ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ರಿಷಭ್ ಪಂತ್ ಬಿರುಸಿನ ಇನ್ನಿಂಗ್ಸ್ ಆಡಿ ಟೀಂ ಇಂಡಿಯಾವನ್ನು ಗೆಲ್ಲಿಸಿದ್ದಾರೆ. ರಿಷಬ್ ಪಂತ್ ಅವರ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ನಂತರ, ಟೀಮ್ ಇಂಡಿಯಾದ ಮಾಜಿ ದಿಗ್ಗಜ ಯುವರಾಜ್ ಸಿಂಗ್ ಮಾಡಿದ ಟ್ವೀಟ್ ತೀವ್ರವಾಗಿ ವೈರಲ್ ಆಗಿದೆ. ಈ ಟ್ವೀಟ್ ಮೂಲಕ ಯುವರಾಜ್, ಪಂತ್ ಅವರ ಸ್ಫೋಟಕ ಇನ್ನಿಂಗ್ಸ್ ಹಿಂದೆ ತಮ್ಮ ಕೈವಾಡ ಇದೆ ಎಂದು ಹೇಳಿದ್ದರು. ಯುವರಾಜ್ ಅವರ ಈ ಟ್ವೀಟ್‌ಗೆ ಪ್ರತ್ಯುತ್ತರ ನೀಡುವ ಮೂಲಕ ಪಂತ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣ ಮೂಡಿಸಿದ್ದಾರೆ.
ಇದನ್ನೂ ಓದಿ: ಮೊಗ್ಗಿನ ಮನಸ್ಸುʼ ಸುಂದರ ನೆನಪಿನೊಂದಿಗೆ ಬಿಡುಗಡೆಯಾಯಿತು "ಲವ್ 360" ಸಿನಿಮಾ ಸಾಂಗ್
ಮ್ಯಾಂಚೆಸ್ಟರ್ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ಐತಿಹಾಸಿಕ ಇನ್ನಿಂಗ್ಸ್ ಆಡಿ ಟೀಂ ಇಂಡಿಯಾ ಗೆಲುವಿಗೆ ಕಾರಣರಾಗಿದ್ದರು. ರಿಷಬ್ ಪಂತ್ ಅವರ ಈ ಇನ್ನಿಂಗ್ಸ್ ನಂತರ ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ, ಯುವರಾಜ್ ರಿಷಬ್ ಪಂತ್ ಅವರನ್ನು ಹೊಗಳುತ್ತಾ ಹೀಗೆ ಬರೆದಿದ್ದಾರೆ, "45 ನಿಮಿಷಗಳ ಸಂಭಾಷಣೆ ಅರ್ಥಪೂರ್ಣವಾಗಿದೆ ಎಂದು ತೋರುತ್ತಿದೆ! ಪಂತ್ ಚೆನ್ನಾಗಿ ಆಡಿದ್ದೀರಿ, ನೀವು ನಿಮ್ಮ ಇನ್ನಿಂಗ್ಸ್ ಅನ್ನು ವೇಗಗೊಳಿಸಿದ್ದೀರಿ. ಹಾರ್ದಿಕ್ ಅವರ ಇನ್ನಿಂಗ್ಸ್ ನೋಡಲು ತುಂಬಾ ಖುಷಿಯಾಯಿತು" ಎಂದು ಹೇಳಿದ್ದರು. ಈ ಟ್ವೀಟ್ ಬಳಿಕ, ಪಂತ್ ಅದ್ಭುತವಾಗಿ ಬ್ಯಾಟ್ ಮಾಡಲು ಯುವರಾಜ್ ಕಾರಣವೇ ಎಂಬ ಒಂದೇ ಒಂದು ಪ್ರಶ್ನೆ ಎಲ್ಲ ಅಭಿಮಾನಿಗಳ ಮನದಲ್ಲಿ ಮೂಡಿತ್ತು. ಇದೀಗ ಪಂತ್ ಇದಕ್ಕೆ ಉತ್ತರ ನೀಡಿದ್ದಾರೆ.
ಯುವರಾಜ್ ಟ್ವೀಟ್‌ಗೆ ಪಂತ್ ಉತ್ತರ:
ಭಾನುವಾರ ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ 113 ಎಸೆತಗಳಲ್ಲಿ 110.61 ಸ್ಟ್ರೈಕ್ ರೇಟ್‌ನಲ್ಲಿ 125 ರನ್ ಬಾರಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ ಅವರ ಬ್ಯಾಟ್‌ನಲ್ಲಿ 16 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳು ಕಂಡುಬಂದವು. ಇದೀಗ ಯುವರಾಜ್ ಟ್ವೀಟ್‌ಗೆ ಪಂತ್ ಉತ್ತರ ನೀಡಿದ್ದಾರೆ. ರಿಷಬ್ ಪಂತ್ ಟ್ವೀಟ್ ಮಾಡಿ, "ಹೌದು, ಯುವಿ ಪಾ ಪರಿಣಾಮ ಬೀರಿದೆ" ಎಂದು ಬರೆದಿದ್ದಾರೆ. ಪಂದ್ಯಕ್ಕೂ ಮುನ್ನ ಯುವರಾಜ್ ಸಿಂಗ್ ಅವರೊಂದಿಗೆ 45 ನಿಮಿಷಗಳ ಕಾಲ ಮಾತನಾಡಿ ವಿವರಣೆ ನೀಡಿದ್ದರು ಎಂದು ರಿಷಬ್ ಪಂತ್ ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Arecanut today Price: ಅಡಿಕೆ ಧಾರಣೆಯಲ್ಲಿ ಕುಸಿತ , ಇಂದಿನ ದರ ತಿಳಿಯಿರಿ
ರಿಷಬ್ ಪಂತ್ ಅವರ ಅದ್ಭುತ ಇನ್ನಿಂಗ್ಸ್ ನಂತರವೇ ಟೀಂ ಇಂಡಿಯಾ 3 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಅನ್ನು 2-1 ರಿಂದ ಸೋಲಿಸಿತು. 2014ರ ನಂತರ ಇಂಗ್ಲೆಂಡ್‌ನಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ. ಜೊತೆಗೆ ಮ್ಯಾಂಚೆಸ್ಟರ್ ಮೈದಾನದಲ್ಲಿ, 39 ವರ್ಷಗಳ ಬಳಿಕ ಇಂಗ್ಲೆಂಡ್ ಅನ್ನು ಸೋಲಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿತ್ತು. ಈ ಪಂದ್ಯದಲ್ಲಿ ರಿಷಬ್ ಪಂತ್ ಹೊರತಾಗಿ ಹಾರ್ದಿಕ್ ಪಾಂಡ್ಯ ಕೂಡ 71 ರನ್ ನೀಡಿ 4 ವಿಕೆಟ್ ಪಡೆದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ