ಧೋನಿ-ಯುವರಾಜ್ ನಿವೃತ್ತಿ ಬಳಿಕ ಖಾಲಿಯಿದ್ದ ಫಿನಿಶಿಂಗ್ ಸ್ಥಾನಕ್ಕೆ ಈ ಬೌಲರ್ ಫಿಕ್ಸ್!

Kiran More on Rinku Singh: ಮಹೇಂದ್ರ ಸಿಂಗ್ ಧೋನಿ ಹಾಗೂ ಯುವರಾಜ್ ಸಿಂಗ್ ಅವರಂತೆ ಮ್ಯಾಚ್ ಫಿನಿಶರ್ ಮಾಡುವ ಸಾಮರ್ಥ್ಯ ರಿಂಕು ಸಿಂಗ್ ಅವರಿಗಿದೆ ಎಂದು ಮೋರೆ ಅಭಿಪ್ರಾಯಪಟ್ಟಿದ್ದಾರೆ.

Written by - Bhavishya Shetty | Last Updated : Aug 21, 2023, 08:40 AM IST
    • ರಿಂಕು ಸಿಂಗ್ ದೇಶಕ್ಕೆ ಅತ್ಯುತ್ತಮ ಮ್ಯಾಚ್ ಫಿನಿಶರ್ ಆಗಬಹುದು
    • ಧೋನಿ ಹಾಗೂ ಯುವರಾಜ್ ಅವರಂತೆ ಮ್ಯಾಚ್ ಫಿನಿಶರ್ ಮಾಡುವ ಸಾಮರ್ಥ್ಯ ರಿಂಕು ಸಿಂಗ್ ಅವರಿಗಿದೆ
    • ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕಿರಣ್ ಮೋರೆ ಹೇಳಿಕೆ
ಧೋನಿ-ಯುವರಾಜ್ ನಿವೃತ್ತಿ ಬಳಿಕ ಖಾಲಿಯಿದ್ದ ಫಿನಿಶಿಂಗ್ ಸ್ಥಾನಕ್ಕೆ ಈ ಬೌಲರ್ ಫಿಕ್ಸ್!  title=
Rinku Singh

Kiran More on Rinku Singh: ಐರ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾಗೆ ಮೊದಲ ಮತ್ತು ಎರಡನೇ ಟಿ20ಯಲ್ಲಿ ಗೆಲುವು ಸಿಕ್ಕಿದೆ. ಇನ್ನು ಈ ಸರಣಿಯಲ್ಲಿ ಭಾರತದ ಪರ ಇಬ್ಬರು ಆಟಗಾರರು T20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದಾರೆ. ಒಬ್ಬ ಕನ್ನಡಿಗ ಪ್ರಸಿದ್ಧ ಕೃಷ್ಣ ಮತ್ತು ಇನ್ನೊಬ್ಬ ರಿಂಕು ಸಿಂಗ್.

ಇನ್ನು ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೆ ಮಳೆಯಿಂದಾಗಿ ಅಡ್ಡಿಯುಂಟಾಗಿದ್ದು, ಟೀಂ ಇಂಡಿಯಾಗೆ ಸಂಪೂರ್ಣ 20 ಓವರ್ ಕೂಡ ಆಡಲು ಸಾಧ್ಯವಾಗಲಿಲ್ಲ. ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ 2 ರನ್‌’ಗಳ ಜಯ ಸಿಕ್ಕಿತ್ತು.

ಇದನ್ನೂ ಓದಿ: ಐರ್ಲೆಂಡ್ ವಿರುದ್ಧ Team India ಗೆಲ್ಲಲು ಕಾರಣ ಧೋನಿಯ ಅಪ್ಪಟ ಶಿಷ್ಯ ಈ ಆರಂಭಿಕ ಆಟಗಾರ!

ಇನ್ನು ಈ ಪಂದ್ಯಾವಳಿ ಸಂದರ್ಭದಲ್ಲಿ ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕಿರಣ್ ಮೋರೆ ಹೇಳಿಕೆಯೊಂದನ್ನು ನೀಡಿದ್ದು, ಎಲ್ಲರಲ್ಲೂ ಪ್ರಶಂಸೆಗೆ ಒಳಪಟ್ಟಿದೆ. ಮಹೇಂದ್ರ ಸಿಂಗ್ ಧೋನಿ ಹಾಗೂ ಯುವರಾಜ್ ಸಿಂಗ್ ಅವರಂತೆ ಮ್ಯಾಚ್ ಫಿನಿಶರ್ ಮಾಡುವ ಸಾಮರ್ಥ್ಯ ರಿಂಕು ಸಿಂಗ್ ಅವರಿಗಿದೆ ಎಂದು ಮೋರೆ ಅಭಿಪ್ರಾಯಪಟ್ಟಿದ್ದಾರೆ.

“ರಿಂಕು ಸಿಂಗ್ ಭಾರತ ತಂಡಕ್ಕೆ ಬರಲು ನಾನು ಕಾಯುತ್ತಿದ್ದೆ. ಅವರು ಐದು ಅಥವಾ ಆರನೇ ಸ್ಥಾನದಲ್ಲಿ ಉತ್ತಮ ಪ್ರದರ್ಶನ ನೀಡಬಹುದು ಮತ್ತು ದೇಶಕ್ಕೆ ಅತ್ಯುತ್ತಮ ಮ್ಯಾಚ್ ಫಿನಿಶರ್ ಆಗಬಹುದು. ನಾವು ಮಹೇಂದ್ರ ಸಿಂಗ್ ಧೋನಿ ಮತ್ತು ಯುವರಾಜ್ ಸಿಂಗ್ ಅವರನ್ನು ನೋಡಿದ್ದೇವೆ. ಆದರೆ ಆ ನಂತರ ಅವರಂತಹ ಆಟಗಾರನನ್ನು ನಾವು ನೋಡಿಲ್ಲ. ಆ ಸ್ಥಾನವನ್ನು ಇವರು ತುಂಬಬಹುದು ಎಂದಿದ್ದಾರೆ.

“ನಾವು ಮಹೇಂದ್ರ ಸಿಂಗ್ ಧೋನಿ ಮತ್ತು ಯುವರಾಜ್ ಸಿಂಗ್ ಅವರಂತಹ ಆಟಗಾರರನ್ನು ತಯಾರು ಮಾಡಲು ಪ್ರಯತ್ನಿಸಿದ್ದೇವೆ. ಆದರೆ ಇಲ್ಲಿಯವರೆಗೆ ಯಶಸ್ವಿಯಾಗಲಿಲ್ಲ. ತಿಲಕ್ ವರ್ಮ ಕೂಡ ಆ ಪಾತ್ರವನ್ನು ನಿರ್ವಹಿಸಬಹುದು. ರಿಂಕು ಉತ್ತಮ ಫೀಲ್ಡರ್ ಕೂಡ. ನಾನು ಅವರನ್ನು ದೇಶೀಯ ಕ್ರಿಕೆಟ್‌’ನಲ್ಲಿಯೂ ನೋಡಿದ್ದೇನೆ ಮತ್ತು ಅವರ ಆಟವು ಸಾಕಷ್ಟು ಸುಧಾರಿಸಿದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.

ರಿಂಕು ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ:

ಐಪಿಎಲ್ 2023 ರಲ್ಲಿ ತನ್ನ ಪ್ರಬಲ ಪ್ರದರ್ಶನದಿಂದ ಸುದ್ದಿಯಲ್ಲಿದ್ದ ರಿಂಕು ಸಿಂಗ್ ವೆಸ್ಟ್ ಇಂಡೀಸ್ ಪ್ರವಾಸದ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಆದರೆ ಈಗ ಅವರು ಐರ್ಲೆಂಡ್ ಪ್ರವಾಸದಲ್ಲಿ ಭಾರತಕ್ಕಾಗಿ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದ್ದಾರೆ. ಇದರೊಂದಿಗೆ ಏಷ್ಯನ್ ಕ್ರೀಡಾಕೂಟದ ಭಾರತ ತಂಡದಲ್ಲಿ ರಿಂಕು ಕೂಡ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾದ ಭವಿಷ್ಯದ ‘ನಾಯಕ’ ಈತನೇ: ಧೋನಿ ಮಿತ್ರನಿಗೆ ಸಿಕ್ಕೇ ಬಿಡ್ತು ಕ್ಯಾಪ್ಟನ್ಸಿ ಸ್ಥಾನ!

ರಿಂಕು ಸಿಂಗ್ ಐಪಿಎಲ್ 2023 ರಲ್ಲಿ ನಂ. 5 ಮತ್ತು ನಂ. 6 ಬ್ಯಾಟ್ಸ್‌ಮನ್ ಆಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ರಿಂಕು 13 ಐಪಿಎಲ್ ಇನ್ನಿಂಗ್ಸ್‌’ಗಳಲ್ಲಿ ಮೂರು ಅರ್ಧಶತಕ ಸೇರಿದಂತೆ 416 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 186.67 ಭಾರತೀಯ ಬ್ಯಾಟ್ಸ್‌’ಮನ್‌’ಗಳಲ್ಲಿ ಅತ್ಯಧಿಕವಾಗಿದೆ. ಡೆತ್ ಓವರ್‌’ಗಳಲ್ಲಿ ಅವರು ಪ್ರತಿ 3.6 ಎಸೆತಗಳಿಗೆ ಒಂದು ಬೌಂಡರಿ ಮತ್ತು ಪ್ರತಿ 7 ಎಸೆತಗಳಿಗೆ ಒಂದು ಸಿಕ್ಸರ್ ಬಾರಿಸಿದ್ದರು. ಐಪಿಎಲ್ 2023ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ರಿಂಕು, ಕೊನೆಯ ಓವರ್‌’ನಲ್ಲಿ ಸತತ 5 ಸಿಕ್ಸರ್‌’ಗಳನ್ನು ಬಾರಿಸುವ ಮೂಲಕ 9 ಏಪ್ರಿಲ್ 2023 ರಂದು ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯವನ್ನು ಗೆಲ್ಲಿಸಿದ್ದರು. ಅಂದು ಕೊನೆಯ ಓವರ್‌’ನಲ್ಲಿ ಕೆಕೆಆರ್‌’ಗೆ 31 ರನ್‌’ಗಳ ಅಗತ್ಯವಿತ್ತು. ಆ ಸಂದರ್ಭದಲ್ಲಿ ರಿಂಕು ಸಿಂಗ್ ಗುರಿ ಸಾಧಿಸಲು ಸತತ 5 ಸಿಕ್ಸರ್‌’ಗಳನ್ನು ಬಾರಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News