ಬುಮ್ರಾ, ಚಾಹಲ್’ರನ್ನೇ ಹಿಂದಿಕ್ಕಿ ಜಗತ್ತಿನ ಈ ಶ್ರೇಷ್ಠ ದಾಖಲೆ ಬರೆದ ಅರ್ಷದೀಪ್ ಸಿಂಗ್!
Arshdeep Singh Record: ಅರ್ಷದೀಪ್ ಸಿಂಗ್ ಇದೀಗ ಟಿ20 ಅಂತಾರಾಷ್ಟ್ರೀಯ ಮಾದರಿಯಲ್ಲಿ ಭಾರತದ ಪರ ಅತ್ಯಂತ ವೇಗವಾಗಿ 50 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಸಿಂಗ್ ತಮ್ಮ 33ನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 50 ವಿಕೆಟ್’ಗಳನ್ನು ಪೂರೈಸಿದ್ದಾರೆ.
Arshdeep Singh Record: ಭಾನುವಾರ ಐರ್ಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಶ್ರೇಷ್ಠ ದಾಖಲೆ ಮಾಡಿದ್ದು, ಇತಿಹಾಸ ಸೃಷ್ಟಿಸಿದ್ದಾರೆ. ಜೊತೆಗೆ ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಭಾನುವಾರ ಐರ್ಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಅದ್ಭುತ ಬೌಲಿಂಗ್ ಮಾಡಿ 4 ಓವರ್ ಗಳಲ್ಲಿ 29 ರನ್ ನೀಡಿ 1 ವಿಕೆಟ್ ಪಡೆದಿದ್ದರು.
ಇದನ್ನೂ ಓದಿ: ಐರ್ಲೆಂಡ್ ವಿರುದ್ಧ Team India ಗೆಲ್ಲಲು ಕಾರಣ ಧೋನಿಯ ಅಪ್ಪಟ ಶಿಷ್ಯ ಈ ಆರಂಭಿಕ ಆಟಗಾರ!
ಅರ್ಷದೀಪ್ ಸಿಂಗ್ ಇದೀಗ ಟಿ20 ಅಂತಾರಾಷ್ಟ್ರೀಯ ಮಾದರಿಯಲ್ಲಿ ಭಾರತದ ಪರ ಅತ್ಯಂತ ವೇಗವಾಗಿ 50 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಸಿಂಗ್ ತಮ್ಮ 33ನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 50 ವಿಕೆಟ್’ಗಳನ್ನು ಪೂರೈಸಿದ್ದಾರೆ. ಭಾರತ ಪರ ಟ್ವೆಂಟಿ-20 ಮಾದರಿಯಲ್ಲಿ ಅತಿ ವೇಗವಾಗಿ 50 ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಅರ್ಷದೀಪ್ ಸಿಂಗ್ ಪಾತ್ರರಾಗಿದ್ದಾರೆ.
ಭಾರತದ ಪರ ವೇಗವಾಗಿ 50 ಟಿ20 ಅಂತರರಾಷ್ಟ್ರೀಯ ವಿಕೆಟ್’ಗಳನ್ನು ಪಡೆದ ದಾಖಲೆ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಹೆಸರಿನಲ್ಲಿ ದಾಖಲಾಗಿದೆ. ಕುಲದೀಪ್ ಯಾದವ್ ತಮ್ಮ 30ನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 50 ವಿಕೆಟ್ ಪೂರೈಸಿದ್ದರು.
ಭಾರತದ ಪರ T20I ನಲ್ಲಿ ಈ ಸಾಧನೆ ಮಾಡಿದ ಮೊದಲ ವೇಗದ ಬೌಲರ್:
ಅರ್ಷದೀಪ್ ಸಿಂಗ್ ಪ್ರಸ್ತುತ 33 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 50 ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಯುಜುವೇಂದ್ರ ಚಾಹಲ್ ತಮ್ಮ 34ನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 50 ವಿಕೆಟ್ ಪೂರೈಸಿದ ದಾಖಲೆ ಮಾಡಿದರೆ, ಜಸ್ಪ್ರೀತ್ ಬುಮ್ರಾ 41ನೇ ಟಿ20 ಪಂದ್ಯದಲ್ಲಿ 50 ವಿಕೆಟ್’ಗಳನ್ನು ಕಬಳಿಸಿದ್ದಾರೆ. ಇನ್ನು ಭಾರತ ಪರ ಅತಿ ಹೆಚ್ಚು ಟಿ20 ಅಂತಾರಾಷ್ಟ್ರೀಯ ವಿಕೆಟ್ ಪಡೆದ ದಾಖಲೆ ಯುಜ್ವೇಂದ್ರ ಚಹಾಲ್ ಹೆಸರಿನಲ್ಲಿದೆ. ಯುಜುವೇಂದ್ರ ಚಹಾಲ್ ಭಾರತ ಪರ ಇದುವರೆಗೆ ಗರಿಷ್ಠ 96 ಟಿ20 ಅಂತಾರಾಷ್ಟ್ರೀಯ ವಿಕೆಟ್’ಗಳನ್ನು ಪಡೆದಿದ್ದಾರೆ. ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅಂತರಾಷ್ಟ್ರೀಯ ಟಿ20ಯಲ್ಲಿ 90 ವಿಕೆಟ್ ಹಾಗೂ ಜಸ್ಪ್ರೀತ್ ಬುಮ್ರಾ 74 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ಧೋನಿ-ಯುವರಾಜ್ ನಿವೃತ್ತಿ ಬಳಿಕ ಖಾಲಿಯಿದ್ದ ಫಿನಿಶಿಂಗ್ ಸ್ಥಾನಕ್ಕೆ ಈ ಬೌಲರ್ ಫಿಕ್ಸ್!
ಭಾರತದ ಪರ ಅತಿ ವೇಗವಾಗಿ 50 ಟಿ20 ಅಂತಾರಾಷ್ಟ್ರೀಯ ವಿಕೆಟ್ ಕಬಳಿಸಿದ ಆಟಗಾರರ ಪಟ್ಟಿ
1. ಕುಲದೀಪ್ ಯಾದವ್ - 30 ಪಂದ್ಯಗಳಲ್ಲಿ
2. ಅರ್ಷದೀಪ್ ಸಿಂಗ್ - 33 ಪಂದ್ಯಗಳಲ್ಲಿ
3. ಯುಜ್ವೇಂದ್ರ ಚಹಾಲ್ - 34 ಪಂದ್ಯಗಳಲ್ಲಿ
4. ಜಸ್ಪ್ರೀತ್ ಬುಮ್ರಾ - 41 ಪಂದ್ಯಗಳಲ್ಲಿ
5. ರವಿಚಂದ್ರನ್ ಅಶ್ವಿನ್ - 42 ಪಂದ್ಯಗಳಲ್ಲಿ
6. ಭುವನೇಶ್ವರ್ ಕುಮಾರ್ - 50 ಪಂದ್ಯಗಳಲ್ಲಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.