Team India ಸ್ಟಾರ್ ವೇಗಿಗೆ ಗಾಯ: ಬದಲಿ ಆಟಗಾರನಾಗಿ ಗಂಟೆಗೆ 157 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಈ ಬೌಲರ್ ಆಯ್ಕೆ
Asian Games 2023: ಚೀನಾದ ಹ್ಯಾಂಗ್’ಝೌನಲ್ಲಿ ನಡೆಯಲಿರುವ 19ನೇ ಏಷ್ಯನ್ ಗೇಮ್ಸ್’ನ ಕ್ವಾರ್ಟರ್’ಫೈನಲ್ ಸುತ್ತಿನಲ್ಲಿ ಭಾರತದ ಮಹಿಳಾ ಮತ್ತು ಪುರುಷರ ಎರಡೂ ತಂಡಗಳು ನೇರವಾಗಿ ಭಾಗವಹಿಸಲಿವೆ.
Asian Games 2023: ಟೀಂ ಇಂಡಿಯಾ ಪ್ರಸ್ತುತ ಏಷ್ಯಾ ಕಪ್ 2023 ಆಡುತ್ತಿದ್ದು, ಈ ಟೂರ್ನಿಯಲ್ಲಿ ಫೈನಲ್’ಗೆ ಲಗ್ಗೆ ಇಟ್ಟಿದೆ. ಇದಾದ ಬಳಿಕ ಭಾರತ ಈ ವರ್ಷ ಇನ್ನೂ 2 ದೊಡ್ಡ ಟೂರ್ನಿಗಳನ್ನು ಆಡಬೇಕಿದೆ. ಸೆಪ್ಟೆಂಬರ್ 23 ಮತ್ತು ಅಕ್ಟೋಬರ್ 8 ರ ನಡುವೆ ಏಷ್ಯನ್ ಗೇಮ್ಸ್ ಒಂದಾದರೆ. ODI ವಿಶ್ವಕಪ್ 2023 ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ. ಆದರೆ ಏಷ್ಯನ್ ಗೇಮ್ಸ್’ಗೂ ಮುನ್ನ ಟೀಂ ಇಂಡಿಯಾದ ಬೌಲರ್ ಗಾಯಗೊಂಡಿದ್ದು, ಅವರ ಸ್ಥಾನಕ್ಕೆ ಉಮ್ರಾನ್ ಮಲಿಕ್ ತಂಡ ಆಯ್ಕೆಯಾಗಬಹುದು ಎನ್ನಲಾಗಿದೆ.
ಇದನ್ನೂ ಓದಿ: ಈ ಭಾಗಗಳಲ್ಲಿ ಮುಂದಿನ 4 ದಿನ ರಣಕೋಟಿ ಮಳೆ: ಚಂಡಮಾರುತ ಸುಳಿಗೆ ಸಿಲುಕುವ ಭೀತಿ, ಎಲ್ಲೆಲ್ಲಿದೆ ಎಚ್ಚರ
ಚೀನಾದ ಹ್ಯಾಂಗ್’ಝೌನಲ್ಲಿ ನಡೆಯಲಿರುವ 19ನೇ ಏಷ್ಯನ್ ಗೇಮ್ಸ್’ನ ಕ್ವಾರ್ಟರ್’ಫೈನಲ್ ಸುತ್ತಿನಲ್ಲಿ ಭಾರತದ ಮಹಿಳಾ ಮತ್ತು ಪುರುಷರ ಎರಡೂ ತಂಡಗಳು ನೇರವಾಗಿ ಭಾಗವಹಿಸಲಿವೆ. ಇದಕ್ಕೂ ಮುನ್ನ ಭಾರತದ ವೇಗದ ಬೌಲರ್ ಶಿವಂ ಮಾವಿ ಗಾಯಗೊಂಡಿದ್ದಾರೆ. ವರದಿಯ ಪ್ರಕಾರ, ಬೆನ್ನುನೋವಿನಿಂದ ಶಿವಂ ಮಾವಿ ಏಷ್ಯನ್ ಗೇಮ್ಸ್’ನಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ.
ಬದಲಿಯಾಗಿ ಉಮ್ರಾನ್ ಮಲಿಕ್:
ಶಿವಂ ಮಾವಿ ಬದಲಿಗೆ ಉಮ್ರಾನ್ ಮಲಿಕ್ ಅವರಿಗೆ ಸ್ಥಾನ ನೀಡುವ ಕುರಿತು ಬಿಸಿಸಿಐ ಶೀಘ್ರದಲ್ಲೇ ಮಾಹಿತಿ ಪ್ರಕಟಿಸಬಹುದು. ಉಮ್ರಾನ್ ಮಲಿಕ್ ಅಸಾಮಾನ್ಯ ಬೌಲರ್, ಇವರ ಬೌಲಿಂಗ್ ಸ್ಪೀಡ್ ಗಂಟೆಗೆ 157 ಕಿಮೀ ವೇಗದಲ್ಲಿದೆ. ಶಿವಂ ಮಾವಿ ಈ ವರ್ಷದ ಆರಂಭದಲ್ಲಿ ಟೀಮ್ ಇಂಡಿಯಾದ ಟಿ20 ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಇದುವರೆಗೆ 6 ಟಿ20 ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ, ಉಮ್ರಾನ್ ಮಲಿಕ್ ಸಹ ಭಾರತಕ್ಕಾಗಿ 10 ಏಕದಿನ ಮತ್ತು 8 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಏಕದಿನದಲ್ಲಿ 13 ಹಾಗೂ ಟಿ20ಯಲ್ಲಿ 11 ವಿಕೆಟ್’ಗಳನ್ನು ಪಡೆದಿದ್ದಾರೆ.
ಏಷ್ಯನ್ ಕ್ರೀಡಾಕೂಟಕ್ಕಾಗಿ ಭಾರತೀಯ ಪುರುಷರ ತಂಡ:
ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್).
ಇದನ್ನೂ ಓದಿ: ಏಷ್ಯಾಕಪ್’ ಮೂಲಕ ಏಕದಿನಕ್ಕೆ ಪಾದಾರ್ಪಣೆ ಮಾಡಲಿರುವ 22ರ ಹರೆಯದ ವೇಗಿ
ಸ್ಟ್ಯಾಂಡ್ ಬೈ ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ ಮತ್ತು ಸಾಯಿ ಸುದರ್ಶನ್.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ