Anya Shrubsole Announced Retirement: ಇಂಗ್ಲೆಂಡ್‌ ನ ಮಾಜಿ ವೇಗದ ಬೌಲರ್ ಮತ್ತು ವಿಶ್ವಕಪ್ ವಿಜೇತೆ ಅನ್ಯಾ ಶ್ರುಬ್ಸೋಲ್ ಅವರು ವೃತ್ತಿಪರ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ್ದಾರೆ. ಷಾರ್ಲೆಟ್ ಎಡ್ವರ್ಡ್ಸ್ ಕಪ್‌ ನ ಫೈನಲ್‌ ನಲ್ಲಿ ಗೆದ್ದ ನಂತರ ಅನ್ಯಾ ಶ್ರಬ್‌ಸೋಲ್ ನಿವೃತ್ತರಾಗಲು ನಿರ್ಧರಿಸಿದ್ದಾರೆ. ಈ ಅಂತಿಮ ಪಂದ್ಯದಲ್ಲಿ, ಅವರ ತಂಡವು ಫೈನಲ್‌ ನಲ್ಲಿ ದಿ ಬ್ಲೇಜ್ ಅನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವೇಗದ ಬೌಲರ್ ಅನ್ಯಾ ಶ್ರುಬ್ಸೋಲ್ ಕಳೆದ ವರ್ಷವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಲರ್‌ ಫುಲ್‌ ಬಿಕಿನಿಯಲ್ಲಿ ಸಾಕ್ಷಿ ಮಲಿಕ್‌-ಪೋಟೋಸ್‌ ನೋಡಿ


ಅನ್ಯಾ ಶ್ರುಬ್ಸೋಲ್ ಈ ವರ್ಷ ದಿ ಹಂಡ್ರೆಡ್‌ ನಲ್ಲಿ ಭಾಗವಹಿಸಲಿದ್ದಾರೆ. ಈ ಟೂರ್ನಿಯಲ್ಲಿ ಅವರು ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯವನ್ನು ಆಡಲಿದ್ದಾರೆ. ಅವರು 2004 ರಲ್ಲಿ ದೇಶೀಯ ಕ್ರಿಕೆಟ್ ಪ್ರಾರಂಭಿಸಿದರು. ಅನ್ಯಾ ಶ್ರುಬ್‌ಸೋಲ್ ಮಾತನಾಡಿ, “ಈ ಪಂದ್ಯಾವಳಿಯಲ್ಲಿ ನನ್ನ ಸಮಯ ಮುಗಿದಿದೆ ಎಂದು ನಾನು ಭಾವಿಸುತ್ತೇನೆ. ನಾನು ಆಟವಾಡುವುದನ್ನು ಮುಂದುವರಿಸಿದೆ, ಏಕೆಂದರೆ ಅದನ್ನು ನಾನು ನಿಜವಾಗಿಯೂ ಆನಂದಿಸುತ್ತೇನೆ. ಕಳೆದ ಕೆಲವು ಋತುಗಳಲ್ಲಿ ಈ ತಂಡದೊಂದಿಗೆ ಆಟವಾಡಲು ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ, ಏಕೆಂದರೆ ಅವರು ಅಸಾಮಾನ್ಯ ತಂಡ ಮತ್ತು ಅಸಾಧಾರಣ ಜನರ ಗುಂಪನ್ನು ಹೊಂದಿದೆ” ಎಂದು ಹೇಳಿದರು.


ಶ್ರಬ್‌ಸೋಲ್ 2009 ಮತ್ತು 2017 ರಲ್ಲಿ ಇಂಗ್ಲೆಂಡ್‌ ನ ವಿಶ್ವ ವಿಜೇತ ತಂಡದ ಭಾಗವಾಗಿದ್ದರು. 2017 ರಲ್ಲಿ, ಲಾರ್ಡ್ಸ್‌ ನಲ್ಲಿ ನಡೆದ ವಿಶ್ವಕಪ್ ಫೈನಲ್‌ ನಲ್ಲಿ ಭಾರತದ ವಿರುದ್ಧ 6 ವಿಕೆಟ್‌ ಗಳನ್ನು ಪಡೆಯುವ ಮೂಲಕ ಇಂಗ್ಲೆಂಡ್‌ ನ್ನು ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು 2022 ರ ಮಹಿಳಾ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. ಅವರು ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಫೈನಲ್‌ನಲ್ಲಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದ ಕೊನೆಯ ಪಂದ್ಯವನ್ನು ಆಡಿದರು.


ಇದನ್ನೂ ಓದಿ: ಮೋದಿ ಗೋಡ್ಸೆ ಭಕ್ತರನ್ನು ಹೊರಹಾಕಲಿ, ಇಲ್ಲವೇ ಗಾಂಧಿ ನಮನದ ನಾಟಕವನ್ನು ಕೊನೆಗೊಳಿಸಲಿ-ಕಾಂಗ್ರೆಸ್‌


ಅನ್ಯಾ ಶ್ರುಬ್‌ಸೋಲ್ ತನ್ನ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಇಂಗ್ಲೆಂಡ್‌ ಗಾಗಿ 8 ಟೆಸ್ಟ್ ಪಂದ್ಯಗಳಲ್ಲಿ 19 ವಿಕೆಟ್‌ ಗಳನ್ನು ಪಡೆದಿದ್ದಾರೆ. ರು 86 ODIಗಳಲ್ಲಿ ಇಂಗ್ಲೆಂಡ್ ಅನ್ನು ಪ್ರತಿನಿಧಿಸಿದ ಅವರು 106 ವಿಕೆಟ್ ಗಳನ್ನು ಪಡೆದಿದ್ದಾರೆ. ಅನ್ಯಾ ಶ್ರುಬ್ಸೋಲ್ 79 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ, 102 ವಿಕೆಟ್ಗಳನ್ನು ಪಡೆದರು. ಅಂತಾರಾಷ್ಟ್ರೀಯ ಟಿ20ಯಲ್ಲಿ 11 ರನ್‌ಗಳಿಗೆ 5 ವಿಕೆಟ್‌ ಕಬಳಿಸಿದ್ದು ಅವರ ಅತ್ಯುತ್ತಮ ಪ್ರದರ್ಶನ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ