Asian Games 2023: ಸ್ಥಗಿತಗೊಂಡಿದ್ದ ಏಷ್ಯನ್ ಕ್ರೀಡಾಕೂಟ 2023 ರ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ನಡೆಯಲಿದೆ. ಏಷ್ಯನ್ ಒಲಿಂಪಿಕ್ ಕೌನ್ಸಿಲ್ (ಒಸಿಎ) ಮಂಗಳವಾರ ಈ ವಿಷಯವನ್ನು ಪ್ರಕಟಿಸಿದೆ. ಇದಕ್ಕೂ ಮೊದಲು ಏಷ್ಯನ್ ಗೇಮ್ಸ್‌ನ 19 ನೇ ಆವ್ರುತ್ತಿಯು ಈ ವರ್ಷ ಸೆಪ್ಟೆಂಬರ್ 10 ರಿಂದ 25 ರವರೆಗೆ ನಡೆಯಬೇಕಿತ್ತು, ಆದರೆ ಚೀನಾದಲ್ಲಿ ಕರೋನವೈರಸ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಈ ವರ್ಷದ ಮೇ 6 ಕ್ಕೆ ಈ ಕ್ರೀಡಾಕೂಟವನ್ನು ಮುಂದೂಡಲಾಗಿದೆ.


COMMERCIAL BREAK
SCROLL TO CONTINUE READING

ಅಭಿಮಾನಿಗಳಿಗೆ ಸಂತಸದ ಸುದ್ದಿ
ಈ ಕುರಿತು ಅಧಿಕೃತ ಹೇಳಿಕೆ ಹೊರಡಿಸಿರುವ OCA, "ಟಾಸ್ಕ್ ಫೋರ್ಸ್ ಕಳೆದ ಎರಡು ತಿಂಗಳಿನಿಂದ ಚೀನಾ ಒಲಿಂಪಿಕ್ ಸಮಿತಿ (COC), ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ ಆಯೋಜಕ ಸಮಿತಿ (HAGOC) ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಕ್ರೀಡಾಕೂಟವನ್ನು ಆಯೋಜಿಸಲು ಸೂಕ್ತ ಸಮಯವನ್ನು ನಿಗದಿಪಡಿಸಲು ವ್ಯಾಪಕ ಚರ್ಚೆ ನಡೆಸಿದೆ" ಎಂದಿದೆ. ಅಷ್ಟೇ ಅಲ್ಲ  ಈ ಆಟಗಳ ಹೋಲ್ಡಿಂಗ್ ಅನ್ನು ಇತರ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳ ದಿನಾಂಕಗಳಿಂದ ಪ್ರತ್ಯೇಕವಾಗಿ ಇರಿಸಲಾಗಿತ್ತು ಎಂದು ಅದು ಹೇಳಿದೆ.


ಇದನ್ನೂ ಓದಿ-Team India: ಈ 3 ಆಟಗಾರರ ಬೆನ್ನುಬಿದ್ದ ಆಯ್ಕೆಗಾರರು, ಈಗ ನಿವೃತ್ತಿಯೇ ಕೊನೆಯ ದಾರಿ!


ಯುವಿ ಹೇಳಿಕೆಗೆ ಪಂತ್‌ ಪ್ರತ್ಯುತ್ತರ: ಗೊಂದಲ ಮೂಡಿಸಿದ ಆಟಗಾರರ ಮಾತುಗಳು


"ಟಾಸ್ಕ್ ಫೋರ್ಸ್ ಶಿಫಾರಸು ಮಾಡಿದ ದಿನಾಂಕಗಳನ್ನು OCA EB ಯಿಂದ ಅನುಮೋದಿಸಲಾಗಿದೆ" ಎಂದು ಓಸಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಸಿಓಸಿ, 'ನಾವು ಓಸಿಎ ಹಾಗೂ ಹೆಚ್ಎಜಿಓಸಿ ಜೊತೆಗೂಡಿ ಕ್ರೀಡಾಕೂಟದ ಯಶಸ್ವಿ ಆಯೋಜನೆಯನ್ನು ಸುನೀಸ್ಚಿತಗೊಳಿಸಲು ಕಾರ್ಯತತ್ಪರತೆಯಿಂದ ಮುಂದುವರೆಯಲಿದ್ದೇವೆ' ಎಂದು ಹೇಳಿದೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.