ವಿಶ್ವಕಪ್ ಹೊಸ್ತಿಲಲ್ಲೇ ಟೀಂ ಇಂಡಿಯಾಗೆ ಆಘಾತ ! ಡೆಂಗ್ಯೂನಿಂದಾಗಿ ಈ ಆಟಗಾರ ಆಡುವುದೇ ಅನುಮಾನ

World cup 2023 : ಅನಾರೋಗ್ಯದ ಕಾರಣದಿಂದ ಭಾನುವಾರ ನಡೆಯಲಿರುವ ಭಾರತದ ಮೊದಲ ಪಂದ್ಯದಲ್ಲಿ ಶುಭಮನ್ ಗಿಲ್ ಮೈದಾನಕ್ಕೆ ಇಳಿಯುವುದು ಅನುಮಾನ ಎನ್ನಲಾಗಿದೆ. 

Written by - Ranjitha R K | Last Updated : Oct 6, 2023, 09:27 AM IST
  • ವಿಶ್ವಕಪ್ ಹೊಸ್ತಿಲಲ್ಲಿರುವಾಗಲೇ ಭಾರತಕ್ಕೆ ಆಘಾತ
  • ಅಕ್ಟೋಬರ್ 8 ರಂದು ಭಾರತ ಆಸ್ಟ್ರೇಲಿಯಾ ಸೆಣೆಸಾಟ
  • ಡೆಂಗ್ಯೂ ನಿಂದ ಬಳಲುತ್ತಿರುವ ಗಿಲ್
ವಿಶ್ವಕಪ್ ಹೊಸ್ತಿಲಲ್ಲೇ ಟೀಂ ಇಂಡಿಯಾಗೆ ಆಘಾತ ! ಡೆಂಗ್ಯೂನಿಂದಾಗಿ ಈ ಆಟಗಾರ ಆಡುವುದೇ ಅನುಮಾನ   title=

World cup 2023 : ವಿಶ್ವಕಪ್  ಹೊಸ್ತಿಲಲ್ಲಿರುವಾಗಲೇ ಭಾರತಕ್ಕೆ ಆಘಾತಕಾರಿ ಸುದ್ದಿ ಎದುರಾಗಿದೆ. ಅಕ್ಟೋಬರ್ 8 ರಂದು ಭಾರತ ಆಸ್ಟ್ರೇಲಿಯಾ ವಿರುದ್ದ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆದರೆ ಶುಭಮನ್ ಗಿಲ್ ಆರೋಗ್ಯ ಸಮಸ್ಯೆ ಇದೀಗ ಟೀಂ ಇಂಡಿಯಾವನ್ನು ಕಾಡುತ್ತಿದೆ. ಅನಾರೋಗ್ಯದ ಕಾರಣದಿಂದ ಭಾನುವಾರ ನಡೆಯಲಿರುವ ಭಾರತದ ಮೊದಲ ಪಂದ್ಯದಲ್ಲಿ ಶುಭಮನ್ ಗಿಲ್ ಮೈದಾನಕ್ಕೆ ಇಳಿಯುವುದು ಅನುಮಾನ ಎನ್ನಲಾಗಿದೆ. 

ಡೆಂಗ್ಯೂ ನಿಂದ ಬಳಲುತ್ತಿರುವ ಗಿಲ್ : 
ಸ್ಪೋಟಕ ಬ್ಯಾಟ್ಸ್ ಮ್ಯಾನ್ ಗಿಲ್ ಇತ್ತೀಚಿನ ದಿನಗಳಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಇದೀಗ ಶುಭಮನ್ ಗಿಲ್ ಗೆ ಡೆಂಗ್ಯೂ ಇರುವುದು ಪತ್ತೆಯಾಗಿದೆ. 

ಇದನ್ನೂ ಓದಿ : ಟೀಂ ಇಂಡಿಯಾ ಪಾಲಿಗೆ ಈ ಒಬ್ಬ ಆಟಗಾರ ಸಾಕು ಟ್ರೋಫಿ ಗೆಲ್ಲಿಸಿ ಕೊಡಲು ! ಯಾರಾತ ಗೊತ್ತಾ ?

ಶುಭಮನ್ ಗಿಲ್ ಆದಬಹುದೇ ಇಂದು ನಿರ್ಧಾರ : 
ಚೆನ್ನೈಗೆ ಬಂದಿಳಿದ ನಂತರ ಶುಭ್‌ಮನ್‌ ಗಿಲ್ ಗೆ ವಿಪರೀತ ಜ್ವರ ಕಾಡಿತ್ತು. ಈ ಹಿನ್ನೆಲೆಯಲ್ಲಿ ಗಿಲ್ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ಗಿಲ್ ಅವರನ್ನು ದೈಹಿಕ ಪರೀಕ್ಷೆಗೆ ಒಳಪಡಿಸಲಾಗುವುದು.  ಇದಾದ ನಂತರವಷ್ಟೇ ಗಿಲ್ ಆರಂಭಿಕ ಪಂದ್ಯದಲ್ಲಿ ಭಾಗವಹಿಸುತ್ತಾರೆಯೋ ಇಲ್ಲವೋ ಎನ್ನುವುದು ತಿಳಿಯಲಿದೆ. 

ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗಿಲ್ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಿದ್ದು, ಇಂದಿನ ಟೆಸ್ಟ್ ವರದಿ ಬಂದ ನಂತರವಷ್ಟೇ ಗಿಲ್ ಲಭ್ಯತೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. 

ಇದನ್ನೂ ಓದಿ : ಪತ್ನಿಯಿಂದ ವಿಚ್ಛೇದನ ಪಡೆದ ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟರ್‌, ದೂರವಾಗಲು ಮಾನಸಿಕ ಹಿಂಸೆಯೇ ಕಾರಣ!

ವೈದ್ಯಕೀಯ ತಂಡದ ನಿರ್ಧಾರ : 
ಡೆಂಗ್ಯೂ ರೋಗಿಗಳು ಗುಣಮುಖರಾಗಲು 7-10 ದಿನಗಳನ್ನು ತೆಗೆದುಕೊಳ್ಳುತ್ತದೆ. ಇದು ಸಾಮಾನ್ಯ ಜ್ವರ ಅಲ್ಲ. ವೈರಲ್ ಜ್ವರ ಆಗಿದ್ದರೆ, ಆಂಟಿ ಬಯೋಟಿಕ್ ಗಳನ್ನೂ ತೆಗೆದುಕೊಂಡು ಆಟಗಾರನನ್ನು ಮೈದಾನಕ್ಕೆ ಇಳಿಸಬಹುದು. ಆದರೆ ಡೆಂಗ್ಯೂ ಹಾಗಲ್ಲ. ಈಗ ಗಿಲ್ ಆಡುತ್ತಾರೆಯೋ ಇಲ್ಲವೋ ಎನ್ನುವುದು ವೈದ್ಯಕೀಯ ತಂಡದ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ. 

ಅನಾರೋಗ್ಯದ ಕಾರಣ ಗಿಲ್ ಅವರು ಮೊದಲ ಪಂದ್ಯದಿಂದ ಹೊರಗುಳಿದರೆ ಕೆಎಲ್ ರಾಹುಲ್ ಅಥವಾ ಇಶಾನ್ ಕಿಶನ್ ರೋಹಿತ್ ಶರ್ಮಾ ಜೊತೆ ಒಪನರ್ ಆಗಿ ಬರುವ ಸಾಧ್ಯತೆ ಇದೆ. 

ಇದನ್ನೂ ಓದಿ : ಹೊಸ ಇತಿಹಾಸದ ಹೊಸ್ತಿಲಲ್ಲಿ ರೋಹಿತ್ ಶರ್ಮಾ ! ವಿಶ್ವಕಪ್ ನಲ್ಲಿ ಬರೆಯಲಿದ್ದಾರೆ ಅತಿ ದೊಡ್ಡ ವಿಶ್ವ ದಾಖಲೆ

ಆದರೆ, ಗಿಲ್ ಅನುಪಸ್ಥಿತಿ ಮಾತ್ರ ಖಂಡಿತವಾಗಿಯೂ ಟೀಂ ಇಂಡಿಯಾ ವನ್ನು ಕಾಡಲಿದೆ. ಶುಭಮನ್ ಗಿಲ್  ಭಾರತ ತಂಡದ ಅತ್ಯಂತ ವಿಶ್ವಾಸಾರ್ಹ ಸ್ಕೋರರ್ ಆಗಿದ್ದು, ಈ ವರ್ಷ ODIಗಳಲ್ಲಿ 70 ಕ್ಕೂ ಹೆಚ್ಚು ರನ್‌ಗಳ ಸರಾಸರಿ ಹೊಂದಿದ್ದಾರೆ. ಅಲ್ಲದೆ ಅತ್ಯುತ್ತಮ ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳ ಪಟ್ಟಿಯಲ್ಲಿ ನಿಲ್ಲುತ್ತಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News