Ambati Rayudu announces retirement from IPL : ಐಪಿಎಲ್ 2022 ರ ನಡುವೆ, ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಒಂದು ಬಿಗ್ ಶಾಕ್ ಹೊರಬಿದ್ದಿದೆ. ಚೆನ್ನೈ ಸೂಪರ್ ಕಿಂಗ್ಸ್‌ನ ಹಿರಿಯ ಆಟಗಾರನೊಬ್ಬ ಐಪಿಎಲ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಸೀಸನ್ ನಂತರ, ಈ ಆಟಗಾರನು ಐಪಿಎಲ್‌ನಲ್ಲಿ ಆಡುವುದಿಲ್ಲ ಎಂದು ಹೇಳಿ, ಸ್ವಲ್ಪ ಸಮಯದ ನಂತರ ಅವರು ಮಾಡಿದ್ದ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಈ ಆಟಗಾರ ತನ್ನ ಬ್ಯಾಟಿಂಗ್ ಆಧಾರದ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಐಪಿಎಲ್‌ನ ಚಾಂಪಿಯನ್‌ ಮಾಡುವಲ್ಲಿ ಇವರ ಕೈವಾಡವಿದೆ.


COMMERCIAL BREAK
SCROLL TO CONTINUE READING

ನಿವೃತ್ತಿ ಘೋಷಿಸಿದ ಈ ಆಟಗಾರ 


ಚೆನ್ನೈ ಸೂಪರ್ ಕಿಂಗ್ಸ್‌ನ ಭರ್ಜರಿ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಐಪಿಎಲ್‌ ಮಧ್ಯದಲ್ಲಿ ಶನಿವಾರ ನಿವೃತ್ತಿ ಘೋಷಿಸಿದ್ದರು, ಆದರೆ ಸ್ವಲ್ಪ ಸಮಯದ ನಂತರ ಅವರು ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಅಂಬಟಿ ರಾಯುಡು ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿ ಘೋಷಿಸಿದ್ದಾರೆ. ಟ್ವೀಟ್‌ನಲ್ಲಿ ಬರೆದುಕೊಂಡಿರುವ ಅವರು, 'ಐಪಿಎಲ್ ಸೀಸನ್‌ನಲ್ಲಿ ಇದು ಕೊನೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಲೀಗ್‌ನಲ್ಲಿ ಆಡುವುದು ನನಗೆ ಅತ್ಯುತ್ತಮವಾಗಿದೆ. ನಾನು 13 ವರ್ಷಗಳಿಂದ ಎರಡು ದೊಡ್ಡ ತಂಡಗಳ ಭಾಗವಾಗಿದ್ದೇನೆ. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ಭಾಗವಾಗಿರುವುದು ಅದ್ಭುತ ಪ್ರಯಾಣವಾಗಿತ್ತು. ಇದಕ್ಕಾಗಿ ಅವರಿಗೆ ಧನ್ಯವಾದಗಳು. ಅಂಬಟಿ ರಾಯುಡು ಐಪಿಎಲ್ 2022 ರಲ್ಲಿ ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ 27.10 ಸರಾಸರಿಯಲ್ಲಿ 271 ರನ್ ಗಳಿಸಿದ್ದಾರೆ. ಈ ಋತುವಿನಲ್ಲಿ, ಅವರ ಬ್ಯಾಟ್‌ನಿಂದ ಒಂದು ಅರ್ಧ ಶತಕ ಬಂದಿದೆ.


ಇದನ್ನೂ ಓದಿ : SRH vs KKR: ಇಂದು ಕೊಲ್ಕತ್ತಾಗೆ ಹೈದರಾಬಾದ್‌ ಸವಾಲು: ಇಲ್ಲಿದೆ ಸಂಭಾವ್ಯ ಆಟಗಾರರ ಪಟ್ಟಿ


ರಾಯುಡು ಮಾಡಿದ ಟ್ವೀಟ್ ಇಲ್ಲಿದೆ ನೋಡಿ


ಅಂಬಟಿ ರಾಯುಡು 2010 ರಲ್ಲಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಂಬಟಿ ರಾಯುಡು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜೊತೆಗೆ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದಾರೆ. ರಾಯುಡು 2018 ರಿಂದ ಸಿಎಸ್‌ಕೆ ಪರ ಆಡುತ್ತಿದ್ದಾರೆ. ಅಂಬಟಿ ರಾಯುಡು ಐಪಿಎಲ್‌ನಲ್ಲಿ 187 ಪಂದ್ಯಗಳಲ್ಲಿ 29.28 ಸರಾಸರಿಯಲ್ಲಿ 4187 ರನ್ ಗಳಿಸಿದ್ದಾರೆ. ರಾಯುಡು ಐಪಿಎಲ್‌ನಲ್ಲಿ 22 ಅರ್ಧಶತಕ ಹಾಗೂ 2 ಶತಕ ಸಿಡಿಸಿದ್ದಾರೆ.


ಇದನ್ನೂ ಓದಿ : RCB vs PBKS, IPL 2022: ಆರ್‌ಸಿಬಿ ಮಣಿಸಿದ ಪಂಜಾಬ್ ಪ್ಲೇ ಆಫ್ ಕನಸು ಜೀವಂತ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.