Asian Games 2023: 2023ರ ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಸಂಚಲನ ಮೂಡಿಸಿದ್ದಾರೆ. ಈ ಆಟಗಾರ ಎದುರಾಳಿ ಬೌಲರ್ ಬೆವರಿಳಿಸಿ ತಂಡಕ್ಕೆ ಸುಲಭ ಜಯ ತಂದು ಕೊಟ್ಟಿದ್ದಾರೆ. ಭಾರತ ಅಕ್ಟೋಬರ್ 8 ರಿಂದ ವಿಶ್ವಕಪ್‌ನಲ್ಲಿ ತನ್ನ ಪಯಣವನ್ನು ಆರಂಭಿಸಲಿದೆ. ಈ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ. 2011ರ ನಂತರ ಇದೇ ಮೊದಲ ಬಾರಿಗೆ ಭಾರತ ವಿಶ್ವಕಪ್ ಆತಿಥ್ಯ ವಹಿಸುತ್ತಿದೆ.


COMMERCIAL BREAK
SCROLL TO CONTINUE READING

ಬೌಲರ್‌ಗಳ ಬೆವರಿಳಿಸಿದ ದಾಂಡಿಗ : 
ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದೆ. ಏಷ್ಯನ್  ಗೇಮ್ಸ್ ನಲ್ಲಿ ಬಾಂಗ್ಲಾದೇಶದ  ವಿರುದ್ಧದ ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ಭರ್ಜರಿ ಜಯ ಗಳಿಸಿ ಫೈನಲ್‌ 
ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ. ಈ ಪಂದ್ಯದಲ್ಲಿ ಭಾರತ ತಂಡದಲ್ಲಿದ್ದ ತಿಲಕ್ ವರ್ಮಾ ತನ್ನ ಬಿರುಸಿನ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. 55 ರನ್‌ಗಳ ಅಜೇಯ ಇನ್ನಿಂಗ್ಸ್‌ನಲ್ಲಿ ತಿಲಕ್ ವರ್ಮಾ  6 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. 


ಇದನ್ನೂ ಓದಿ : ವಿಶ್ವಕಪ್ ಹೊಸ್ತಿಲಲ್ಲೇ ಟೀಂ ಇಂಡಿಯಾಗೆ ಆಘಾತ ! ಡೆಂಗ್ಯೂನಿಂದಾಗಿ ಈ ಆಟಗಾರ ಆಡುವುದೇ ಅನುಮಾನ


ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡ ಭಾರತ : 
ಈ ಪಂದ್ಯವನ್ನು ಟೀಂ ಇಂಡಿಯಾ ಸುಲಭವಾಗಿ ಗೆದ್ದುಕೊಂಡಿತು. ಮೊದಲಿಗೆ, ವಾಷಿಂಗ್ಟನ್ ಸುಂದರ್ ಮತ್ತು ಸಾಯಿ ಕಿಶೋರ್ ಅವರ ಅತ್ಯುತ್ತಮ ಬೌಲಿಂಗ್ ಮುಂದೆ ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗಳು ರನ್ ಗಳಿಸುವಲ್ಲಿ  ಸೋತರು.  ಭಾರತದ ಬಿರುಸಿನ ಬೌಲಿಂಗ್ ನಡುವೆ ಬಾಂಗ್ಲಾದೇಶ ತಂಡ ಕೇವಲ 96 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ, ಭಾರತದ ಯಶಸ್ವಿ ಜೈಸ್ವಾಲ್ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ನಂತರ ರಿತುರಾಜ್ ಗಾಯಕ್ವಾಡ್ ಮತ್ತು ತಿಲಕ್ ವರ್ಮಾ ಟೀಂ ಇಂಡಿಯಾವನ್ನು ಫೈನಲ್‌ಗೆ ತಲುಪಿಸುವಲ್ಲಿ ಯಶಸ್ವಿಯಾದರು.  


 


 

 

 

 



 

 

 

 

 

 

 

 

 

 

 

A post shared by Tilak Varma (@tilakvarma9)


ಇದನ್ನೂ ಓದಿ : ಟೀಂ ಇಂಡಿಯಾ ಪಾಲಿಗೆ ಈ ಒಬ್ಬ ಆಟಗಾರ ಸಾಕು ಟ್ರೋಫಿ ಗೆಲ್ಲಿಸಿ ಕೊಡಲು ! ಯಾರಾತ ಗೊತ್ತಾ ?


ಏಷ್ಯನ್ ಕ್ರೀಡಾಕೂಟದಲ್ಲಿ 87 ಪದಕ ಗೆದ್ದ ಭಾರತ : 
ಸುದ್ದಿ ಬರೆಯುವ ವೇಳೆಗೆ ಭಾರತವು ಏಷ್ಯನ್ ಗೇಮ್ಸ್‌ನಲ್ಲಿ 21 ಚಿನ್ನ, 32 ಬೆಳ್ಳಿ ಮತ್ತು 34 ಕಂಚಿನ ಪದಕಗಳನ್ನು ಒಳಗೊಂಡಂತೆ 87 ಪದಕಗಳನ್ನು ಗೆದ್ದಿದೆ . ಈ ಬಾರಿಯ ಏಷ್ಯನ್ ಗೇಮ್ಸ್ ಟೂರ್ನಿ ಭಾರತದ ಪಾಲಿಗೆ ಐತಿಹಾಸಿಕವಾಗಿದೆ.  ಭಾರತ ಈ ಬಾರಿ ಹಳೆಯ ದಾಖಲೆಯನ್ನು ಮುರಿದಿದೆ. ಕಳೆದ ಸೀಸನ್ ನಲ್ಲಿ ್ಲಿ ಭಾರತ ತಂಡ 70 ಪದಕ ಗೆದ್ದಿತ್ತು. ಆದರೆ ಈಗ ಭಾರತ 100 ಪದಕಗಳ   ಸಮೀಪದಲ್ಲಿದೆ. 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ