ಇಲ್ಲಿದೆ ವರರನ್ನು ಮಾರುವ ಮಾರುಕಟ್ಟೆ ! 50 ಸಾವಿರ ರೂಪಾಯಿಗೆ ಖರೀದಿಸಬಹುದಂತೆ ವರನನ್ನು !

ವರ್ಷದಲ್ಲಿ ಒಂಬತ್ತು ದಿನಗಳ ಕಾಲ ಈ ಮಾರುಕಟ್ಟೆ ನಡೆಯುತ್ತದೆ. ಈ ಸಮಯದಲ್ಲಿ, ಅನೇಕ ಅವಿವಾಹಿತ ಹುಡುಗರು ಇಲ್ಲಿಗೆ ಬರುತ್ತಾರೆ. ಯಾವುದಾದರೂ ಹುಡುಗಿ ತಮ್ಮನ್ನು ಇಷ್ಟಪಡುತ್ತಾರೆ, ಮದುವೆಯಾಗುತ್ತಾರೆ ಎನ್ನುವ ಉದ್ದೇಶದಿಂದಲೇ ಹುಡುಗರು ಈ ಮಾರುಕಟ್ಟೆಗೆ ಬರುತ್ತಾರೆ. 

Written by - Ranjitha R K | Last Updated : Dec 8, 2023, 02:13 PM IST
  • ಜಗತ್ತಿನಲ್ಲಿ ಹಲವು ರೀತಿಯ ಮಾರುಕಟ್ಟೆಗಳಿವೆ.
  • ಬಲ್ಗೇರಿಯಾದಲ್ಲಿದೆ ವಧು ಮಾರುಕಟ್ಟೆ
  • ನಮ್ಮದೇ ದೇಶದಲ್ಲಿದೆ ವರನ ಮಾರುಕಟ್ಟೆ
ಇಲ್ಲಿದೆ ವರರನ್ನು ಮಾರುವ ಮಾರುಕಟ್ಟೆ ! 50 ಸಾವಿರ ರೂಪಾಯಿಗೆ ಖರೀದಿಸಬಹುದಂತೆ ವರನನ್ನು !  title=

ಬಿಹಾರ : ಜಗತ್ತಿನಲ್ಲಿ ಹಲವು ರೀತಿಯ ಮಾರುಕಟ್ಟೆಗಳಿವೆ. ಕೆಲವೆಡೆ ತರಕಾರಿಗಳು, ಕೆಲವೆಡೆ ಹಣ್ಣುಗಳು ಮತ್ತು ಕೆಲವೆಡೆ ಹಳೆಯ ಸಾಮಾನುಗಳನ್ನು ಮಾರಾಟ ಮಾಡಲಾಗುತ್ತದೆ. ಅನೇಕ ಮಾರಾಟಗಾರರು ಮಾರಾಟಗಾರರು ಒಂದೇ ರೀತಿಯ ಸರಕುಗಳನ್ನು ಮಾರಾಟ ಮಾಡುತ್ತಾರೆ. ಈ ಮಾರುಕಟ್ಟೆಗೆ ಭೇಟಿ ನೀಡುವವರು  ಮಾರಟಕ್ಕೆ ಇಟ್ಟಿರುವ ವಸ್ತುಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರವೇ ಖರೀದಿಸುತ್ತಾರೆ.

ಕೆಲವು ನಿರ್ದಿಷ್ಟ ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡಲಾಗುತ್ತದೆ. ಇತ್ತೀಚೆಗೆ, ಬಲ್ಗೇರಿಯಾದಲ್ಲಿ ವಧು ಮಾರುಕಟ್ಟೆ ಎನ್ನುವ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗಿತ್ತು. ವಧುಗಳನ್ನು ಖರೀದಿಸಲು ಜನರು ಈ ಮಾರುಕಟ್ಟೆಗೆ ಬರುತ್ತಾರೆ ಎನ್ನಲಾಗಿತು. ಆದರೆ ವರರನ್ನು ಮಾರಾಟ ಮಾಡುವ  ಮಾರುಕಟ್ಟೆಯೂ ಇದೆ. 

ಇದನ್ನೂ ಓದಿ : ಏಕಕಾಲಕ್ಕೆ ಒಂದಲ್ಲ, ಎರಡಲ್ಲ... 4 ಯುವತಿಯರ ಜೊತೆ ಸಪ್ತಪದಿ ತುಳಿದ ವ್ಯಕ್ತಿ, ಜನರ ರಿಯಾಕ್ಷನ್ ವೈರಲ್!

ಹೌದು, ವರರ ಮಾರುಕಟ್ಟೆ. ಈ ಮಾರುಕಟ್ಟೆಯಲ್ಲಿ ಅರ್ಹತೆಯ ಆಧಾರದ ಮೇಲೆ ವರಗಳನ್ನು ಮಾರಾಟ ಮಾಡಲಾಗುತ್ತದೆ. ಹುಡುಗ ಎಷ್ಟು ವಿದ್ಯಾವಂತ, ಎಲ್ಲಿ ಕೆಲಸ ಮಾಡುತ್ತಾನೆ? ಕುಟುಂಬ ಹಿನ್ನೆಲೆ ಏನು ಎಲ್ಲವನ್ನೂ ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವರನನ್ನು ಕುಟುಂಬದ ಪರಂಪರೆಯ ಆಧಾರದ ಮೇಲೆ ಮೌಲ್ಯೀಕರಿಸಲಾಗುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಮಾರುಕಟ್ಟೆ ಇರುವುದು ನಮ್ಮದೇ ದೇಶದಲ್ಲಿ.  

 700 ವರ್ಷಗಳಷ್ಟು ಹಳೆಯ ಮಾರುಕಟ್ಟೆ : 
ಪ್ರತಿ ವರ್ಷ, ಬಿಹಾರದ ಮಧುಬನಿಯಲ್ಲಿ ವರ ಮಾರುಕಟ್ಟೆಯನ್ನು ಆಯೋಜಿಸಲಾಗುತ್ತದೆ. ಇಲ್ಲಿ ವರನ ಮೇಲೆ ಬಿಡ್ ಮಾಡಲಾಗುತ್ತದೆ.  ವರ್ಷದಲ್ಲಿ ಒಂಬತ್ತು ದಿನಗಳ ಕಾಲ ಈ ಮಾರುಕಟ್ಟೆ ನಡೆಯುತ್ತದೆ. ಈ ಸಮಯದಲ್ಲಿ, ಅನೇಕ ಅವಿವಾಹಿತ ಹುಡುಗರು ಇಲ್ಲಿಗೆ ಬರುತ್ತಾರೆ. ಯಾವುದಾದರೂ ಹುಡುಗಿ ತಮ್ಮನ್ನು ಇಷ್ಟಪಡುತ್ತಾರೆ, ಮದುವೆಯಾಗುತ್ತಾರೆ ಎನ್ನುವ ಉದ್ದೇಶದಿಂದಲೇ ಹುಡುಗರು ಈ ಮಾರುಕಟ್ಟೆಗೆ ಬರುತ್ತಾರೆ. ಧೋತಿ-ಕುರ್ತಾ ಅಥವಾ ಜೀನ್ಸ್-ಶರ್ಟ್ ಧರಿಸಿ ಈ ಮಾರುಕಟ್ಟೆಗೆ ಬರುತ್ತಾರೆ.

ಇದನ್ನೂ ಓದಿ : Viral Video: ಸೀಟ್ ಗಾಗಿ ದೆಹಲಿ ಮೆಟ್ರೊ ರೈಲಿನಲ್ಲಿ ಜಬರ್ದಸ್ತ್ ಮಾರಾಮಾರಿ, ವಿಡಿಯೋ ವೈರಲ್!

ವರದಕ್ಷಿಣೆಯಿಂದ ಮುಕ್ತಿ ಪಡೆಯಲು ಮಾರುಕಟ್ಟೆ  :
ವರದಕ್ಷಿಣೆ ಪದ್ಧತಿಯನ್ನು ಕೊನೆಗಾಣಿಸುವ ಉದ್ದೇಶದಿಂದ ಈ ಮಾರುಕಟ್ಟೆ ಆಯೋಜಿಸಲಾಗಿತ್ತು. ಆದರೆ  ಈ ಮಾರುಕಟ್ಟೆಗೆ ಬರುವ ಕೆಲವು ಹುಡುಗರು ಕೂಡಾ  ವರದಕ್ಷಿಣೆಗೆ ಬೇಡಿಕೆಯಿಡುತ್ತಾರೆ ಎನ್ನಲಾಗಿದೆ. 

ಇಲ್ಲಿ ಹುಡುಗರ ವಿದ್ಯಾರ್ಹತೆಗೆ ಅನುಗುಣವಾಗಿ ಅವರ ವಯಸ್ಸು 35 ವರ್ಷಕ್ಕಿಂತ ಹೆಚ್ಚಿದ್ದರೆ ಅವರ ಬೆಲೆ ಐವತ್ತು ಸಾವಿರ ರೂಪಾಯಿಗಳಿಗೆ  ಆರಂಭವಾಗುತ್ತದೆ.   ವಯಸ್ಸು ಕಡಿಮೆಯಿದ್ದರೆ ಬೆಲೆ ಎರಡರಿಂದ ಮೂರು ಲಕ್ಷದವರೆಗೆ ಏರುತ್ತದೆ.   ಮಾರುಕಟ್ಟೆಯಲ್ಲಿ ಈ ಸಂಬಂಧಗಳನ್ನು ಸರಿಪಡಿಸಲು ಸಹಾಯ ಮಾಡುವ ಪಂಡಿತರೂ  ಸಿಗುತ್ತಾರಂತೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News