IND vs NZ: ಹಾರ್ದಿಕ್ ಪಾಂಡ್ಯಗೆ ತಲೆನೋವಾಗಿ ಪರಿಣಮಿಸಿದ ಈ ಆಟಗಾರನಿಗೆ 3ನೇ ಪಂದ್ಯದಲ್ಲಿ ಸಿಗುತ್ತಾ ಚಾನ್ಸ್?

IND vs NZ 3rd T20: ಭಾರತ ತಂಡದ ಸ್ಟಾರ್ ವೇಗದ ಬೌಲರ್ ಶಿವಂ ಮಾವಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಹೆಸರಿಗೆ ತಕ್ಕಂತೆ ಪ್ರದರ್ಶನ ನೀಡಲು ಇನ್ನೂ ಸಾಧ್ಯವಾಗಿಲ್ಲ. ಮೊದಲ ಟಿ20 ಪಂದ್ಯದಲ್ಲಿ 2 ಓವರ್‌ಗಳಲ್ಲಿ 19 ರನ್‌ಗಳನ್ನು ನೀಡಿದ್ದರು. ಎರಡನೇ ಟಿ20 ಪಂದ್ಯದಲ್ಲಿ 1 ಓವರ್‌ನಲ್ಲಿ 11 ರನ್ ನೀಡಿದರು. ಎದುರಾಳಿ ಬ್ಯಾಟ್ಸ್‌ಮನ್‌ಗಳು ಅವರ ವಿರುದ್ಧ ಸಾಕಷ್ಟು ರನ್ ಗಳಿಸಿದರು. ಸದ್ಯ ಮಾವಿ ಟೀಂ ಇಂಡಿಯಾಕ್ಕೆ ಹೊರೆಯಾಗಿದ್ದಾರೆ.

Written by - Bhavishya Shetty | Last Updated : Feb 1, 2023, 03:42 PM IST
    • ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ T20 ಪಂದ್ಯ
    • ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯ
    • ಮೂರು ಪಂದ್ಯಗಳ ಟಿ20 ಸರಣಿ 1-1ರಲ್ಲಿ ಸಮಬಲಗೊಂಡಿದೆ
IND vs NZ: ಹಾರ್ದಿಕ್ ಪಾಂಡ್ಯಗೆ ತಲೆನೋವಾಗಿ ಪರಿಣಮಿಸಿದ ಈ ಆಟಗಾರನಿಗೆ 3ನೇ ಪಂದ್ಯದಲ್ಲಿ ಸಿಗುತ್ತಾ ಚಾನ್ಸ್? title=
Hardik Pandya

IND vs NZ 3rd T20: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ T20 ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮೂರು ಪಂದ್ಯಗಳ ಟಿ20 ಸರಣಿ 1-1ರಲ್ಲಿ ಸಮಬಲಗೊಂಡಿದೆ. ನ್ಯೂಜಿಲೆಂಡ್ ವಿರುದ್ಧದ ಎರಡು ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ಬೌಲರ್‌ಯೊಬ್ಬರು ಅತ್ಯಂತ ಕಳಪೆ ಆಟ ಪ್ರದರ್ಶಿಸಿದ್ದಾರೆ. ಈ ಆಟಗಾರ ಎದುರಾಳಿ ಹೆಚ್ಚು ರನ್ ಕಲೆ ಹಾಕುವಂತೆ ಮಾಡಿದ್ದ. ಈ ಕಾರಣದಿಂದ ನಾಯಕ ಹಾರ್ದಿಕ್ ಪಾಂಡ್ಯ ಮೂರನೇ ಟಿ20 ಪಂದ್ಯದಲ್ಲಿ ಈ ಆಟಗಾರನಿಗೆ ಅವಕಾಶ ನೀಡುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: IND vs AUS: ರೋಹಿತ್-ಕೊಹ್ಲಿಗೆ ಕೊಂಚ ರಿಲ್ಯಾಕ್ಸ್: ಇಂಡೋ ಆಸೀಸ್ ಟೆಸ್ಟ್ ಸರಣಿಯಲ್ಲಿ ಆಡುವುದಿಲ್ಲ ಈ ಆಟಗಾರ!

ಭಾರತ ತಂಡದ ಸ್ಟಾರ್ ವೇಗದ ಬೌಲರ್ ಶಿವಂ ಮಾವಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಹೆಸರಿಗೆ ತಕ್ಕಂತೆ ಪ್ರದರ್ಶನ ನೀಡಲು ಇನ್ನೂ ಸಾಧ್ಯವಾಗಿಲ್ಲ. ಮೊದಲ ಟಿ20 ಪಂದ್ಯದಲ್ಲಿ 2 ಓವರ್‌ಗಳಲ್ಲಿ 19 ರನ್‌ಗಳನ್ನು ನೀಡಿದ್ದರು. ಎರಡನೇ ಟಿ20 ಪಂದ್ಯದಲ್ಲಿ 1 ಓವರ್‌ನಲ್ಲಿ 11 ರನ್ ನೀಡಿದರು. ಎದುರಾಳಿ ಬ್ಯಾಟ್ಸ್‌ಮನ್‌ಗಳು ಅವರ ವಿರುದ್ಧ ಸಾಕಷ್ಟು ರನ್ ಗಳಿಸಿದರು. ಸದ್ಯ ಮಾವಿ ಟೀಂ ಇಂಡಿಯಾಕ್ಕೆ ಹೊರೆಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಮೂರನೇ ಟಿ20 ಪಂದ್ಯದಲ್ಲಿ ಉಮ್ರಾನ್ ಮಲಿಕ್ ಗೆ ಅವಕಾಶ ನೀಡಬಹುದು.

2023ರ ಐಪಿಎಲ್ ಹರಾಜಿನಲ್ಲಿ ಶಿವಂ ಮಾವಿ ಅವರನ್ನು ಗುಜರಾತ್ ಟೈಟಾನ್ಸ್ 6 ಕೋಟಿ ರೂ.ಗೆ ಖರೀದಿಸಿದೆ. ಅವರ ಮೂಲ ಬೆಲೆ ಕೇವಲ 40 ಲಕ್ಷ ರೂ. ಆಗಿತ್ತು. ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ: ICC ಅಂಡರ್-19 ಮಹಿಳಾ ಟಿ20 ಅತ್ಯುತ್ತಮ ತಂಡ ಪ್ರಕಟ: ಈ 3 ಭಾರತೀಯ ಮಹಿಳಾ ಆಟಗಾರಿಗೆ ಸ್ಥಾನ

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ:

ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರಿತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯುಜ್ವೇಂದ್ರ ಸಿಂಗ್ ಚಾಹಲ್, ಅರ್ಷ್‌ದೀಪ್ ಚಾಹಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಪೃಥ್ವಿ ಶಾ, ಮುಕೇಶ್ ಕುಮಾರ್ ಅವರು ಇದುವರೆಗೆ 32 ಪಂದ್ಯಗಳಲ್ಲಿ 30 ವಿಕೆಟ್ ಪಡೆದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News