Avani Lekhara Wins Gold: ಭಾರತಕ್ಕೆ ಒಲಿದ ಮೊದಲ ಚಿನ್ನ, ಏರ್ ರೈಫಲ್ ಸ್ಟ್ಯಾಂಡಿಂಗ್ ಸ್ಪರ್ಧೆಯಲ್ಲಿ ದಾಖಲೆ ಬರೆದು ಚಿನ್ನ ಗೆದ್ದ Avani Lehara

Avani Lekhara Wins Gold:ಭಾರತದ ಪ್ಯಾರಾ ಶೂಟರ್ ಅವನಿ ಲೇಖಾರಾ ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಸ್ಪರ್ಧೆಯಲ್ಲಿ ಅವನಿ, ಪ್ಯಾರಾಲಿಂಪಿಕ್ ದಾಖಲೆ ನಿರ್ಮಿಸಿ ಚಿನ್ನಕ್ಕೆ (Gold Medal) ಮುತ್ತಿಕ್ಕಿದ್ದಾರೆ.

Written by - Nitin Tabib | Last Updated : Aug 30, 2021, 10:39 AM IST
  • ಟೋಕಿಯೋ ಪ್ಯಾರಾಲಂಪಿಕ್ ಸ್ಪರ್ಧೆಯಲ್ಲಿ ಭಾರತಕ್ಕೆ ಒಲಿದ ಮೊದಲ ಚಿನ್ನ.
  • 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ದಾಖೆಯ ಆಟ ಪ್ರದರ್ಶಿಸಿದ ಅವನಿ ಲೇಖರಾ
  • ಫೈನಲ್ ಪಂದ್ಯದಲ್ಲಿ ಚೀನಾದ ಸಿ ಜಾಂಗ್ ರನ್ನು ಸೋಲಿಸಿ ಚಿನ್ನಕ್ಕೆ ಮುತ್ತಿಕ್ಕಿದ ಅವನಿ ಲೇಖರಾ.
Avani Lekhara Wins Gold: ಭಾರತಕ್ಕೆ ಒಲಿದ ಮೊದಲ ಚಿನ್ನ, ಏರ್ ರೈಫಲ್ ಸ್ಟ್ಯಾಂಡಿಂಗ್ ಸ್ಪರ್ಧೆಯಲ್ಲಿ ದಾಖಲೆ ಬರೆದು ಚಿನ್ನ ಗೆದ್ದ Avani Lehara title=
Avani Lekhara Wins Gold (Photo Courtesy-Twitter)

Avani Lekhara Wins Gold: ಭಾರತೀಯ ಪ್ಯಾರಾ ಶೂಟರ್ (Indian Para Shooter) ಅವನಿ ಲೇಖಾರಾ ( Avani Lekhara) ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ (Tokyo Paralympics 2020) ಇತಿಹಾಸ ರಚಿಸಿದ್ದಾರೆ.  10 ಮೀಟರ್ ರ್ ರೈಫಲ್ ಸ್ಟ್ಯಾಂಡಿಂಗ್ SH1 ಸ್ಪರ್ಧೆಯಲ್ಲಿ ಅವನಿ ಹೊಸ ಪ್ಯಾರಾಲಿಂಪಿಕ್ ದಾಖಲೆಯನ್ನು ನಿರ್ಮಿಸಿದ್ದಾರೆ. ಅವನಿ ಒಟ್ಟು 249.6 ಸ್ಕೋರ್ ಮಾಡಿದ್ದು,  ಇದು ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಹೊಸ ದಾಖಲೆಯಾಗಿದೆ. ಈ ಸ್ಪರ್ಧೆಯಲ್ಲಿ ಚೀನಾದ ಸಿ ಜಾಂಗ್  (248.9 ಪಾಯಿಂಟ್ಸ್) ಬೆಳ್ಳಿ ಪದಕ ಗೆದ್ದರೆ, ಉಕ್ರೇನ್ ನ ಇರಿನಾ ಸ್ಕೆಟ್ನಿಕ್ (227.5 ಅಂಕ) ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಇದು ಭಾರತದ ಮೊದಲ ಚಿನ್ನದ (Gold Medal) ಪದಕವಾಗಿದ್ದು, ಇದಕ್ಕೂ ಮುನ್ನ ಭಾರತೀಯ ಕ್ರೀಡಾಪಟುಗಳು ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.

ಇದಕ್ಕೂ ಮೊದಲು ಈ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಅವನಿ ಏಳನೇ ಸ್ಥಾನ ಪಡೆದಿದ್ದರು. ಅವರು ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಚಿನ್ನವನ್ನು ತನ್ನದಾಗಿಸಿಕೊಂಡಿದ್ದಾರೆ. ಇದರೊಂದಿಗೆ, ಇದು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಂದ ಮೂರನೇ ಪದಕ ಇದಾಗಿದೆ. ಈ ಹಿಂದೆ ನಿಶಾದ್ ಕುಮಾರ್ ಎತ್ತರ ಜಿಗಿತದಲ್ಲಿ ಮತ್ತು ಭಾವಿನ ಪಟೇಲ್ ಟೇಬಲ್ ಟೆನಿಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಭಾರತದ ಇನ್ನೊಬ್ಬ ಪ್ಯಾರಾ-ಅಥ್ಲೀಟ್ ವಿನೋದ್ ಕುಮಾರ್, F52 ಡಿಸ್ಕ್ ಥ್ರೋ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ, ಆದರೆ ಪ್ರಸ್ತುತ ಅವರ ಫಲಿತಾಂಶವನ್ನು ತಡೆಹಿಡಿಯಲಾಗಿದೆ.

ಇದನ್ನೂ ಓದಿ-ಪ್ಯಾರಾಲಿಂಪಿಕ್ ಬೆಳ್ಳಿ ಪದಕ ವಿಜೇತೆ ಭಾವಿನಾ ಪಟೇಲ್ ಗೆ 3 ಕೋಟಿ ರೂ.ಬಹುಮಾನ ಘೋಷಿಸಿದ ಗುಜರಾತ್

ಚೀನಾ ಆಟಗಾರ್ತಿಯಿಂದ ಭಾರಿ ಪೈಪೋಟಿ 
ಒಟ್ಟು  ಒಂಬತ್ತು ಸುತ್ತಿನ ಫೈನಲ್ ಪಂದ್ಯದಲ್ಲಿ, ಅವನಿ ಚೀನಾದ ಅಥ್ಲೀಟ್ ಸಿ ಜಾಂಗ್ ಅವರಿಂದ ಕಠಿಣ ಸ್ಪರ್ಧೆಯನ್ನು ಎದುರಿಸಿದ್ದಾರೆ.  ಜಾಂಗ್ ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದರು ಮತ್ತು ಈ ಪಂದ್ಯದಲ್ಲಿ ಚಿನ್ನಕ್ಕಾಗಿ ಪ್ರಬಲ ಸ್ಪರ್ಧಿಯಾಗಿದ್ದರು. ಆದರೂ ಕೂಡ ಅವನಿ  ತನ್ನ ದೋಷರಹಿತ ಅಂಕಗಳ ಆಧಾರದ ಮೇಲೆ ಜಾಂಗ್‌ ಅವರನ್ನು ಸೋಲಿಸಿದ್ದಾರೆ ಮತ್ತು ತನ್ನ ಹೆಸರಿಗೆ ಚಿನ್ನದ ಪದಕ ( Avani Lekhara Wins Gold) ಬರೆಸಿಕೊಂಡಿದ್ದಾರೆ.. ಅವನಿ ಒಂಬತ್ತು ಸುತ್ತುಗಳಲ್ಲಿ ಒಟ್ಟು 249.6 ಅಂಕಗಳನ್ನು (52.0, 51.3, 21.6, 20.8, 21.2, 20.9, 21.2, 20.1, 20.5) ಗಳಿಸಿದ್ದಾರೆ, ಇದು ಪ್ಯಾರಾಲಿಂಪಿಕ್ ಕ್ರೀಡಾಕೂಟದ ಹೊಸ ದಾಖಲೆಯಾಗಿದೆ.

ಇದನ್ನೂ ಓದಿ-ಭಾರತದ ಬ್ಯಾಟಿಂಗ್ ಕ್ರಮಾಂಕ ಬಲಪಡಿಸಲು ವೆಂಗ್ ಸರ್ಕಾರ್ ಕೊಟ್ಟ ಸಲಹೆ ಏನು ಗೊತ್ತಾ?

ತನ್ನ 11 ನೇ ವಯಸ್ಸಿನಲ್ಲಿ ಅವನಿ ರಸ್ತೆ ಅಪಘಾತಕ್ಕೆ ಗುರಿಯಾಗಿದ್ದರು
ರಾಜಸ್ಥಾನದ ಜೈಪುರ್ ನಿವಾಸಿಯಾಗಿರುವ ಅವನಿ, ತನ್ನ 11 ನೇ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಈ ಅಪಘಾತದ ಬಳಿಕ ಸ್ಪೈನಲ್ ಕಾರ್ಡ್ ಗೆ ಭಾರಿ ಪೆಟ್ಟು ಬಿದ್ದ ಕಾರಣ ಅವನಿ  ಪ್ಯಾರಲೈಸ್ ಆಗಿದ್ದಾರೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್  SH1 (10m AR Standing Final) ಸ್ಪರ್ಧೆಯಲ್ಲಿ ಅವನಿ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ-Tokyo Paralympics: ಡಿಸ್ಕಸ್ ಥ್ರೋ ನಲ್ಲಿ ವಿನೋದ್ ಕುಮಾರ್ ಗೆ ಕಂಚು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News