ನವದೆಹಲಿ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡವು ನಮಿಬಿಯಾ ತಂಡದ ವಿರುದ್ಧ 9 ವಿಕೆಟ್ ಗಳ ಗೆಲುವಿನ ನಗೆ ಬೀರಿದೆ.
ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ (Virat Kohli) ಮೊದಲು ಫೀಲ್ಡಿಂಗ್ ಆಯ್ದುಕೊಂಡು ನಮಿಬಿಯಾ ತಂಡವನ್ನು ಕೇವಲ 132/8 ರನ್ಗಳಿಗೆ ಕಟ್ಟಿ ಹಾಕಿದರು ಭಾರತದ ಪರವಾಗಿ ಜಡೇಜಾ ಮತ್ತು ಅಶ್ವಿನ್ ತಲಾ ಮೂರು ವಿಕೆಟ್ ಗಳನ್ನು ಪಡೆಯುವ ಮೂಲಕ ನಮಿಬಿಯಾ ತಂಡದ ರನ್ ಗತಿಗೆ ಕಡಿವಾಣ ಹಾಕಿದರು.ನಮಿಬಿಯಾ ಪರವಾಗಿ ವೈಸ್ ಅವರು ಗಳಿಸಿದ 26 ರನ್ ಗಳೇ ಅತ್ಯಧಿಕ ವೈಯಕ್ತಿಕ ಮೊತ್ತವಾಗಿತ್ತು.
India sign off from the #T20WorldCup in style 👏 #INDvNAM | https://t.co/58OdXxLvhf pic.twitter.com/SGZK41vhgX
— ICC (@ICC) November 8, 2021
ಇದನ್ನೂ ಓದಿ: "ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಹೋರಾಟದ ಮನೋಭಾವ ಮತ್ತು ಉತ್ಸಾಹವನ್ನು ತಂದಿದ್ದಾರೆ"
133 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಭಾರತ ತಂಡವು ಭರ್ಜರಿ ಆರಂಭವನ್ನು ಕಂಡಿತು. ಭಾರತದ ಪರವಾಗಿ ಕೆಎಲ್.ರಾಹುಲ್ (54) ರೋಹಿತ್ ಶರ್ಮಾ (56) ಭರ್ಜರಿ ಬ್ಯಾಟಿಂಗ್ ನಿಂದಾಗಿ ಭಾರತ ನಮಿಬಿಯಾ ನೀಡಿದ್ದ ಗುರಿಯನ್ನು ಸುಲಭವಾಗಿ ತಲುಪಿತು.ಈ ಇಬ್ಬರು ಜೋಡಿ ಮೊದಲ ವಿಕೆಟ್ ಗೆ 86 ರನ್ ಗಳ ಜೊತೆಯಾಟವನ್ನು ಆಡಿದರು.ಇನ್ನೂ ಕೊನೆಗೆ ಸೂರ್ಯಕುಮಾರ್ ಯಾದವ್ ಅವರು 25 ರನ್ ಗಳನ್ನು ಗಳಿಸಿ ಅಜೇಯರಾಗಿ ಉಳಿದರು.
🔹 Rohit Sharma’s diving catch
🔹 KL Rahul’s effortless six
🔹 Suryakumar Yadav’s inside out shot for a fourVote for your @nissan #POTD for Day 23 🗳️https://t.co/BBv37ZOlXV pic.twitter.com/wkAcMirOLx
— ICC (@ICC) November 8, 2021
ಇದನ್ನೂ ಓದಿ: T20 World Cup 2021: ಇಂದು ಕೊನೆಗೊಳ್ಳಲಿದೆ ವಿರಾಟ್ ಕೊಹ್ಲಿಯ ಟಿ20 ನಾಯಕತ್ವ, ಯಾರಾಗಲಿದ್ದಾರೆ ಮುಂದಿನ ಕ್ಯಾಪ್ಟನ್!
ಈ ಕೊನೆಯ ಲೀಗ್ ಪಂದ್ಯದದ ಗೆಲುವಿನೊಂದಿಗೆ ಚಿಕ್ಕ ಮಾದರಿಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿಯ ನಾಯಕತ್ವ ಕೊನೆಗೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ