Show Cause Notice, Indian Head Coach: ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಶನಿವಾರ ಹಿರಿಯ ಪುರುಷರ ತಂಡದ ಮುಖ್ಯ ಕೋಚ್ ಇಗೊರ್ ಸ್ಟಿಮ್ಯಾಕ್‌’ಗೆ ಒಪ್ಪಂದದ ಉಲ್ಲಂಘನೆಗಾಗಿ ಶೋಕಾಸ್ ನೋಟಿಸ್ ನೀಡಿದೆ. ಏಷ್ಯನ್ ಗೇಮ್ಸ್, ವಿಶ್ವಕಪ್ ಅರ್ಹತಾ ಪಂದ್ಯಗಳು ಮತ್ತು ಏಷ್ಯನ್ ಕಪ್‌’ಗೆ ತಯಾರಿ ನಡೆಸಲು ಕೆಲವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಕ್ಲಬ್‌’ಗಳು ತಮ್ಮ ಆಟಗಾರರನ್ನು ರಾಷ್ಟ್ರೀಯ ಶಿಬಿರಗಳಿಗೆ ರಿಲೀಸ್ ಮಾಡುತ್ತಿಲ್ಲ ಎಂದು ಸ್ಟಿಮ್ಯಾಕ್ ಟೀಕಿಸಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Uday Kotak resigns: ಕೊಟಕ್ ಮಹೀಂದ್ರಾ ಬ್ಯಾಂಕ್ ಎಂಡಿ, ಸಿಇಒ ಹುದ್ದೆಗೆ ಉದಯ್ ಕೋಟಕ್ ರಾಜೀನಾಮೆ


“ಭಾರತೀಯ ಫುಟ್‌ಬಾಲ್‌’ಗೆ ನನ್ನ ಸಹಾಯ ಬೇಕಾದರೆ, ನನ್ನನ್ನು ಸತ್ಯ ಹೇಳಲು ಬಿಡಬೇಕು” ಎಂದು ಕೋಚ್ ಸ್ಟಿಮ್ಯಾಕ್ ಹೇಳಿಕೆ ನೀಡಿದ್ದರು. ಕ್ರೊಯೇಷಿಯಾದ ಮಾಜಿ ಡಿಫೆಂಡರ್‌’ನ ಈ ಮುಕ್ತ ಕಾಮೆಂಟ್ ಎಐಎಫ್‌ಎಫ್ ಅಧಿಕಾರಿಗಳಿಗೆ ಅಸಮಾಧಾನನ್ನುಂಟು ಮಾಡಿದೆ. ಈ ಸಂಬಂಧ ವಿವರಣೆ ನೀಡುವಂತೆ ಸಮಿತಿ ಕೋಚ್’ಗೆ ಸೂಚನೆ ನೀಡಿದ್ದಾರೆ.


 “ಇದು ಇತ್ತೀಚಿನ ಕಾಮೆಂಟ್‌’ಗಳ ಬಗ್ಗೆ ಮಾತ್ರವಲ್ಲ, ಇದು ಕೆಲವು ಸಮಯದಿಂದ ನಡೆಯುತ್ತಿದೆ. ಅವರು ಫೆಡರೇಶನ್‌ನೊಂದಿಗಿನ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ತನಗೆ ಏನಾದರೂ ಸಮಸ್ಯೆ ಇದ್ದರೆ ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಬದಲು ನೇರವಾಗಿ ಒಕ್ಕೂಟದ ಜತೆ ಚರ್ಚಿಸಬಹುದಿತ್ತು” ಎಂದು ಎಐಎಫ್‌ಎಫ್ ಮೂಲವೊಂದು ತಿಳಿಸಿದೆ.


“ಅವರು ತಮ್ಮ ಉತ್ತರದಲ್ಲಿ ಏನು ಬರೆಯುತ್ತಾರೆ ಎಂದು ನೋಡೋಣ. ಅದರ ನಂತರವೇ ಈ ವಿಷಯವನ್ನು ಹೇಗೆ ಎದುರಿಸಬೇಕು ಎಂದು ಫೆಡರೇಶನ್ ನಿರ್ಧರಿಸಬಹುದು” ಎಂದು ಹೇಳಿದೆ.


ಸೆಪ್ಟೆಂಬರ್ 7 ರಿಂದ ಥೈಲ್ಯಾಂಡ್‌’ನಲ್ಲಿ ಪ್ರಾರಂಭವಾಗುವ ನಾಲ್ಕು ದಿನಗಳ ಕಿಂಗ್ಸ್ ಕಪ್ ಪಂದ್ಯಾವಳಿಗೆ ಭಾರತ ತಂಡವು ತಯಾರಿ ನಡೆಸುತ್ತಿರುವಾಗ ಸ್ಟಿಮ್ಯಾಕ್ ಈ ಹೇಳಿಕೆಗಳನ್ನು ನೀಡಿದ್ದರು.


ಇದನ್ನೂ ಓದಿ: ರಾಜ್ಯದ ಈ ಭಾಗದಲ್ಲಿ 2 ದಿನಗಳ ಕಾಲ ಭಾರೀ ವರ್ಷಧಾರೆ: ಬಿರುಗಾಳಿ ಸಹಿತ ಪ್ರವಾಹದ ಎಚ್ಚರಿಕೆ


ಏಷ್ಯನ್ ಅಂಡರ್ -23 ಅರ್ಹತಾ ಪಂದ್ಯಗಳು ಚೀನಾದಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಏಷ್ಯಾಡ್‌’ನಲ್ಲಿಯೂ ತಂಡ ಭಾಗವಹಿಸಲಿದೆ. ಭಾರತವು ಅಕ್ಟೋಬರ್‌’ನಲ್ಲಿ ಮೆರ್ಡೆಕಾ ಕಪ್ ಅನ್ನು ಆಡಲಿದೆ. 2026 ರ ವಿಶ್ವಕಪ್ ಮತ್ತು ಏಷ್ಯನ್ ಕಪ್‌’ಗಾಗಿ ಜಂಟಿ ಅರ್ಹತಾ ಪಂದ್ಯಗಳು ನವೆಂಬರ್‌’ನಲ್ಲಿ ನಡೆಯಲಿವೆ ಮತ್ತು ಏಷ್ಯನ್ ಕಪ್ ಜನವರಿಯಲ್ಲಿ ನಡೆಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ