿಕೆಟಿಗನಿಗೆ ಅದೃಷ್ಟಲಕ್ಷ್ಮೀ ಕೈಹಿಡಿಯಲೇ ಇಲ್ಲ. ಇದೀಗ ಅವರ ಟೆಸ್ಟ್ ನಾಯಕತ್ವಕ್ಕೂ ಅಪಾಯ ಎದುರಾಗಿದೆ. ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವದ ರೇಸ್ ನಲ್ಲಿ ಮೂವರು ಪ್ರಮುಖ ಆಟಗಾರರಿದ್ದಾರೆ.


1) ರೋಹಿತ್ ಶರ್ಮಾ


[[{"fid":"221761","view_mode":"default","fields":{"format":"default","field_file_image_alt_text[und][0][value]":"Rohit Sharma","field_file_image_title_text[und][0][value]":"Rohit Sharma"},"type":"media","field_deltas":{"1":{"format":"default","field_file_image_alt_text[und][0][value]":"Rohit Sharma","field_file_image_title_text[und][0][value]":"Rohit Sharma"}},"link_text":false,"attributes":{"alt":"Rohit Sharma","title":"Rohit Sharma","class":"media-element file-default","data-delta":"1"}}]]


ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್, ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾ(Rohit Sharma) ಟೆಸ್ಟ್ ತಂಡದ ನಾಯಕನ ಸ್ಪರ್ಧೆಯಲ್ಲಿರುವ ಮೊದಲ ಆಟಗಾರ. ವಿರಾಟ್ ಕೊಹ್ಲಿ ನಂತರ ಏಕದಿನ ಮತ್ತು ಟಿ-20 ನಾಯಕರಾಗಲು ರೋಹಿತ್ ಶರ್ಮಾ ಕೂಡ ಸ್ಪರ್ಧಿ. ತಂಡದ ಮ್ಯಾನೇಜ್‌ಮೆಂಟ್ ರೋಹಿತ್ ಶರ್ಮಾಗೆ ಟೆಸ್ಟ್‌ ನಲ್ಲಿ ನಾಯಕತ್ವದ ಅವಕಾಶ ನೀಡಿದರೆ ಸರಿಯಾಗಿ ಬಳಸಿಕೊಳ್ಳುವ ಸಾಮರ್ಥ್ಯವಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ.


ಇದನ್ನೂ ಓದಿ: IPL 2022 Mega Auction: ಅತ್ಯಧಿಕ ಮೊತ್ತಕ್ಕೆ ಖರೀದಿಯಾಗಲಿರುವ ಆಟಗಾರ ಇವರು, ಪಕ್ಕಕ್ಕೆ ಸರಿಯಲಿದೆ ಎಲ್ಲಾ ದಾಖಲೆ


2) ರವಿಚಂದ್ರನ್ ಅಶ್ವಿನ್


[[{"fid":"221762","view_mode":"default","fields":{"format":"default","field_file_image_alt_text[und][0][value]":"R.Ashwin","field_file_image_title_text[und][0][value]":"R.Ashwin"},"type":"media","field_deltas":{"2":{"format":"default","field_file_image_alt_text[und][0][value]":"R.Ashwin","field_file_image_title_text[und][0][value]":"R.Ashwin"}},"link_text":false,"attributes":{"alt":"R.Ashwin","title":"R.Ashwin","class":"media-element file-default","data-delta":"2"}}]]


ಟೀಂ ಇಂಡಿಯಾದ ಲೆಜೆಂಡರಿ ಆಫ್ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ (R.Ashwin) ಅವರಿಗೂ ಟೆಸ್ಟ್ ತಂಡದ ಕಮಾಂಡ್ ನೀಡಬಹುದು. ಆರ್.ಅಶ್ವಿನ್ ಅವರಿಗೆ ಸಾಕಷ್ಟು ಅನುಭವವಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಮ್ಯಾನೇಜ್ ಮೆಂಟ್ ನಾಯಕತ್ವದ ಜವಾಬ್ದಾರಿ ನೀಡಿದರೆ ಟೀಂ ಇಂಡಿಯಾವನ್ನು ಎತ್ತರಕ್ಕೆ ಕೊಂಡೊಯ್ಯುವ ಶಕ್ತಿ ಅಶ್ವಿನ್ ಇದೆ. ಅಶ್ವಿನ್ ಅವರನ್ನು ಭಾರತ ಮಾತ್ರವಲ್ಲದೆ ವಿಶ್ವದ ಅತ್ಯುತ್ತಮ ಆಫ್ ಸ್ಪಿನ್ನರ್ ಎಂದು ಪರಿಗಣಿಸಲಾಗಿದೆ. ಅವರು ಈ ವರ್ಷದ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಟೆಸ್ಟ್ ವೃತ್ತಿಜೀವನದ 400ನೇ ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ 2ನೇ ಬೌಲರ್ ಅಶ್ವಿನ್ ಆಗಿದ್ದಾರೆ.  


3) ಅಜಿಂಕ್ಯ ರಹಾನೆ


[[{"fid":"221763","view_mode":"default","fields":{"format":"default","field_file_image_alt_text[und][0][value]":"Ajinkya Rahane","field_file_image_title_text[und][0][value]":"Ajinkya Rahane"},"type":"media","field_deltas":{"3":{"format":"default","field_file_image_alt_text[und][0][value]":"Ajinkya Rahane","field_file_image_title_text[und][0][value]":"Ajinkya Rahane"}},"link_text":false,"attributes":{"alt":"Ajinkya Rahane","title":"Ajinkya Rahane","class":"media-element file-default","data-delta":"3"}}]]


ಟೀಂ ಇಂಡಿಯಾಕ್ಕೆ ವಿರಾಟ್ ಕೊಹ್ಲಿಗಿಂತಲೂ ಅಜಿಂಕ್ಯ ರಹಾನೆ (Ajinkya Rahane) ಉತ್ತಮ ನಾಯಕ ಎಂಬುದು ಸಾಬೀತಾಗಿದೆ. ಏಕೆಂದರೆ ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ 2ನೇ ಇನ್ನಿಂಗ್ಸ್‌ ನಲ್ಲಿ ಕೇವಲ 36 ರನ್‌ಗಳಿಗೆ ಆಲೌಟ್ ಆಗಿತ್ತು. ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿಯಂತಹ ಅನುಭವಿ ಆಟಗಾರರಿಲ್ಲದೆ ಟೀಂ ಇಂಡಿಯಾಗೆ ಪ್ರತಿದಾಳಿ ನಡೆಸಲು ಸಾಧ್ಯವಿಲ್ಲವೆಂದು ಮಾರ್ಕ್ ವಾ ಮತ್ತು ರಿಕಿ ಪಾಂಟಿಂಗ್ ಹೇಳಿದ್ದರು. ಆದರೆ ಅಜಿಂಕ್ಯ ರಹಾನೆ ಆಸ್ಟ್ರೇಲಿಯಾದ ಮೈಂಡ್ ಗೇಮ್‌ಗೆ ಗಮನ ಕೊಡಲಿಲ್ಲ. ಬಳಿಕ ರಹಾನೆ ನಾಯಕತ್ವದಲ್ಲಿ ಟೀಂ ಇಂಡಿಯಾ ಮೆಲ್ಬೋರ್ನ್‌ನಲ್ಲಿ ಅದ್ಭುತ ಪುನರಾಗಮನ ಮಾಡಿತು. ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಮೆಲ್ಬೋರ್ನ್ ಟೆಸ್ಟ್‌ ನಲ್ಲಿ ಆಸೀಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಅಜಿಂಕ್ಯ ರಹಾನೆ ಮೆಲ್ಬೋರ್ನ್‌ನಲ್ಲಿ ಭರ್ಜರಿ ಶತಕ ಬಾರಿಸಿ ಮಿಂಚಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತ 2-1 ಅಂತರದಲ್ಲಿ ಗೆದ್ದುಕೊಂಡಿತ್ತು. ಅಜಿಂಕ್ಯ ರಹಾನೆ ಬ್ಯಾಟ್ಸ್‌ ಮನ್ ಆಗಿ ವಿರಾಟ್ ಕೊಹ್ಲಿಗಿಂತ ವಿದೇಶದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ