Unbeaten Records in the World Cup: ಕೆಲವೇ ದಿನಗಳಲ್ಲಿ ಅಂದರೆ ಅಕ್ಟೋಬರ್ 5ರಿಂದ ಐಸಿಸಿ ಕ್ರಿಕೆಟ್ ವಿಶ್ವಕಪ್ ಪ್ರಾರಂಭವಾಗಲಿದ್ದು, ಈ ಮಹಾ ಈವೆಂಟ್’ಗೆ ಭಾರತದ ಆತಿಥ್ಯವಿದೆ. ಈ ಬಾರಿಯ ವಿಶ್ವಕಪ್ 13ನೇ ಆವೃತ್ತಿಯಾಗಿದ್ದು, 10 ತಂಡಗಳು ಕ್ರೀಡಾ ಲೋಕಕ್ಕೆ ವೈಭವವನ್ನು ತುಂಬಲಿದೆ.


COMMERCIAL BREAK
SCROLL TO CONTINUE READING

ಇನ್ನು 2019ರಲ್ಲಿ ಇಂಗ್ಲೆಂಡ್ ವಿಶ್ವಕಪ್ ಗೆದ್ದಿದ್ದು, ಈ ಬಾರಿ ಹಾಲಿ ಚಾಂಪಿಯನ್ಸ್ ಆಗಿ ಕಣಕ್ಕಿಳಿಯಲಿದ್ದಾರೆ, ಮತ್ತೊಂದೆಡೆ ಆಸ್ಟ್ರೇಲಿಯಾ, ಭಾರತ ಮತ್ತು ಪಾಕಿಸ್ತಾನ ತಂಡಗಳು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳೆಂದು ಅನೇಕ ದಿಗ್ಗಜರು ಹೇಳಿಕೆಯನ್ನು ನೀಡಿದ್ದಾರೆ.


ಇದನ್ನೂ ಓದಿ: ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ಆಟಗಾರ ಯಾರು ಗೊತ್ತಾ?


ಈ ಎಲ್ಲದರ ಮಧ್ಯೆ ಈ ವಿಶ್ವಕಪ್ ವಿಶೇಷ ವರದಿಯಲ್ಲಿ ಇದುವರೆಗೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಾಗದ ವಿಶ್ವಕಪ್ ದಾಖಲೆಗಳ ಬಗ್ಗೆ ಮಾಹಿತಿಯನ್ನು ಪ್ರಸ್ತುತಪಡಿಸಲಿದ್ದೇವೆ.


ವಿಶ್ವಕಪ್‌’ನಲ್ಲಿ ನಾಲ್ಕು ಸತತ ಶತಕಗಳು:


2015 ರ ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಶ್ರೀಲಂಕಾದ ದಿಗ್ಗಜ ಬ್ಯಾಟ್ಸ್’ಮನ್ ಕುಮಾರ್ ಸಂಗಕ್ಕಾರ ಸತತ ನಾಲ್ಕು ಪಂದ್ಯಗಳಲ್ಲಿ ಶತಕ ಸಿಡಿಸಿದ್ದರು. 105* (vs ಬಾಂಗ್ಲಾದೇಶ), 117* (vs ಇಂಗ್ಲೆಂಡ್), 104 (vs ಆಸ್ಟ್ರೇಲಿಯಾ) ಮತ್ತು 124 (vs ಸ್ಕಾಟ್ಲೆಂಡ್)


ಒಂದು ಓವರ್’ನಲ್ಲಿ 6 ಸಿಕ್ಸರ್:


2007 ರಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಅವರು ಒಂದು ಓವರ್’ನಲ್ಲಿ 6 ಸಿಕ್ಸರ್ ಬಾರಿಸಿ, ವಿಶಿಷ್ಟ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ನೆದರ್ಲ್ಯಾಂಡ್ಸ್ ವಿರುದ್ಧ ಸೃಷ್ಟಿಸಿದ್ದರು. ಟಿ20 ವಿಶ್ವಕಪ್’ನಲ್ಲಿ .ಭಾರತೀಯ ಬ್ಯಾಟರ್ ಯುವರಾಜ್ ಸಿಂಗ್ ಈ ದಾಖಲೆ ಬರೆದಿದ್ದಾರೆ. ಆದರೆ ಏಕದಿನ ವಿಶ್ವಕಪ್’ನಲ್ಲಿ ಈ ಸಾಧನೆ ಮಾಡಿದ ಏಕೈಕ ಬ್ಯಾಟರ್ ಗಿಬ್ಸ್.


ನಾಲ್ಕು ಎಸೆತಕ್ಕೆ ನಾಲ್ಕು ವಿಕೆಟ್‌:


ಏಕದಿನ ಪಂದ್ಯಗಳಲ್ಲಿ ಓರ್ವ ಬೌಲರ್ ಸತತ ನಾಲ್ಕು ವಿಕೆಟ್ ಪಡೆದ ಉದಾಹರಣೆ ಇದೆ. 2007ರ ಗಯಾನಾದಲ್ಲಿ ನಡೆದ ಡಬ್ಲ್ಯೂಸಿಯಲ್ಲಿ ಶ್ರೀಲಂಕಾದ ಲಸಿತ್ ಮಾಲಿಂಗ ದಕ್ಷಿಣ ಆಫ್ರಿಕಾ ವಿರುದ್ಧ ಈ ಮೈಲಿಗಲ್ಲನ್ನು ಸಾಧಿಸಿದ್ದರು. ಶಾನ್ ಪೊಲಾಕ್, ಆಂಡ್ರೆ ಹಾಲ್, ಜಾಕ್ವೆಸ್ ಕಾಲಿಸ್ ಮತ್ತು ಮಖಾಯಾ ನ್ಟಿನಿ ಅವರ ವಿಕೆಟ್ ಕಬಳಿಸಿದ್ದರು.


ಅತ್ಯಧಿಕ ವೈಯಕ್ತಿಕ ಸ್ಕೋರ್:


ಫೆಬ್ರವರಿ 2015 ರಂದು ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಡಬಲ್-ಸೆಂಚುರಿ ಬಾರಿಸಿದರು. ಇದು ಅತ್ಯಧಿಕ ವೈಯಕ್ತಿಕ ಡಬ್ಲ್ಯೂಸಿ ಸ್ಕೋರ್ ಆಗಿ ಉಳಿದಿದೆ.


ಒಂದು ಆವೃತ್ತಿಯಲ್ಲಿ ಹೆಚ್ಚು ವಿಕೆಟ್‌ ಪಡೆದ ಆಟಗಾರ:


ಆಸ್ಟ್ರೇಲಿಯಾದ ಸ್ಪೀಡ್ ಮರ್ಚೆಂಟ್ ಮಿಚೆಲ್ ಸ್ಟಾರ್ಕ್ 2019 ರ ಡಬ್ಲ್ಯೂಸಿಯನ್ನು ಅತಿ ಹೆಚ್ಚು ವಿಕೆಟ್ ಪಡೆದವರಾಗಿ (10 ಪಂದ್ಯಗಳಲ್ಲಿ 27 ವಿಕೆಟ್) ದಾಖಲೆ ನಿರ್ಮಿಸಿದ್ದಾರೆ.


ಇದನ್ನೂ ಓದಿ: ಒಂದು ಓವರ್ ನಲ್ಲಿ 4, 6, 4, 1, 6, ! ಟೀಂ ಇಂಡಿಯಾಗೆ ಸಿಕ್ಕಾಯ್ತು ಮ್ಯಾಚ್ ಫಿನಿಶರ್ ! ಬ್ಯಾಟ್ ಹಿಡಿದರೆ ಸಾಕು ರನ್ ಮಳೆ 


ಏಕದಿನ ಡಬ್ಲ್ಯೂಸಿಯಲ್ಲಿ ಸತತ ಗೆಲುವುಗಳು:


ಸತತ ಡಬ್ಲ್ಯೂಸಿ ಪಂದ್ಯಗಳನ್ನು ಗೆದ್ದ ಆಸ್ಟ್ರೇಲಿಯಾ ಈ ದಾಖಲೆಯನ್ನು ಹೊಂದಿದೆ. ಜೂನ್ 20, 1999 ಮತ್ತು ಮಾರ್ಚ್ 19, 2011 ರ ನಡುವೆ 27 ಬ್ಯಾಕ್-ಟು-ಬ್ಯಾಕ್ ಪಂದ್ಯಗಳನ್ನು ಗೆದ್ದಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ