Asia Mixed Team Badminton Championship 2023: ಫೆಬ್ರವರಿ 14 ರಿಂದ 19 ರವರೆಗೆ ದುಬೈನಲ್ಲಿ ನಡೆಯಲಿರುವ ಏಷ್ಯಾ ಮಿಶ್ರ ತಂಡ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮಲೇಷ್ಯಾ, ಯುಎಇ ಮತ್ತು ಕಝಾಕಿಸ್ತಾನ್ ಜೊತೆಗೆ ಭಾರತವು ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಅವರ ಸಮ್ಮುಖದಲ್ಲಿ ದುಬೈ ಸ್ಪೋರ್ಟ್ಸ್ ಕೌನ್ಸಿಲ್‌ನಲ್ಲಿ ಡ್ರಾ ಮಾಡಲಾದ ಪಂದ್ಯಾವಳಿಯಲ್ಲಿ 17 ತಂಡಗಳು ಭಾಗವಹಿಸಲಿವೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಈ ಪಂದ್ಯಾವಳಿಯನ್ನು 2021 ರಲ್ಲಿ ನಡೆಸಲು ಸಾಧ್ಯವಾಗಲಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs AUS: ರೋಹಿತ್-ಕೊಹ್ಲಿಗೆ ಕೊಂಚ ರಿಲ್ಯಾಕ್ಸ್: ಇಂಡೋ ಆಸೀಸ್ ಟೆಸ್ಟ್ ಸರಣಿಯಲ್ಲಿ ಆಡುವುದಿಲ್ಲ ಈ ಆಟಗಾರ!


ಹಾಲಿ ಚಾಂಪಿಯನ್ ಚೀನಾ, ಕೊರಿಯಾ, ಸಿಂಗಾಪುರ ಮತ್ತು ಉಜ್ಬೇಕಿಸ್ತಾನ್ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದರೆ, ಸಿ ಗುಂಪಿನಲ್ಲಿ ಇಂಡೋನೇಷ್ಯಾ, ಥಾಯ್ಲೆಂಡ್, ಬಹ್ರೇನ್, ಸಿರಿಯಾ ಮತ್ತು ಲೆಬನಾನ್ ತಂಡಗಳಿವೆ. ಗ್ರೂಪ್ ಡಿ 2017 ರ ಚಾಂಪಿಯನ್ ಜಪಾನ್, ಚೈನೀಸ್ ತೈಪೆ, ಹಾಂಗ್ ಕಾಂಗ್ ಮತ್ತು ಪಾಕಿಸ್ತಾನವನ್ನು ಒಳಗೊಂಡಿದೆ. ಎಲ್ಲಾ ತಂಡಗಳು ರೌಂಡ್ ರಾಬಿನ್ ಮಾದರಿಯಲ್ಲಿ ಆಡಲಿದ್ದು, ಅಗ್ರ ಎರಡು ತಂಡಗಳು ನಾಕೌಟ್ ಹಂತಕ್ಕೆ ಹೋಗಲಿವೆ. ಪ್ರತಿ ಪಂದ್ಯದಲ್ಲಿ ಎರಡು ಸಿಂಗಲ್ಸ್ ಹಾಗೂ ಮೂರು ಡಬಲ್ಸ್ ಪಂದ್ಯಗಳು ನಡೆಯಲಿವೆ.


ಇನ್ನು ಭಾರತ ತಂಡದಲ್ಲಿ ಪಿವಿ ಸಿಂಧು, ಆಕರ್ಷಿ ಕಶ್ಯಪ್, ಲಕ್ಷ್ಯ ಸೇನ್, ಎಚ್‌ಎಸ್ ಪ್ರಣೋಯ್, ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಕೃಷ್ಣ ಪ್ರಸಾದ್ ಗಾರ್ಗ್ ಮತ್ತು ವಿಷ್ಣುವರ್ಧನ್ ಗೌಡ್ ಪಿ, ತ್ರಿಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್, ಅಶ್ವಿನಿ ಭಟ್ ಮತ್ತು ಶಿಖಾ ಗೌತಮ್, ಇಶಾನ್ ಭಟ್ನಾಗರ್ ಮತ್ತು ತನಿಶಾ ಕ್ರಾಸ್ಟೊ ಇದ್ದಾರೆ.


ಭಾರತವು 2017 ರಲ್ಲಿ ಮೊದಲ ಋತುವಿನಲ್ಲಿ ಕ್ವಾರ್ಟರ್-ಫೈನಲ್ ಅನ್ನು ಮೀರಿ ಹೋಗಲು ಸಾಧ್ಯವಾಗಲಿಲ್ಲ. ಆದರೆ 2019 ರಲ್ಲಿ ಗುಂಪು ಹಂತದಲ್ಲಿಯೇ ಸೋಲು ಕಂಡಿತ್ತು. ಈ ಬಾರಿ ಭಾರತೀಯ ಆಟಗಾರರಿಂದ ಅತ್ಯುತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ.


ಇದನ್ನೂ ಓದಿ: IND vs NZ: ಹಾರ್ದಿಕ್ ಪಾಂಡ್ಯಗೆ ತಲೆನೋವಾಗಿ ಪರಿಣಮಿಸಿದ ಈ ಆಟಗಾರನಿಗೆ 3ನೇ ಪಂದ್ಯದಲ್ಲಿ ಸಿಗುತ್ತಾ ಚಾನ್ಸ್?


ಗುಂಪು ಎ: ಚೀನಾ, ದಕ್ಷಿಣ ಕೊರಿಯಾ, ಸಿಂಗಾಪುರ, ಉಜ್ಬೇಕಿಸ್ತಾನ್.


ಗುಂಪು ಬಿ: ಭಾರತ, ಮಲೇಷ್ಯಾ, ಯುಎಇ, ಕಜಕಿಸ್ತಾನ್.


ಗುಂಪು ಸಿ: ಇಂಡೋನೇಷ್ಯಾ, ಥೈಲ್ಯಾಂಡ್, ಬಹ್ರೇನ್, ಸಿರಿಯಾ, ಲೆಬನಾನ್


ಗುಂಪು ಡಿ: ಜಪಾನ್, ಚೈನೀಸ್ ತೈಪೆ, ಹಾಂಗ್ ಕಾಂಗ್, ಪಾಕಿಸ್ತಾನ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.