ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಟೀಮ್ ಇಂಡಿಯಾದ ವೇಗ ವಿಭಾಗದಲ್ಲಿ ಮೊಹಮ್ಮದ್ ಶಮಿ ಅವರನ್ನು ತಮ್ಮ ಮೊದಲ ಆಯ್ಕೆ ಎಂದು ಅಜಿತ್ ಅಗರ್ಕರ್ ಅವರು ಹೆಸರಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ರಷ್ಯಾ ಅಧ್ಯಕ್ಷ ವಾಡ್ಲಿಮೀರ್ ಪುಟಿನ್ ಗೆ ಕರೆ ಮಾಡಿ ಪ್ರಧಾನಿ ಮೋದಿ ಹೇಳಿದ್ದೇನು?


ಸ್ಟಾರ್ ಸ್ಪೋರ್ಟ್ಸ್ ಜೊತೆಗೆ  ಮಾತನಾಡಿದ ಅಜಿತ್ ಅಗರ್ಕರ್ (Ajit Agarkar) ಅವರು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮತ್ತು ಇಶಾಂತ್ ಶರ್ಮಾ ಅವರನ್ನು ಟೀಮ್ ಇಂಡಿಯಾ ಪರ ಫೈನಲ್ ಗೆ ಆಡಲಿರುವ ತಮ್ಮ ಆಯ್ಕೆಯ ಆಟಗಾರರು ಎಂದು ಹೇಳಿದರು.


'ಭಾರತವು ವಿಶ್ವದಲ್ಲಿಯೇ ಆಕ್ರಮಣಕಾರಿ ತಂಡವನ್ನು ಹೊಂದಿದ್ದು. ಕಳೆದ ಕೆಲವು ವರ್ಷಗಳಿಂದ ಅದು ಅವರ ಶಕ್ತಿ ಎಂದು ನಾನು ಭಾವಿಸುತ್ತೇನೆ. ಅದು ಬುಮ್ರಾ ಇದ್ದರೂ, ನನಗೆ ಶಮಿ ನಂ1 ಬೌಲರ್ ಆಗಿದ್ದಾರೆ, ಇನ್ನೂ ಇಶಾಂತ್ ಶರ್ಮಾ ಅವರು ವೃತ್ತಿ ಕ್ರಿಕೆಟ್ ಜೀವನದಲ್ಲಿ ತಾವೂ ಕ್ರಿಕೆಟ್ ಆಡಿದಂತೆ ಉತ್ತಮ ಸಾಧನೆ ಮಾಡಿದ್ದಾರೆ.ಈಗ ಫೈನಲ್ ಪಂದ್ಯದಲ್ಲಿ ನಾಲ್ಕನೇ ವೇಗದ ಬೌಲರ್ ನ್ನು ವಿರಾಟ್ ಕೊಹ್ಲಿ ನೇತೃತ್ವದ ತಂಡವು ಬಳಸುವ ಸಾಧ್ಯತೆ ಇದೆ ಎಂದು ಅಗರ್ಕರ್ ತಿಳಿಸಿದರು.


ಇದನ್ನೂ ಓದಿ: Whatsapp Fake Message: ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿರುವ ಈ ಲಿಂಕ್ ಅನ್ನು ಮರೆತೂ ಕೂಡ ಕ್ಲಿಕ್ ಮಾಡಬೇಡಿ


"ಆದ್ದರಿಂದ, ಆ ಮೂವರು ಖಂಡಿತವಾಗಿಯೂ ಇರುತ್ತಾರೆ ಮತ್ತು ಅದು ಹಸಿರು ಪಿಚ್ ವಿಕೆಟ್ ಆಗಿದ್ದರೆ, ನೀವು ನಾಲ್ಕನೇ ಬೌಲರ್ ನ್ನು ಇಳಿಸಬಹುದು,ಆದರೆ ಪರಿಸ್ಥಿತಿಗಳು ಏನೆಂದು ನಮಗೆ ಇನ್ನೂ ತಿಳಿದಿಲ್ಲ, ಆದರೆ ನಾವು ಇಂಗ್ಲೆಂಡ್ ನಲ್ಲಿ ಇದನ್ನೂ ನಾವು ನಿರೀಕ್ಷಿಸಬಹುದು.ಜೂನ್ ತಿಂಗಳಲ್ಲಿ ಪಿಚ್ ಒಣಗಿರುವುದರಿಂದಾಗಿ ಆಗ ವೇಗದ ಬೌಲರ್ ಗಳಿಗೆ ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.


ಟೀಮ್ ಇಂಡಿಯಾ ಬಹುಶಃ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರೊಂದಿಗೆ ಮೂರು ವೇಗದ ಬೌಲರ್‌ಗಳೊಂದಿಗೆ ಆಡಲಿದೆ ಎನ್ನಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ