ನವದೆಹಲಿ: ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ (Stuart Binny)  ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. 37 ವರ್ಷದ ಸ್ಟುವರ್ಟ್ ಬಿನ್ನಿ 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟಿ 20 ಪಂದ್ಯದಲ್ಲಿ 6 ಎಸೆತಗಳಲ್ಲಿ 5 ಸಿಕ್ಸರ್ ಬಾರಿಸಿ ದಾಖಲೆ ನಿರ್ಮಿಸಿದರು. 


COMMERCIAL BREAK
SCROLL TO CONTINUE READING

ಈ ಪಂದ್ಯವು ಬಿನ್ನಿಯ ವೃತ್ತಿಜೀವನದ ಕೊನೆಯ ಪಂದ್ಯ:
ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಎವಿನ್ ಲೂಯಿಸ್ ಓವರ್‌ನಲ್ಲಿ ಸ್ಟುವರ್ಟ್ ಬಿನ್ನಿ (Stuart Binny) ಸತತ 5 ಎಸೆತಗಳಲ್ಲಿ 5 ಸಿಕ್ಸರ್‌ಗಳನ್ನು ಹೊಡೆದರು. ಆದರೆ, ಕೊನೆಯ ಎಸೆತದಲ್ಲಿ ಅವರು ಸಿಕ್ಸರ್ ಹೊಡೆಯುವುದನ್ನು ತಪ್ಪಿಸಿದರು. ಸ್ಟುವರ್ಟ್ ಬಿನ್ನಿ ಆ ಓವರ್‌ನಲ್ಲಿ 32 ರನ್ ಬಿಟ್ಟುಕೊಟ್ಟರು, ಇದರಲ್ಲಿ 5 ಸಿಕ್ಸರ್‌ಗಳು, ಒಂದು ವೈಡ್ ಮತ್ತು ಒಂದು ಸಿಂಗಲ್ ಸೇರಿತ್ತು. ಸ್ಟುವರ್ಟ್ ಬಿನ್ನಿಗೆ, ಆ ಟಿ 20 ಪಂದ್ಯವು ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಕೊನೆಯ ಪಂದ್ಯವಾಗಿದೆ. ಇದರ ನಂತರ, ಹಾರ್ದಿಕ್ ಪಾಂಡ್ಯ ಆಗಮನದೊಂದಿಗೆ, ಸ್ಟುವರ್ಟ್ ಬಿನ್ನಿಯನ್ನು ಟೀಮ್ ಇಂಡಿಯಾದಿಂದ ಶಾಶ್ವತವಾಗಿ ಹೊರಗುಳಿದರು.


ಇದನ್ನೂ ಓದಿ- Avani Lekhara Wins Gold: ಭಾರತಕ್ಕೆ ಒಲಿದ ಮೊದಲ ಚಿನ್ನ, ಏರ್ ರೈಫಲ್ ಸ್ಟ್ಯಾಂಡಿಂಗ್ ಸ್ಪರ್ಧೆಯಲ್ಲಿ ದಾಖಲೆ ಬರೆದು ಚಿನ್ನ ಗೆದ್ದ Avani Lehara


ಏಕದಿನ ಪಂದ್ಯಗಳಲ್ಲಿ ಅತ್ಯುತ್ತಮ ಬೌಲಿಂಗ್ ದಾಖಲೆಯಲ್ಲಿ ಬಿನ್ನಿ ಹೆಸರು:
ಸ್ಟುವರ್ಟ್ ಬಿನ್ನಿ ಕೂಡ ಕೆಲವು ಪಂದ್ಯಗಳಲ್ಲಿ ಟೀಮ್ ಇಂಡಿಯಾ (Team India) ಪರ ಉತ್ತಮ ಪ್ರದರ್ಶನ ನೀಡಿದ್ದರು. 17 ಜೂನ್ 2014 ರಂದು, ಸ್ಟುವರ್ಟ್ ಬಿನ್ನಿ ಬಾಂಗ್ಲಾದೇಶ ವಿರುದ್ಧ ಮಿರ್ಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಕೇವಲ 4 ರನ್ ನೀಡಿ 6 ವಿಕೆಟ್ ಪಡೆದರು. ಇದು ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾದ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.


ಅನಿಲ್ ಕುಂಬ್ಳೆ ಎರಡನೇ ಸ್ಥಾನದಲ್ಲಿದ್ದಾರೆ:ಈ ಸಂದರ್ಭದಲ್ಲಿ, ಸ್ಟುವರ್ಟ್ ಬಿನ್ನಿ ನಂತರ, ಈ ವಿಷಯದಲ್ಲಿ ಭಾರತದ ಮಾಜಿ ನಾಯಕ ಮತ್ತು ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಎರಡನೇ ಸ್ಥಾನದಲ್ಲಿದ್ದಾರೆ. ಅನಿಲ್ ಕುಂಬ್ಳೆ, 'ಜಂಬೋ' ಎಂದೇ ಪ್ರಸಿದ್ಧರಾಗಿದ್ದರು, 1993 ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 12 ರನ್ ನೀಡಿ 6 ವಿಕೆಟ್ ಪಡೆದರು.


ಇದನ್ನೂ ಓದಿ- ಭಾರತದ ಬ್ಯಾಟಿಂಗ್ ಕ್ರಮಾಂಕ ಬಲಪಡಿಸಲು ವೆಂಗ್ ಸರ್ಕಾರ್ ಕೊಟ್ಟ ಸಲಹೆ ಏನು ಗೊತ್ತಾ?


ಸ್ಟುವರ್ಟ್ ಬಿನ್ನಿ ದಾಖಲೆಗಳು:
1983 ರ ವಿಶ್ವಕಪ್ ವಿಜೇತ ಭಾರತೀಯ ತಂಡದ ಸದಸ್ಯರಾಗಿದ್ದ ರೋಜರ್ ಬಿನ್ನಿ ಅವರ ಪುತ್ರ ಸ್ಟುವರ್ಟ್ ಬಿನ್ನಿ ಭಾರತಕ್ಕಾಗಿ 6 ​​ಟೆಸ್ಟ್, 14 ಏಕದಿನ ಮತ್ತು 3 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಸ್ಟುವರ್ಟ್ ಬಿನ್ನಿ ಟೆಸ್ಟ್ ಕ್ರಿಕೆಟ್ ನಲ್ಲಿ 194 ರನ್ ಮತ್ತು 3 ವಿಕೆಟ್, ಏಕದಿನ ಪಂದ್ಯದಲ್ಲಿ 230 ರನ್ ಮತ್ತು 20 ವಿಕೆಟ್ ಗಳನ್ನು, ಟಿ 20 ಯಲ್ಲಿ 35 ರನ್ ಮತ್ತು 1 ವಿಕೆಟ್ ಗಳ ದಾಖಲೆ ಹೊಂದಿದ್ದಾರೆ. ಬಿನ್ನಿ 95 ಪ್ರಥಮ ದರ್ಜೆ ಪಂದ್ಯಗಳಲ್ಲಿ 4 ಸಾವಿರದ 796 ರನ್ ಗಳಿಸಿದ್ದಾರೆ ಮತ್ತು 148 ವಿಕೆಟ್ ಪಡೆದಿದ್ದಾರೆ. 100 ಲಿಸ್ಟ್ ಎ ಪಂದ್ಯಗಳಲ್ಲಿ 1788 ರನ್ ಗಳಿಸಿದ್ದಲ್ಲದೆ, ಅವರು 99 ವಿಕೆಟ್ ಗಳಿಸಿದರು.


ಸ್ಟುವರ್ಟ್ ಬಿನ್ನಿ 2014 ರಲ್ಲಿ ಇಂಗ್ಲೆಂಡ್ ವಿರುದ್ಧ ಮತ್ತು 2014 ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಐಪಿಎಲ್ ಬಗ್ಗೆ ಹೇಳುವುದಾದರೆ, ಅವರು ಒಟ್ಟು 95 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು ಒಟ್ಟು 880 ರನ್ ಗಳಿಸಲಾಗಿದೆ. ಇದಲ್ಲದೇ, ಅವರು ಬೌಲಿಂಗ್‌ನಲ್ಲಿ 22 ವಿಕೆಟ್ ಪಡೆದಿದ್ದಾರೆ. ಅವರು 2019 ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಆಡಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.