Ajinkya Rahane: ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್’ನಲ್ಲಿ ಭಾರತದ ಶ್ರೇಯಾಂಕ ಕಾಪಾಡಲು ಬಹಳ ಶ್ರಮಿಸಿದ್ದಾರೆ. ಆದರೆ, ಇನ್ಮುಂದೆ ಟೆಸ್ಟ್ ಕ್ರಿಕೆಟ್ ನಾಯಕತ್ವ ಅವರ ಕೈಯಲ್ಲಿ ಇರೋದಿಲ್ಲ. ಬದಲಾಗಿ, ಅಜಿಂಕ್ಯಾ ರಹಾನೆ ತೆಕ್ಕೆಗೆ ಸೇರಲಿದೆ ಎಂದು ಕೆಲ ಮೂಲಗಳು ಹೇಳುತ್ತಿವೆ.   


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಧೋನಿ, ಸೆಹ್ವಾಗ್’ರಿಂದಲೂ ಕಷ್ಟಸಾಧ್ಯವಾದ ಈ ವಿಶ್ವದಾಖಲೆ ಬರೆಯಲಿದ್ದಾರೆ ರೋಹಿತ್ ಶರ್ಮಾ!


ಬಿಸಿಸಿಐ ಆಯ್ಕೆ ಸಮಿತಿಯು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗಾಗಿ ತಂಡವನ್ನು ಘೋಷಿಸಬೇಕಿದೆ. ಈ ಸಂದರ್ಭದಲ್ಲಿ ತಂಡವನ್ನು ಅನುಭವಿ ಬ್ಯಾಟ್ಸ್‌’ಮನ್ ಅಜಿಂಕ್ಯ ರಹಾನೆಗೆ ಹಸ್ತಾಂತರಿಸಬಹುದು ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ರುತುರಾಜ್ ಗಾಯಕ್ವಾಡ್’ಗೆ ಭಾರತದ ಉಪನಾಯಕನ ಸ್ಥಾನ ನೀಡುವ ಸಾಧ್ಯತೆ ಇದೆ.


ಇದಲ್ಲದೆ, ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಹನುಮಾ ವಿಹಾರಿ ಅವರಂತಹ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ಮತ್ತೊಂದೆಡೆ, ಪ್ರಸ್ತುತ ರಣಜಿ ಆಡುತ್ತಿರುವ 6 ಆಟಗಾರರನ್ನು ಪರಿಗಣಿಸಿ ತಂಡದಕ್ಕಿ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ: ಭಾರತದ ಆತಿಥ್ಯದಲ್ಲಿ ನೀಡಿದ ಈ ಆಹಾರವೇ ಕಳಪೆ ಫೀಲ್ಡಿಂಗ್’ಗೆ ಕಾರಣ ಎಂದ ಪಾಕ್ ವೇಗಿ


ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಂಭಾವ್ಯ ಭಾರತ ತಂಡ:


ಅಜಿಂಕ್ಯ ರಹಾನೆ (ಕ್ಯಾಪ್ಟನ್), ರುತುರಾಜ್ ಗಾಯಕ್ವಾಡ್ (ಉಪನಾಯಕ), ಹನುಮಾ ವಿಹಾರಿ, ಹಾರ್ದಿಕ್ ಪಾಂಡ್ಯ, ಸರ್ಫರಾಜ್ ಖಾನ್, ನಿತೀಶ್ ರಾಣಾ, ಇಶಾನ್ ಕಿಶನ್, ಪ್ರಿಯಾಂಕ್ ಪಂಚಲ್, ಅಭಿಮನ್ಯು ಇಶ್ವಾರ್, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ