ಇನ್ಮುಂದೆ RCBಗೆ ಜಿಂಬಾಬ್ವೆಯ ಮಾಜಿ ಆಟಗಾರ ನೂತನ ಹೆಡ್’ಕೋಚ್! ಹೊಸ ಪರ್ವದಲ್ಲಿ “ಈ ಸಲ ಕಪ್ ನಮ್ದೇ…”
RCB New Head coach Andy Flower: ಜಿಂಬಾಬ್ವೆಯ ಮಾಜಿ ದಂತ ಕಥೆ ಆಂಡಿ ಫ್ಲವರ್ ಆರ್’ಸಿಬಿಗಿಂತ ಮೊದಲು ಐಪಿಎಲ್’ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿದ್ದರು. ಫ್ಲವರ್ ಅವರ ಕೋಚಿಂಗ್ ವೃತ್ತಿಜೀವನವು ಉತ್ತಮವಾಗಿದೆ
RCB New Head coach Andy Flower: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ತಂಡಕ್ಕೆ ಹೊಸ ಮುಖ್ಯ ಕೋಚ್ ಅನ್ನು ಆಯ್ಕೆ ಮಾಡಿದೆ. ಸಂಜಯ್ ಬಂಗಾರ್ ಬದಲಿಗೆ ಆರ್’ಸಿಬಿ ಆಂಡಿ ಫ್ಲವರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದೆ. ಆಂಡಿ ಫ್ಲವರ್ ಅವರ ಇದುವರೆಗಿನ ಕೋಚಿಂಗ್ ವೃತ್ತಿಜೀವನವು ಅತ್ಯುತ್ತಮವಾಗಿದ್ದು, ಐಪಿಎಲ್ ಜೊತೆಗೆ, ಪಾಕಿಸ್ತಾನ ಸೂಪರ್ ಲೀಗ್, ಇಂಟರ್ನ್ಯಾಷನಲ್ ಲೀಗ್ ಟಿ 20, ದಿ ಹಂಡ್ರೆಡ್ ಮತ್ತು ಅಬುಧಾಬಿ ಟಿ 10 ತಂಡಗಳಿಗೆ ತರಬೇತುದಾರರಾಗಿದ್ದಾರೆ. ಆರ್’ಸಿಬಿ ಜತೆ ಬಂಗಾರ್ ಒಪ್ಪಂದ ಅಂತ್ಯಗೊಂಡಿದ್ದು, ಇವರೊಂದಿಗೆ ಮೈಕ್ ಹೆಸ್ಸನ್ ಕೂಡ ತಂಡಕ್ಕೆ ವಿದಾಯ ಹೇಳಿದ್ದಾರೆ.
ಇದನ್ನೂ ಓದಿ: 3 ಎಸೆತಕ್ಕೆ 2 ವಿಕೆಟ್ ಉಡೀಸ್..! 186 ದಿನಗಳ ಬಳಿಕ T20ಗೆ ಎಂಟ್ರಿಕೊಟ್ಟು ಅಬ್ಬರಿಸಿದ Team Indiaದ ಸ್ಪಿನ್ ಬೌಲರ್!
ಜಿಂಬಾಬ್ವೆಯ ಮಾಜಿ ದಂತ ಕಥೆ ಆಂಡಿ ಫ್ಲವರ್ ಆರ್’ಸಿಬಿಗಿಂತ ಮೊದಲು ಐಪಿಎಲ್’ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿದ್ದರು. ಫ್ಲವರ್ ಅವರ ಕೋಚಿಂಗ್ ವೃತ್ತಿಜೀವನವು ಉತ್ತಮವಾಗಿದೆ. 2007 ರಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿದ್ದ ಆಂಡಿ, ನಂತರ ಅನೇಕ ತಂಡಗಳನ್ನು ಸೇರಿಕೊಂಡರು. ಪಿಎಸ್‌ಎಲ್ ತಂಡದ ಪೇಶಾವರ್ ಝಲ್ಮಿಯ ಬ್ಯಾಟಿಂಗ್ ಕೋಚ್, ಮುಲ್ತಾನ್ ಸುಲ್ತಾನ್ಸ್ ಮುಖ್ಯ ಕೋಚ್, ಐಪಿಎಲ್ ತಂಡ ಪಂಜಾಬ್ ಕಿಂಗ್ಸ್‌ನ ಸಹಾಯಕ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಆ ಬಳಿಕ 2021 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮುಖ್ಯ ಕೋಚ್ ಜವಾಬ್ದಾರಿಯನ್ನು ಫ್ಲವರ್’ಗೆ ವಹಿಸಿದ್ದರು.
ಇದನ್ನೂ ಓದಿ: Heaviest Bat: ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ತೂಕದ ಬ್ಯಾಟ್ ಹಿಡಿದಿದ್ದು ಯಾರು? ಅಗ್ರ 5ರಲ್ಲಿ ಮೂವರು ಭಾರತೀಯರೇ
ಆರ್’ಸಿಬಿ ಟ್ವಿಟರ್ ಮೂಲಕ ಈ ಮಾಹಿತಿ ನೀಡಿದೆ. ಐಸಿಸಿ ಟಿ20 ವಿಶ್ವಕಪ್ ವಿಜೇತ ಕೋಚ್ ಆಂಡಿ ಫ್ಲವರ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ಮಾಡಲಾಗಿದೆ ಎಂದು ತಂಡ ಟ್ವೀಟ್ ಮಾಡಿದೆ. ಐಸಿಸಿ ಹಾಲ್ ಆಫ್ ಫೇಮ್’ನಲ್ಲಿರುವ ಫೋಟೋವನ್ನು ಶೇರ್ ಮಾಡಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ