Asian Games 2023 Cricket Final: ಸೆಪ್ಟೆಂಬರ್ 25 ರಂದು ಅಂದರೆ ಇಂದು ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ನಡೆಯಲಿದೆ. ಈ ಪಂದ್ಯದಲ್ಲಿ ಚಿನ್ನದ ಪದಕಕ್ಕಾಗಿ ಭಾರತ ಮತ್ತು ಶ್ರೀಲಂಕಾ ಕಾದಾಡಲಿದೆ,


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನಿರಂತರ ಕುಸಿತದ ಬಳಿಕ ಇವತ್ತೆಷ್ಟಿದೆ ತಿಳಿಯಿರಿ 10 ಗ್ರಾಂ ಚಿನ್ನದ ರೇಟ್


ಮಹಿಳಾ ಕ್ರಿಕೆಟ್ 2010 ಮತ್ತು 2014 ರಲ್ಲಿ ಏಷ್ಯನ್ ಗೇಮ್ಸ್‌’ನ ಭಾಗವಾಗಿತ್ತು. ಆದರೆ 2018 ರಲ್ಲಿ ಜಕಾರ್ತಾದಲ್ಲಿ ನಡೆದ ಪಂದ್ಯದಲ್ಲಿ  ಅಲಭ್ಯವಾಗಿತ್ತು. ಇನ್ನು ಪಾಕಿಸ್ತಾನವು 2010 ಮತ್ತು 2014ರಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು.


ಇನ್ನು ಈ ಬಾರಿಯ ಪಂದ್ಯಾವಳಿಯಲ್ಲಿ ಭಾರತದ ಪ್ರಯಾಣವು ಕ್ವಾರ್ಟರ್ ಫೈನಲ್‌’ಗೆ ನೇರ ಪ್ರವೇಶದೊಂದಿಗೆ ಪ್ರಾರಂಭವಾಗಿದೆ. ಸ್ಮೃತಿ ಮಂಧಾನ ನಾಯಕತ್ವ ವಹಿಸಿರುವ ಭಾರತದ ಮಹಿಳೆಯರ ತಂಡ ಇದೀಗ ಏಷ್ಯನ್ ಗೇಮ್ಸ್’ನಲ್ಲಿ ಎರಡನೇ ಚಿನ್ನಕ್ಕಾಗಿ ಕಾದಾಟ ನಡೆಸಲಿದೆ.


ಏಷ್ಯನ್ ಗೇಮ್ಸ್ 2023 ಮಹಿಳಾ ಕ್ರಿಕೆಟ್ ಅಂತಿಮ ವೇಳಾಪಟ್ಟಿ ಮತ್ತು ಪಂದ್ಯದ ಸಮಯ ಹೀಗಿದೆ:


ಸೆಪ್ಟೆಂಬರ್ 25 ಸೋಮವಾರ:


  • ಕಂಚಿನ ಪದಕದ ಪಂದ್ಯ: ಬಾಂಗ್ಲಾದೇಶ vs ಪಾಕಿಸ್ತಾನ - 6:30 AM

  • ಚಿನ್ನದ ಪದಕದ ಪಂದ್ಯ: ಭಾರತ vs ಶ್ರೀಲಂಕಾ - 11:30 AM


ಇದನ್ನೂ ಓದಿ: ಏಕದಿನ, ಟೆಸ್ಟ್, ಟಿ20… ಮೂರು ಸ್ವರೂಪದಲ್ಲೂ ಅಗ್ರ ‘ಭಾರತ’! ಅಪರೂಪದ ದಾಖಲೆ ಬರೆದ ಟೀಂ ಇಂಡಿಯಾ


ಇನ್ನು ಫೈನಲ್ ಪಂದ್ಯವನ್ನು ಲೈವ್ ಸ್ಟ್ರೀಮಿಂಗ್ ಸೋನಿ ಲೈವ್’ನಲ್ಲಿ  ವೀಕ್ಷಿಸಬಹುದು. ಸೋನಿ ಸ್ಪೋರ್ಟ್ಸ್ ಟೆನ್ 1 ಎಸ್‌ ಡಿ ಮತ್ತು ಎಚ್‌ ಡಿ (ಇಂಗ್ಲಿಷ್), ಸೋನಿ ಸ್ಪೋರ್ಟ್ಸ್ ಟೆನ್ 3 ಎಸ್‌ ಡಿ & ಎಚ್‌ ಡಿ (ಹಿಂದಿ) ಮತ್ತು ಸೋನಿ ಸ್ಪೋರ್ಟ್ಸ್ ಟೆನ್ 4   & ಎಚ್‌ ಡಿ (ತಮಿಳು ಮತ್ತು ತೆಲುಗು) ಟಿವಿ ಚಾನೆಲ್‌’ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ