IND vs PAK, Asia Cup 2022 : ಏಷ್ಯಾ ಕಪ್ 2022 ರ ಸೂಪರ್ 4 ರಲ್ಲಿ, ಟೀಂ ಇಂಡಿಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಇಂದು ನಡೆಯಲಿದೆ.
ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡದ ಬಿಗ್ ನ್ಯೂಸ್ ಒಂದು ಹೊರಬಿದ್ದಿದೆ. ಪಾಕಿಸ್ತಾನ ತಂಡ ವೇಗದ ಬೌಲರ್ ಶಹನವಾಜ್ ದಹಾನಿ ಗಾಯದ ಸಮಸ್ಯೆಯಿಂದಾಗಿ ಭಾರತ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಇದು ಪಾಕಿಸ್ತಾನ ತಂಡಕ್ಕೆ ಭಾರಿ ಹಿನ್ನಡೆಯಾಗಿದ್ದು, ಮುಂಬರುವ ಪಂದ್ಯದಲ್ಲಿ ಕೂಡ ಈ ಆಟಗಾರ ತಂಡದಿಂದ ಹೊರಗುಳಿಯಲಿದ್ದಾರೆ.
JUST IN: Shahnawaz Dahani is out of the Asia Cup Super 4 game against India due to a suspected side strain pic.twitter.com/mxBBtAJYOi
— ESPNcricinfo (@ESPNcricinfo) September 3, 2022
ಪಾಕಿಸ್ತಾನ ತಂಡಕ್ಕೆ ಭಾರಿ ಹೊಡೆತ
ಸಧ್ಯ ಶಾಹೀನ್ ಅಫ್ರಿದಿ ಮತ್ತು ವಾಸಿಂ ಜೂನಿಯರ್ ಅನುಪಸ್ಥಿತಿಯಲ್ಲಿ, ಶಾನವಾಜ್ ದಹಾನಿ ಪಾಕಿಸ್ತಾನ ತಂಡದ ಬೌಲಿಂಗ್ ಕ್ರಮಾಂಕದ ಜವಾಬ್ದಾರಿಯನ್ನು ಹೊತ್ತಿದ್ದರು, ಆದರೆ ಅವರ ಗಾಯವು ಪಾಕಿಸ್ತಾನ ತಂಡಕ್ಕೆ ಭಾರಿ ಹೊಡೆತ ನೀಡಿದೆ. ಭಾರತದ ವಿರುದ್ಧದ ಮೊದಲ ಪಂದ್ಯದಲ್ಲಿ ಶಹನವಾಜ್ ದಹಾನಿ ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಶಾನವಾಜ್ ದಹಾನಿ ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಶಾನವಾಜ್ ದಹಾನಿ ಇಂದಿನ ಪಂದ್ಯದಲ್ಲಿ ಆಡುವುದಿಲ್ಲ.
ಇದನ್ನೂ ಓದಿ : Video : IND vs Pak ಪಂದ್ಯಕ್ಕೂ ಮುನ್ನ ವಿಶೇಷ ತಯಾರಿ ನಡೆಸಿದ ವಿರಾಟ್!
ಭಾರತದ ವಿರುದ್ಧ ಅದ್ಭುತ ಪ್ರದರ್ಶನ
2022ರ ಏಷ್ಯಾಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲು ಪಾಕಿಸ್ತಾನ 148 ರನ್ಗಳ ಗುರಿ ನೀಡಿತ್ತು. ಇದರಲ್ಲಿ ಶಹನವಾಜ್ ದಹಾನಿ ಕೊನೆಯ ಓವರ್ಗಳಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದರು. ಅವರು 6 ಎಸೆತಗಳ ಸಹಾಯದಿಂದ 16 ರನ್ ಗಳಿಸಿದರು, ಇದರಲ್ಲಿ ಎರಡು ದೀರ್ಘ ಸಿಕ್ಸರ್ಗಳು ಸೇರಿವೆ. ಆದರೆ ಅವರು ಬೌಲಿಂಗ್ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ ಮತ್ತು ಅವರ ನಾಲ್ಕು ಓವರ್ಗಳ ಕೋಟಾದಲ್ಲಿ 29 ರನ್ ನೀಡಿದರು. ಅಲ್ಲಿ ಪಾಕಿಸ್ತಾನ ತಂಡ 5 ವಿಕೆಟ್ಗಳ ಸೋಲನ್ನು ಎದುರಿಸಬೇಕಾಯಿತು. ಆದರೆ ಪಾಕಿಸ್ತಾನ ಭಾಗದಲ್ಲಿ ಶಹನವಾಜ್ ದಹಾನಿ ಅದ್ಭುತ ಆಟ ತೋರಿದರು.
ಸೂಪರ್ 4ರಲ್ಲಿ ಭಾರತ-ಪಾಕ್ ಹಣಾಹಣಿ
2022ರ ಏಷ್ಯಾಕಪ್ನ ಸೂಪರ್ 4ರಲ್ಲಿ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳು ಸ್ಥಾನ ಪಡೆದಿವೆ. ಏಷ್ಯಾಕಪ್ 2022ರಲ್ಲಿ ಉಭಯ ತಂಡಗಳ ನಡುವಿನ ಎರಡನೇ ಹಣಾಹಣಿ ಇದಾಗಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಕೂಡ ದೊಡ್ಡ ಹಿನ್ನಡೆ ಅನುಭವಿಸಿದೆ. ಟೀಂ ಇಂಡಿಯಾದ ಬಲಿಷ್ಠ ಆಲ್ ರೌಂಡರ್ ರವೀಂದ್ರ ಜಡೇಜಾ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಗಾಯದ ಸಮಸ್ಯೆಯಿಂದಾಗಿ ರವೀಂದ್ರ ಜಡೇಜಾ ಈ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಇದನ್ನೂ ಓದಿ : IND vs PAK : ಈ ಆಟಗಾರನಿಗಿಲ್ಲ ಟೀಂ ಇಂಡಿಯಾದ playing 11ನಲ್ಲಿ ಸ್ಥಾನ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.