W,W,W,W,W,W,W,W… 8 ವಿಕೆಟ್ ಕಬಳಿಸಿದ ಸೂಪರ್ ಯಂಗ್ ಬೌಲರ್: ಕ್ರಿಕೆಟ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ್ದು ಈತನೊಬ್ಬನೇ!
Arpit Guleria 8 Wickets: ವಿಜಯ್ ಹಜಾರೆ ಟ್ರೋಫಿಯ ಡಿ ಗುಂಪಿನ ಪಂದ್ಯದಲ್ಲಿ, ಅರ್ಪಿತ್ ಗುಲೇರಿಯಾ ತಮ್ಮ 9 ಓವರ್’ಗಳ ಕೋಟಾದಲ್ಲಿ 8 ಬ್ಯಾಟ್ಸ್‌ಮನ್’ಗಳನ್ನು ಏಕಾಂಗಿಯಾಗಿ ಔಟ್ ಮಾಡಿ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು.
Arpit Guleria 8 Wickets: ವಿಜಯ್ ಹಜಾರೆ ಟ್ರೋಫಿ 2023 ರಲ್ಲಿ ರೋಚಕ ಪಂದ್ಯವೊಂದು ನಡೆದಿದೆ. ಇದರಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತ್ ಮುಖಾಮುಖಿಯಾಗಿದ್ದು, ಹಿಮಾಚಲದ ಬೌಲರ್’ಗಳು ಗುಜರಾತ್ ತಂಡದ ಬ್ಯಾಟ್ಸ್‌ಮನ್’ಗಳನ್ನು ಸಾಕಷ್ಟು ಕಾಡಿದ್ದಾರೆ. ಅದರಲ್ಲೂ ಓರ್ವ ಬೌಲರ್ 8 ವಿಕೆಟ್ ಪಡೆದಿದ್ದಾನೆ.
ಇದನ್ನೂ ಓದಿ: ಹನ್ನೆರಡು ವರ್ಷಗಳ ಬಳಿಕ ಪವರ್ಫುಲ್ ರಾಜ ಲಕ್ಷಣ ರಾಜಯೋಗ ರಚನೆ, ಲಕ್ಷ್ಮಿ ಕೃಪೆಯಿಂದ ಈ ಜನರಿಗೆ ಸಾಹುಕಾರರಾಗುವ ಯೋಗ!
9 ಓವರ್’ಗಳಲ್ಲಿ 50 ರನ್ ನೀಡಿ 8 ವಿಕೆಟ್ ಪಡೆದ ಈ ಯುವ ಬೌಲರ್ ಹೆಸರು ಅರ್ಪಿತ್ ಗುಲೇರಿಯಾ. ಇಷ್ಟೆಲ್ಲಾ ಕಮಾಲ್ ಮಾಡಿದ್ರೂ ಸಹ ಹಿಮಾಚಲ ಪ್ರದೇಶ ತಂಡ ಗೆಲ್ಲಲು ಸಾಧ್ಯವಾಗಲಿಲ್ಲ. ಗುಜರಾತ್ ತಂಡ ಹಿಮಾಚಲವನ್ನು 8 ರನ್’ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಹಿಮಾಚಲ ತಂಡ ನಿರಾಸೆ ಅನುಭವಿಸಿದರೂ ಅರ್ಪಿತ್ ಗುಲೇರಿಯಾ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು.
ವಿಜಯ್ ಹಜಾರೆ ಟ್ರೋಫಿಯ ಡಿ ಗುಂಪಿನ ಪಂದ್ಯದಲ್ಲಿ, ಅರ್ಪಿತ್ ಗುಲೇರಿಯಾ ತಮ್ಮ 9 ಓವರ್’ಗಳ ಕೋಟಾದಲ್ಲಿ 8 ಬ್ಯಾಟ್ಸ್‌ಮನ್’ಗಳನ್ನು ಏಕಾಂಗಿಯಾಗಿ ಔಟ್ ಮಾಡಿ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು.
ಲಿಸ್ಟ್-ಎ ಕ್ರಿಕೆಟ್’ನ ಪಂದ್ಯದಲ್ಲಿ ಎಂಟು ಬ್ಯಾಟ್ಸ್‌ಮನ್’ಗಳನ್ನು ಔಟ್ ಮಾಡಿದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ ಗುಲೇರಿಯಾ. ಅದರಲ್ಲೂ ಅರ್ಪಿತ್ ಈ ಸಾಧನೆ ಮಾಡಿದ ಭಾರತದ ಮೊದಲ ವೇಗಿ ಎನಿಸಿಕೊಂಡರು. ಅರ್ಪಿತ್’ಗಿಂತ ಮೊದಲು ಸ್ಪಿನ್ನರ್’ಗಳಾದ ಶಹಬಾಜ್ ನದೀಮ್ ಮತ್ತು ರಾಹುಸ್ ಸಾಂಘ್ವಿ ಈ ಸಾಧನೆ ಮಾಡಿದ್ದರು.
ಪಂದ್ಯದ ಬಗ್ಗೆ ಮಾತನಾಡುವುದಾದರೆ, ಚಂಡೀಗಢದ ಸೆಕ್ಟರ್ 16 ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ 49 ಓವರ್’ಗಳಲ್ಲಿ 327 ರನ್ ಗಳಿಸಿ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಹಿಮಾಚಲ ಪ್ರದೇಶ ತಂಡ 49.5 ಓವರ್’ಗಳಲ್ಲಿ 319 ರನ್‌ಗಳಿಗೆ ಆಲೌಟ್ ಆಗಿ 8 ರನ್’ಗಳಿಂದ ಸೋಲು ಕಂಡಿತು.
ಇದನ್ನೂ ಓದಿ: ಇಲ್ಲಿದೆ ವರರನ್ನು ಮಾರುವ ಮಾರುಕಟ್ಟೆ ! 50 ಸಾವಿರ ರೂಪಾಯಿಗೆ ಖರೀದಿಸಬಹುದಂತೆ ವರನನ್ನು !
ಐಪಿಎಲ್ 2024 ರ ಹರಾಜಿಗೆ ಮುಂಚಿತವಾಗಿ ಲಕ್ನೋ ಸೂಪರ್ ಜೈಂಟ್ಸ್ ಅರ್ಪಿತ್ ಗುಲೇರಿಯಾ ಅವರನ್ನು ಬಿಡುಗಡೆ ಮಾಡಿದೆ. ಐಪಿಎಲ್’ನ ಕೊನೆಯ ಋತುವಿನಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ಗಾಯಗೊಂಡಿರುವ ಮಯಾಂಕ್ ಯಾದವ್ ಬದಲಿಗೆ ಅರ್ಪಿತ್ ಗುಲೇರಿಯಾ ಅವರನ್ನು ಸೇರಿಸಿಕೊಂಡಿತ್ತು. ಆದರೆ ಇದೀಗ ಕೈಬಿಟ್ಟಿದೆ. ಇದೀಗ ಅರ್ಪಿತ್ ದೇಶಿಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಹೀಗಿರುವಾಗ ಹರಾಜಿನಲ್ಲಿ ಅರ್ಪಿತ್‌ಗೆ ಭಾರಿ ಬಿಡ್ ಬೀಳುವ ನಿರೀಕ್ಷೆ ಇದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ