147 ವರ್ಷಗಳಲ್ಲಿ ಇದೇ ಮೊದಲು... ವಿಶ್ವದಾಖಲೆ ಬರೆದೇಬಿಟ್ರು ಭಾರತದ ಸ್ಪಿನ್ ಮಾಂತ್ರಿಕ ಅಶ್ವಿನ್: ಟೆಸ್ಟ್ ಕ್ರಿಕೆಟ್ನಲ್ಲಿ ಯಾರೂ ಬರೆದಿರದ ಆ ದಾಖಲೆ ಯಾವುದು?
R Ashwin Century: ಬಾಂಗ್ಲಾದೇಶ ವಿರುದ್ಧದ ಪಂದ್ಯ ಅಶ್ವಿನ್ ಅವರ ಟೆಸ್ಟ್ ವೃತ್ತಿಜೀವನದ 101 ನೇ ಪಂದ್ಯವಾಗಿದೆ. ಇಲ್ಲಿಯವರೆಗೆ ಬ್ಯಾಟಿಂಗ್‌ನಲ್ಲಿ 3,400 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 6 ಶತಕ ಮತ್ತು 14 ಅರ್ಧ ಶತಕಗಳನ್ನು ಕೆಲಹಾಕಿದ್ದಾರೆ.
R Ashwin: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಟೆಸ್ಟ್ʼಗಳ ಸರಣಿಯ ಮೊದಲ ಪಂದ್ಯ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತದ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಪಂದ್ಯದ ಮೊದಲ ದಿನವೇ ಅಶ್ವಿನ್ ಭರ್ಜರಿ ಶತಕ ಬಾರಿಸಿದ್ದರು.
ಇದನ್ನೂ ಓದಿ: ಡೇಂಜರ್ ಝೋನ್‌ನಲ್ಲಿರುವ ಕೆಎಲ್ ರಾಹುಲ್ ಕೆರಿಯರ್ ಬಗ್ಗೆ ರೋಹಿತ್ ಶರ್ಮಾ ಶಾಕಿಂಗ್ ಹೇಳಿಕೆ
ಇನ್ನು ಅಶ್ವಿನ್ ಈ ವಿಶ್ವದಾಖಲೆ ಮಾಡಿದ್ದು ಬ್ಯಾಟ್ಸ್ʼಮನ್ ಆಗಿ ಅಲ್ಲ ಆಲ್ ರೌಂಡರ್ ಆಗಿ. ಚೆನ್ನೈ ಟೆಸ್ಟ್ʼನಲ್ಲಿ ತಮ್ಮ ವೃತ್ತಿಜೀವನದ ಆರನೇ ಶತಕವನ್ನು ಗಳಿಸುವ ಮೂಲಕ, ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್ʼನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಈ ಬಳಿಕ, ಬ್ಯಾಟ್ಸ್‌ಮನ್ ಆಗಿ 20 ಸಂದರ್ಭಗಳಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮತ್ತು ಬೌಲಿಂಗ್ʼನಲ್ಲಿ 30 ಕ್ಕೂ ಹೆಚ್ಚು ಬಾರಿ 5 ವಿಕೆಟ್ʼಗಳನ್ನು ಪಡೆದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾವ ಕ್ರಿಕೆಟಿಗ ಕೂಡ ಈ ದಾಖಲೆ ಬರೆದಿರಲಿಲ್ಲ.
ಇದನ್ನೂ ಓದಿ: ಮಧುಮೇಹಿಗಳಿಗೆ ಅಮೃತವೇ ಸರಿ ಈ ಹಣ್ಣು ನೆನಸಿದ ನೀರು! ಬೆಳಗಿನ ಜಾವ ಕುಡಿದ್ರೆ ಶುಗರ್ ಹೆಚ್ಚಾಗೋದೆ ಇಲ್ಲ!!
ಬಾಂಗ್ಲಾದೇಶ ವಿರುದ್ಧದ ಪಂದ್ಯ ಅಶ್ವಿನ್ ಅವರ ಟೆಸ್ಟ್ ವೃತ್ತಿಜೀವನದ 101 ನೇ ಪಂದ್ಯವಾಗಿದೆ. ಇಲ್ಲಿಯವರೆಗೆ ಬ್ಯಾಟಿಂಗ್‌ನಲ್ಲಿ 3,400 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 6 ಶತಕ ಮತ್ತು 14 ಅರ್ಧ ಶತಕಗಳನ್ನು ಕೆಲಹಾಕಿದ್ದಾರೆ. ಬೌಲಿಂಗ್ʼನಲ್ಲಿ ತಮ್ಮ ಹೆಸರಿನಲ್ಲಿ 500 ಕ್ಕೂ ಹೆಚ್ಚು ವಿಕೆಟ್ʼಗಳನ್ನು ಪಡೆದಿದ್ದು, 36 ಕ್ಕೂ ಹೆಚ್ಚು ಸಂದರ್ಭಗಳಲ್ಲಿ ಇನ್ನಿಂಗ್ಸ್ʼನಲ್ಲಿ 5 ಅಥವಾ ಹೆಚ್ಚಿನ ವಿಕೆಟ್ʼಗಳನ್ನು ಪಡೆದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ