IND vs WI 1st T20, Yuzvendra Chahal: ಭಾರತ ತಂಡ ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ. ಸದ್ಯ ಉಭಯ ತಂಡಗಳ ನಡುವೆ ಟಿ20 ಸರಣಿ ನಡೆಯುತ್ತಿದೆ. ಸರಣಿಯ ಆರಂಭಿಕ ಟಿ20 ಪಂದ್ಯದಲ್ಲಿ ಭಾರತದ ದಿಗ್ಗಜ ಆಟಗಾರ ಸಂಚಲನ ಮೂಡಿಸಿದ್ದಾರೆ. ಟ್ರಿನಿಡಾಡ್ನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ಈ ಬೌಲರ್ 3 ಎಸೆತಗಳಲ್ಲಿ 2 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: “ಕೊಹ್ಲಿಯಿಂದಲೇ ಅಂತ್ಯ ಕಂಡಿತ್ತು ಜಹೀರ್ ಖಾನ್ ವೃತ್ತಿಜೀವನ”: ಈ ಅನುಭವಿ ಹೇಳಿಕೆಗೆ ಕ್ರಿಕೆಟ್ ಲೋಕದಲ್ಲಿ ತಲ್ಲಣ
ಟಾಸ್ ಗೆದ್ದ ವಿಂಡೀಸ್ ತಂಡ:
ಸರಣಿಯ ಮೊದಲ ಪಂದ್ಯದಲ್ಲಿ ವಿಂಡೀಸ್ ತಂಡದ ನಾಯಕ ರೋವ್ಮನ್ ಪೊವೆಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಗೆದ್ದ ಭಾರತ ತಂಡ, ಇದೀಗ ವೆಸ್ಟ್ ಇಂಡೀಸ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ.
ಈ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಮ್ಮ ಮೊದಲ ಓವರ್ನಲ್ಲಿ ಸಖತ್ ಬೌಲಿಂಗ್ ಮಾಡಿದ್ದಾರೆ. ಇನಿಂಗ್ಸ್ನ 5ನೇ ಓವರ್’ಗೆ ಹಾರ್ದಿಕ್ ಪಾಂಡ್ಯ ಚೆಂಡನ್ನು ಚಹಾಲ್’ಗೆ ನೀಡಿದರು. ಆ ಓವರ್’ನ ಮೊದಲ ಎಸೆತದಲ್ಲಿಯೇ ಚಾಹಲ್ ಕೈಲ್ ಮೇಯರ್ಸ್ಗೆ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು 29 ರನ್ ಗಳಿಸಿದ್ದಾಗ ವಿಂಡೀಸ್ ತಂಡದ ಮೊದಲ ವಿಕೆಟ್ ಪತನವಾಯಿತು. ನಂತರ ಚಾರ್ಲ್ಸ್ ಮುಂದಿನ ಎಸೆತದಲ್ಲಿ ಸಿಂಗಲ್ ಗಳಿಸಿದರು. ಆದರೆ ಬ್ರೆಂಡನ್ ಕಿಂಗ್ (28) ಮೂರನೇ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಔಟಾದರು. ಕಿಂಗ್ DRS ತೆಗೆದುಕೊಂಡರೂ ಸಹ, ನಿರ್ಧಾರವು ಚಹಾಲ್ ಪರವಾಗಿತ್ತು. ಈ ಮೂಲಕ 3 ಎಸೆತಗಳಲ್ಲಿ 2 ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್’ಗಳಿಗೆ ಚಾಹಲ್ ಪೆವಿಲಿಯನ್ ಹಾದಿ ತೋರಿಸಿದರು.
ಇದನ್ನೂ ಓದಿ: 1 ವರ್ಷದ ಬಳಿಕ ಈ ರಾಶಿಯ ಬಾಳಲ್ಲಿ ಭಾಗ್ಯೋದಯ: ಅಪಾರ ಧನಸಂಪತ್ತು ಪ್ರಾಪ್ತಿ, ಸುಖ-ಸಮೃದ್ಧಿ ಕರುಣಿಸುವ ಬುಧ!
186 ದಿನಗಳ ನಂತರ ಟಿ20 ತಂಡಕ್ಕೆ ಪ್ರವೇಶ:
ಚಹಾಲ್ 186 ದಿನಗಳ ನಂತರ ಭಾರತದ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೊದಲು ತಮ್ಮ ಕೊನೆಯ T20 ಪಂದ್ಯವನ್ನು 29 ಜನವರಿ 2023 ರಂದು ಲಕ್ನೋದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದರು. ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದರಿಂದ ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ಆಡದಿದ್ದರೂ ವಿಂಡೀಸ್ ಪ್ರವಾಸದಲ್ಲಿ ಅವರಿಗೆ ಅವಕಾಶ ನೀಡಲಾಯಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ