Asia Cup 2022: ಈ ಅಪಾಯಕಾರಿ ಆಟಗಾರ ದಿಢೀರ್ ಟೀಂ ಇಂಡಿಯಾಗೆ ಸೇರ್ಪಡೆ..!?
ಮೊಣಕಾಲಿನ ನೋವಿನಿಂದ ರವೀಂದ್ರ ಜಡೇಜಾ ಏಷ್ಯಾಕಪ್ ಮತ್ತು ಟಿ-20 ವಿಶ್ವಕಪ್‌ನಿಂದ ಹೊರಗುಳಿದ್ದು, ಟೀಂ ಇಂಡಿಯಾಗೆ ಭಾರೀ ಹಿನ್ನಡೆಯಾಗಿದೆ.
ನವದೆಹಲಿ: ಪ್ರಸಕ್ತ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ರದರ್ಶನ ಅದ್ಭುತವಾಗಿದೆ. ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದು ನಂತರ ಹಾಂಗ್ ಕಾಂಗ್ ವಿರುದ್ಧ ಜಯ ಸಾಧಿಸಿತು. ಇಂದು ಸೂಪರ್-4ರ ಪಂದ್ಯದಲ್ಲಿ ಭಾರತ ಮತ್ತೊಮ್ಮೆ ಪಾಕಿಸ್ತಾನವನ್ನು ಎದುರಿಸುತ್ತಿದೆ. ಆದರೆ ಈ ದೊಡ್ಡ ಪಂದ್ಯಕ್ಕೂ ಮುನ್ನ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದ ಹೊರಗುಳಿದ್ದು, ಟೀಂ ಇಂಡಿಯಾಗೆ ಭಾರೀ ಹಿನ್ನಡೆಯಾಗಿದೆ. ಜಡೇಜಾ ಬದಲಿಗೆ ಪ್ಲೇಯಿಂಗ್ 11ರಲ್ಲಿ ಯಾವ ಆಟಗಾರನಿಗೆ ಸ್ಥಾನ ನೀಡಲಾಗುತ್ತದೆ ಎಂಬುದರ ಬಗ್ಗೆ ಸ್ವತಃ ಕೋಚ್ ರಾಹುಲ್ ದ್ರಾವಿಡ್ ಅವರೇ ಸೂಚಿಸಿದ್ದಾರೆ.
ಜಡೇಜಾ ಬದಲಿಗೆ ಯಾರು..?
ಟೀಂ ಇಂಡಿಯಾ ಆಡುವ 11ರಲ್ಲಿ ರವೀಂದ್ರ ಜಡೇಜಾ ಬದಲಿಗೆ ಯಾವ ಆಲ್‌ರೌಂಡರ್‌ಗೆ ಸ್ಥಾನ ನೀಡಲಾಗುವುದು ಎಂಬ ಸಸ್ಪೆನ್ಸ್ ಬಾಕಿ ಉಳಿದಿದೆ. ಜಡೇಜಾ ಬದಲಿಗೆ ಅಕ್ಷರ್ ಪಟೇಲ್, ದೀಪಕ್ ಹೂಡಾ ಅಥವಾ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆಯಬಹುದಾಗಿದೆ. ಮೊಣಕಾಲಿನ ನೋವಿನಿಂದ ಜಡೇಜಾ ಏಷ್ಯಾಕಪ್ ಮತ್ತು ಟಿ-20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಈ 2 ಟೂರ್ನಿಗಳಲ್ಲಿ ಈ ಸ್ಟಾರ್ ಆಟಗಾರ ಇಲ್ಲದಿರುವುದು ಟೀಂ ಇಂಡಿಯಾಕ್ಕೆ ದೊಡ್ಡ ಹಿನ್ನಡೆಯಾಗಿದೆ. ಜಡೇಜಾ ಅವರ ಅನುಪಸ್ಥಿತಿಯನ್ನು ಯಾವ ಆಟಗಾರನೂ ಸುಲಭವಾಗಿ ತುಂಬಲು ಸಾಧ್ಯವಿಲ್ಲ.
ಇದನ್ನೂ ಓದಿ: Ravindra Jadeja : ಟೀಂ ಇಂಡಿಯಾಗೆ ಭಾರಿ ಹಿನ್ನಡೆ : ಟಿ20 ವಿಶ್ವಕಪ್‌ನಿಂದ ರವೀಂದ್ರ ಜಡೇಜಾ ಔಟ್
ಇವರೇ ನೋಡಿ ದ್ರಾವಿಡ್ ಸೂಚಿಸಿರುವ ಆಟಗಾರ
ಟೀಂ ಇಂಡಿಯಾ ಕೋಚ್ ದ್ರಾವಿಡ್ ಅವರು ಜಡೇಜಾ ಬದಲಿಗೆ ಆಡುವ ಆಟಗಾರನನ್ನು ಹೆಸರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ರವಿಚಂದ್ರನ್ ಅಶ್ವಿನ್‍ರಂತಹ ಆಟಗಾರ ತಂಡದಲ್ಲಿದ್ದರೆ 4 ಓವರ್ ಬೌಲ್ ಮಾಡುವ ಜೊತೆಗೆ ಉತ್ತಮ ಬ್ಯಾಟಿಂಗ್ ಮಾಡುವ ಸಾಮರ್ಥ್ಯವೂ ಇದೆ. ಟಿ-20 ಪಂದ್ಯಗಳಲ್ಲೂ ಆಫ್ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಬಾಂಗ್ಲಾದೇಶ ಮತ್ತು ಶ್ರೀಲಂಕಾದಂತಹ ತಂಡಗಳು ಅತ್ಯುತ್ತಮ ಆಫ್ ಸ್ಪಿನ್ನರ್‌ಗಳನ್ನು ಹೊಂದಿವೆ. ಅಗತ್ಯವಿದ್ದಾಗ ನಾವು ಸಹ ಅಂತಹ ಬೌಲರ್‍ಗಳನ್ನು ಬಳಸಿಕೊಳ್ಳುತ್ತೇವೆ’ ಎಂದು ಹೇಳಿದ್ದಾರೆ. ದ್ರಾವಿಡ್ ಅವರ ಈ ಸೂಚನೆಯೊಂದಿಗೆ ರವೀಂದ್ರ ಜಡೇಜಾ ಬದಲಿಗೆ ಅಶ್ವಿನ್ ತಂಡ ಸೇರುವುದು ಬಹುತೇಕ ಖಚಿತವಾದಂತಾಗಿದೆ.
ದೀಪಕ್ ಹೂಡಾ ಕೂಡ ಸ್ಪರ್ಧೆಯಲ್ಲಿದ್ದಾರೆ
ರವೀಂದ್ರ ಜಡೇಜಾ ಬದಲಿಗೆ ದೀಪಕ್ ಹೂಡಾ ಸಹ ಆಡುವ 11ರಲ್ಲಿ ಸ್ಥಾನ ಪಡೆಯಬಹುದು. ದೀಪಕ್ ಹೂಡಾ ಬ್ಯಾಟಿಂಗ್ ಜೊತೆಗೆ ಉತ್ತಮವಾಗಿ ಬೌಲಿಂಗ್ ಕೂಡ ಮಾಡುತ್ತಾರೆ. ಇದುವರೆಗೆ ದೀಪಕ್ ಹೂಡಾ ಅವರ ದಾಖಲೆ ಉತ್ತಮವಾಗಿದ್ದು, ವಿಶೇಷವೆಂದರೆ ಅವರು ಇದುವರೆಗೆ ಟೀಂ ಇಂಡಿಯಾ ಪರ ಆಡಿದ ಎಲ್ಲಾ ಪಂದ್ಯಗಳಲ್ಲಿ ತಂಡವೇ ಗೆಲುವು ಸಾಧಿಸಿದೆ. ಹೀಗಾಗಿ ಅಶ್ವಿನ್ ಜೊತೆಗೆ ದೀಪಕ್ ಹೂಡಾ ಸಹ ತಂಡದಲ್ಲಿ ಸ್ಥಾನ ಪಡೆಯುವ ರೇಸ್‍ನಲ್ಲಿದ್ದಾರೆ.
ಇದನ್ನೂ ಓದಿ: Asia Cup 2022: ಮೈದಾನದಲ್ಲೇ ತಾರಕಕ್ಕೇರಿದ ಲಂಕಾ-ಅಫ್ಘನ್ ಆಟಗಾರರ ಕಿತ್ತಾಟ: ಮಧ್ಯ ಪ್ರವೇಶಿಸಿದ ಅಂಪೈರ್!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.