ನವದೆಹಲಿ : ಐಪಿಎಲ್ 2022ರ (Ipl 2022) ಸೀಸನ್ ಹಿಂದೆಂದಿಗಿಂತಲೂ ಹೆಚ್ಚು ರೋಚಕವಾಗಿರಲಿದೆ. ಈ ಬಾರಿ ಐಪಿಎಲ್ ನಲ್ಲಿ ಹತ್ತು ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಈ ಬಾರಿ ಎರಡು ಹೊಸ ತಂಡಗಳಾದ  ಅಹಮದಾಬಾದ್ ಮತ್ತು ಲಕ್ನೋ ಐಪಿಎಲ್‌ ಕಣದಲ್ಲಿವೆ (IPL Team). ಅಹಮದಾಬಾದ್  ಮೂವರು ಅಪಾಯಕಾರಿ ಆಟಗಾರರನ್ನು ತನ್ನ ತಂಡದಲ್ಲಿ ಸೇರಿಸಿಕೊಂಡಿದೆ. 


COMMERCIAL BREAK
SCROLL TO CONTINUE READING

ಈ ಮೂವರು ಅಪಾಯಕಾರಿ ಆಟಗಾರರನ್ನು ಆಯ್ಕೆ ಮಾಡಿದ ಅಹಮದಾಬಾದ್  :
ಅಹಮದಾಬಾದ್ ಫ್ರಾಂಚೈಸಿಯು (Ahmedabad Franchise) ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya), ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ (Rashid Khan) ಮತ್ತು ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ (Shubman Gill) ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹಾರ್ದಿಕ್ ಪಾಂಡ್ಯ ಮತ್ತು ರಶೀದ್ ಖಾನ್ ತಲಾ 15 ಕೋಟಿ ರೂ., ಶುಭಮನ್ ಗಿಲ್ 7 ಕೋಟಿ ರೂ. ಪಡೆಯಲಿದ್ದಾರೆ .


ಇದನ್ನೂ ಓದಿ : Virat Kohli: ಕಿಂಗ್ ಕೊಹ್ಲಿ ವಿಶ್ವದ ಯಶಸ್ವಿ ನಾಯಕ ಎಂಬುದಕ್ಕೆ ಈ ದಾಖಲೆಗಳೇ ಸಾಕ್ಷಿ


ಕಳೆದ ಐಪಿಎಲ್ (IPL) ಸೀಸನ್‌ನಲ್ಲಿ ಹಾರ್ದಿಕ್ ಪಾಂಡ್ಯ 11 ಕೋಟಿ ಪಡೆದರೆ, ರಶೀದ್ ಖಾನ್ 9 ಕೋಟಿ ಸಭಾವನೆ ಪಡೆದಿದ್ದರು. ಈ ಮೂಲಕ ಹಾರ್ದಿಕ್ ಪಾಂಡ್ಯ ಈ ಬಾರಿ 4 ಕೋಟಿ ಲಾಭ ಪಡೆದರೆ ರಶೀದ್ ಖಾನ್ 6 ಕೋಟಿ ಗಳಿಸಿದ್ದಾರೆ. ಐಪಿಎಲ್ 2021ರಲ್ಲಿ ಶುಭಮನ್ ಗಿಲ್ 1.8 ಕೋಟಿ ಗಳಿಸಿದ್ದು, ಈ ಬಾರಿ ಅವರು 7 ಕೋಟಿ ರೂಪಾಯಿ ಪಡೆಯಲಿದ್ದಾರೆ. 


ಶತ್ರು ತಂಡಗಳಿಗೆ ಎಚ್ಚರಿಕೆಯ ಗಂಟೆ : 
ಅಹಮದಾಬಾದ್ ಫ್ರಾಂಚೈಸ್ (Ahmedabad Franchise)  ಮೊದಲು ಇಶಾನ್ ಕಿಶನ್ (Ishan Kishan) ಅವರೊಂದಿಗೆ ಡೀಲ್ ಮಾಡಲು ಬಯಸಿತ್ತು. ಆದರೆ ಮಾತುಕತೆ ಸಫಲವಾಗದ ಕಾರಣ ಅಹಮದಾಬಾದ್ ತಂಡ,  ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಈ ಮೂವರು ಅಪಾಯಕಾರಿ ಆಟಗಾರರನ್ನು ಆಯ್ಕೆ ಮಾಡುವ ಮೂಲಕ ಅಹಮದಾಬಾದ್ ತಂಡ ಎದುರಾಳಿ ತಂಡಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.  


ಇದನ್ನೂ ಓದಿ : ಕೊಹ್ಲಿ ನಂತರ ರೋಹಿತ್ ಅಲ್ಲ, ಈ ಆಟಗಾರ ಆಗಲಿದ್ದಾರೆ ಟೆಸ್ಟ್ ತಂಡದ ನಾಯಕ! ಬದಲಾಗಲಿದೆ ಟೀಂ ಇಂಡಿಯಾ ಅದೃಷ್ಟ


ಶುಭಮನ್ ಗಿಲ್ ಕಳೆದ ಐಪಿಎಲ್ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಪರ ಆಡಿದ್ದರು. ಆದರೆ, ತಂಡ ಅವರನ್ನು ಉಳಿಸಿಕೊಂಡಿರಲಿಲ್ಲ.  ಅದೇ ಸಮಯದಲ್ಲಿ, ರಶೀದ್ ದೀರ್ಘಕಾಲದವರೆಗೆ ಸನ್ರೈಸರ್ಸ್ ಹೈದರಾಬಾದ್ (SRH) ನ ಭಾಗವಾಗಿದ್ದರು. ಇದಲ್ಲದೇ ಮುಂಬೈ ಇಂಡಿಯನ್ಸ್ (Mumbai Indians) ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಅವರನ್ನೂ ಕೂಡಾ ತಂಡ ಉಳಿಸಿಕೊಂಡಿರಲಿಲ್ಲ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.