ರಾಷ್ಟ್ರೀಯ ಕ್ರಿಕೆಟ್ ಆಯ್ಕೆದಾರರ ಹುದ್ದೆಗೆ ಅಜಿತ್ ಅಗರ್ಕರ್ ಅರ್ಜಿ

ಭಾರತದ ಮಾಜಿ ವೇಗಿ ಅಜಿತ್ ಅಗರ್ಕರ್ ಅವರು ಶುಕ್ರವಾರ ರಾಷ್ಟ್ರೀಯ ಆಯ್ಕೆದಾರರ ಹುದ್ದೆ ಸ್ಪರ್ಧೆಗೆ ಪ್ರವೇಶಿಸಿದ್ದು, ಈಗ ಅಧ್ಯಕ್ಷರ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ.ರಾಷ್ಟ್ರೀಯ ಆಯ್ಕೆ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ಅಗರ್ಕರ್ ಪಿಟಿಐಗೆ ಖಚಿತಪಡಿಸಿದ್ದಾರೆ.

Updated: Jan 24, 2020 , 11:33 PM IST
ರಾಷ್ಟ್ರೀಯ ಕ್ರಿಕೆಟ್ ಆಯ್ಕೆದಾರರ ಹುದ್ದೆಗೆ ಅಜಿತ್ ಅಗರ್ಕರ್ ಅರ್ಜಿ
file photo

ನವದೆಹಲಿ: ಭಾರತದ ಮಾಜಿ ವೇಗಿ ಅಜಿತ್ ಅಗರ್ಕರ್ ಅವರು ಶುಕ್ರವಾರ ರಾಷ್ಟ್ರೀಯ ಆಯ್ಕೆದಾರರ ಹುದ್ದೆ ಸ್ಪರ್ಧೆಗೆ ಪ್ರವೇಶಿಸಿದ್ದು, ಈಗ ಅಧ್ಯಕ್ಷರ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ.ರಾಷ್ಟ್ರೀಯ ಆಯ್ಕೆ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ಅಗರ್ಕರ್ ಪಿಟಿಐಗೆ ಖಚಿತಪಡಿಸಿದ್ದಾರೆ.

ಬಿಸಿಸಿಐ ಜನವರಿ 24 ರಂದು ಅರ್ಜಿಗಳನ್ನು ಕಳುಹಿಸುವ ಗಡುವನ್ನು ನಿಗದಿಪಡಿಸಿದೆ, 42 ವರ್ಷದ ಅಗರ್ಕರ್ 26 ಟೆಸ್ಟ್, 191 ಏಕದಿನ ಮತ್ತು 3 ಟಿ 20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 349 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಗರ್ಕರ್ (288 ) ಏಕದಿನ ಪಂದ್ಯಗಳಲ್ಲಿ ಅನಿಲ್ ಕುಂಬ್ಳೆ (334 ವಿಕೆಟ್) ಮತ್ತು ಜಾವಗಲ್ ಶ್ರೀನಾಥ್ (315 ವಿಕೆಟ್) ನಂತರ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಆಟಗಾರರಾಗಿದ್ದಾರೆ.ಅವರ ಅವಧಿಯಲ್ಲಿ ಅತಿ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಅಗರ್ಕರ್ ಕೇವಲ 23 ಪಂದ್ಯಗಳಲ್ಲಿ 50 ವಿಕೆಟ್‌ಗಳನ್ನು ಗಳಿಸಿದ ಸಾಧನೆ ಮಾಡಿದರು.

'ಅಜಿತ್ ಅವರು ಚುನಾವಣಾ ಕಣಕ್ಕೆ ಇಳಿಯುವುದು ಒಂದು ಕುತೂಹಲಕಾರಿ ಬೆಳವಣಿಗೆಯಾಗಿದೆ. ಅವರು ಅರ್ಜಿ ಸಲ್ಲಿಸುವ ಮೊದಲು ಸಾಕಷ್ಟು ಚಿಂತನೆ ನಡೆಸುತ್ತಿದ್ದರು. ಆಯ್ಕೆದಾರರ ಅಧ್ಯಕ್ಷರಾಗಿ ಶಿವ ಅವರ ನಾಮನಿರ್ದೇಶನವನ್ನು ನೀಡಲಾಗಿದೆ ಎಂದು ಯಾರಾದರೂ ಭಾವಿಸಿದರೆ ಈಗ ಈ ವಿಚಾರವಾಗಿ ಮತ್ತೆ ಯೋಚಿಸಲಾಗುವುದು. ಎಲ್ಲರೂ ಶಾರ್ಟ್-ಲಿಸ್ಟ್ ಆಗಿರುವುದನ್ನು ನೋಡಿ ಇದು ತುಂಬಾ ಆಸಕ್ತಿದಾಯಕ ಎನಿಸಿದೆ "ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.

ರಾಷ್ತ್ರೀಯ ಆಯ್ಕೆದಾರ ಹುದ್ದೆಗೆ ಈ ಕೆಳಗಿನ ಆಟಗಾರರು ಇದುವರೆಗೆ ಅರ್ಜಿ ಸಲ್ಲಿಸಿದ್ದಾರೆ:

ಅಜಿತ್ ಅಗರ್ಕರ್ (ಮುಂಬೈ), ಚೇತನ್ ಶರ್ಮಾ (ಹರಿಯಾಣ), ನಯನ್ ಮೊಂಗಿಯಾ (ಬರೋಡಾ), ಲಕ್ಷ್ಮಣ ಶಿವರಾಮಕೃಷ್ಣನ್ (ತಮಿಳುನಾಡು), ರಾಜೇಶ್ ಚೌಹಾನ್ (ಮಧ್ಯಪ್ರದೇಶ), ಅಮೀ ಖುರಾಸಿಯಾ (ಮಧ್ಯಪ್ರದೇಶ), ಜ್ಞಾನೇಂದ್ರ ಪಾಂಡೆ, ಪ್ರೀತಮ್ ಗಾಂಧೆ (ವಿದರ್ಭ)