"ಅವನಿಗೆ ಕ್ಲೀಯರ್‌ ಆಗಿ ಹೇಳಿ ಆಗಿದೆ..."- ಡೇಂಜರ್‌ ಝೋನ್‌ನಲ್ಲಿರುವ ಕೆಎಲ್‌ ರಾಹುಲ್‌ ಕೆರಿಯರ್‌ ಬಗ್ಗೆ ನಾಯಕ ರೋಹಿತ್‌ ಶರ್ಮಾ ಶಾಕಿಂಗ್‌ ಹೇಳಿಕೆ

Rohit Sharma Statement About KL Rahul: "ರಾಹುಲ್‌ ಬಳಿಯಿರುವ ಉತ್ತಮ ರೀತಿಯ ಗುಣಮಟ್ಟದ ಬ್ಯಾಟಿಂಗ್‌ ಬಗ್ಗೆ ಎಲ್ಲರಿಗೂ ತಿಳಿದಿದೆ. ಆತ ಪ್ರತಿಯೊಂದು ಪಂದ್ಯವನ್ನು ಆಡಬೇಕು ಎಂದು ಈಗಾಗಲೇ ಅವರಿಗೆ ಸ್ಪಷ್ಟ ಸಂದೇಶ ನೀಡಿ ಆಗಿದೆ. ಇನ್ನು ಆತನಿಂದ ಉತ್ತಮವಾದದ್ದನ್ನು ಹೊರತರುವುದಷ್ಟೇ ನಮ್ಮ ಕರ್ತವ್ಯವಾಗಿದೆ" ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.  

Written by - Bhavishya Shetty | Last Updated : Sep 20, 2024, 04:26 PM IST
    • ಕೆ ಎಲ್‌ ರಾಹುಲ್‌ ವೃತ್ತಿಜೀವನ ಅಪಾಯದ ಹಾದಿಯಲ್ಲಿದೆ
    • ವೃತ್ತಿಜೀವನವೇ ಅಂತ್ಯದತ್ತ ಮುಖ ಮಾಡುತ್ತಿದೆ ಎಂದು ಅನೇಕರು ಹೇಳುತ್ತಿದ್ದಾರೆ.
    • ನಾಯಕ ರೋಹಿತ್‌ ಶರ್ಮಾ ರಾಹುಲ್‌ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು ಅಚ್ಚರಿಗೆ ಕಾರಣವಾಗಿದೆ
"ಅವನಿಗೆ ಕ್ಲೀಯರ್‌ ಆಗಿ ಹೇಳಿ ಆಗಿದೆ..."- ಡೇಂಜರ್‌ ಝೋನ್‌ನಲ್ಲಿರುವ ಕೆಎಲ್‌ ರಾಹುಲ್‌ ಕೆರಿಯರ್‌ ಬಗ್ಗೆ ನಾಯಕ ರೋಹಿತ್‌ ಶರ್ಮಾ ಶಾಕಿಂಗ್‌ ಹೇಳಿಕೆ title=
Rohit Sharma on KL Rahul

Rohit Sharma on KL Rahul: ಸದ್ಯ ಕನ್ನಡಿಗ ಕೆ ಎಲ್‌ ರಾಹುಲ್‌ ವೃತ್ತಿಜೀವನ ಅಪಾಯದ ಹಾದಿಯಲ್ಲಿದೆ. 2023 ರಲ್ಲಿ ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಮತ್ತು ಈ ವರ್ಷದ ಆರಂಭದಲ್ಲಿ ಹೈದರಾಬಾದ್‌ನಲ್ಲಿ ಇಂಗ್ಲೆಂಡ್ ವಿರುದ್ಧ 86 ರನ್ ಗಳಿಸಿದ ಬಳಿಕ ರಾಹುಲ್‌ ಬ್ಯಾಟಿಂಗ್‌ ಸೈಲೆಂಟ್‌ ಮೋಡ್‌ʼಗೆ ಹೋಗಿದೆ. ಈ ಎಲ್ಲದರ ಮಧ್ಯೆ ಅವರ ವೃತ್ತಿಜೀವನವೇ ಅಂತ್ಯದತ್ತ ಮುಖ ಮಾಡುತ್ತಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ರಾಹುಲ್‌ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು, ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ:  ಒಂದು ಶತಕ, 6 ವಿಶ್ವದಾಖಲೆ... ಟೆಸ್ಟ್‌ ಕ್ರಿಕೆಟ್‌ನಲ್ಲಿ ಆರ್‌ ಅಶ್ವಿನ್‌ ಕಮಾಲ್!‌

"ರಾಹುಲ್‌ ಬಳಿಯಿರುವ ಉತ್ತಮ ರೀತಿಯ ಗುಣಮಟ್ಟದ ಬ್ಯಾಟಿಂಗ್‌ ಬಗ್ಗೆ ಎಲ್ಲರಿಗೂ ತಿಳಿದಿದೆ. ಆತ ಪ್ರತಿಯೊಂದು ಪಂದ್ಯವನ್ನು ಆಡಬೇಕು ಎಂದು ಈಗಾಗಲೇ ಅವರಿಗೆ ಸ್ಪಷ್ಟ ಸಂದೇಶ ನೀಡಿ ಆಗಿದೆ. ಇನ್ನು ಆತನಿಂದ ಉತ್ತಮವಾದದ್ದನ್ನು ಹೊರತರುವುದಷ್ಟೇ ನಮ್ಮ ಕರ್ತವ್ಯವಾಗಿದೆ" ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

"ನಾವು ನಿಮ್ಮಿಂದ ಇದನ್ನೇ ನಿರೀಕ್ಷಿಸುತ್ತೇವೆ ಎಂಬ ಸ್ಪಷ್ಟ ಸಂದೇಶವನ್ನು ಅವರಿಗೆ ನೀಡಿದ್ದೇವೆ. ಅವರು ದಕ್ಷಿಣ ಆಫ್ರಿಕಾದಲ್ಲಿ ಶತಕ ಬಾರಿಸಿದವರು. ಅದೇ ರೀತಿ ಹೈದರಾಬಾದ್‌ನಲ್ಲಿ ನಡೆದ ಆ ಮೊದಲ ಟೆಸ್ಟ್ ಪಂದ್ಯದಲ್ಲಿ 80 ಗಳಿಸಿದರು. ಅದಾದ ನಂತರ ಗಾಯಗೊಂಡರು. ದುರದೃಷ್ಟವಶಾತ್, ಆ ಗಾಯದಿಂದಾಗಿ ಅವರು ನಂತರ ಯಾವುದೇ ಪಂದ್ಯಗಳನ್ನು ಆಡಲಿಲ್ಲ. ಹೀಗಾಗಿ ನನ್ನ ಪ್ರಕಾರ, ಹೈದರಾಬಾದ್ʼನಿಂದಲೇ ಉತ್ತಮ ಬ್ಯಾಟಿಂಗ್‌ ಮುಂದುವರಿಸುತ್ತಾರೆ" ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

ಇದನ್ನೂ ಓದಿ:  ವರ್ಷಕ್ಕೆ ಒಂದೇ ಬಾರಿ ಸಿಗುವ ಈ ಹಣ್ಣು ‌ಕಣ್ಣಿನ ಆರೋಗ್ಯಕ್ಕೆ ಸಂಜೀವಿನಿಯಿದ್ದಂತೆ... ತಿಂದರೆ ಎಷ್ಟೇ ಕಣ್ಣು ಮಂಜಾಗುತ್ತಿದ್ದರೂ ಶಾರ್ಪ್‌ ಆಗುತ್ತೆ! ಕನ್ನಡಕ ಬೇಡವೇ ಬೇಡ

"ರಾಹುಲ್ ಸ್ಪಿನ್ ಮತ್ತು ಸೀಮರ್‌‌ʼಗಳನ್ನು ಆಡುವ ಕೌಶಲ್ಯ ಹೊಂದಿರುವವರು. ಇನ್ನು ನಿಸ್ಸಂಶಯವಾಗಿ ಅವರಿಗೆ ಅವಕಾಶಗಳು ಇವೆ" ಎಂದು ಸ್ಪಷ್ಟವಾಗಿ ಹೇಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News