Athiya Shetty Reaction : ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ, ಕನ್ನಡಿಗ ಕೆಎಲ್ ರಾಹುಲ್ ಜೊತೆಗಿನ ವಿವಾಹದ ವದಂತಿಗಳ ಬಗ್ಗೆ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮೌನ ಮುರಿದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯಲ್ಲಿ ಪೋಸ್ಟ್ ಮಾಡುವ ಮೂಲಕ ಅಥಿಯಾ ತನ್ನ ಮದುವೆಯ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸ್ಟೋರಿಯಲ್ಲಿ, ಮದುವೆಗೆ ನನಗೂ ಆಹ್ವಾನ ಬರುವ ನಿರೀಕ್ಷೆ ಇದೆ ಎಂದು ಬರೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ವದಂತಿಗಳನ್ನು ತಳ್ಳಿಹಾಕಿದ ಅಥಿಯಾ ಶೆಟ್ಟಿ 


ಕಳೆದ ಕೆಲವು ದಿನಗಳಿಂದ ಆಥಿಯಾ, ಕೆಎಲ್ ರಾಹುಲ್ ನನ್ನು ಮುಂದಿನ ಮೂರು ತಿಂಗಳಲ್ಲಿ ಮದುವೆಯಾಗಲು ಪ್ಲಾನ್ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳಿವೆ. ಈ ಬಗ್ಗೆ ಆಥಿಯಾ ಶೆಟ್ಟಿ, ಇನ್ನು 3 ತಿಂಗಳಲ್ಲಿ ನಡೆಯಲಿರುವ ಈ ಮದುವೆಗೆ ನನಗು ಆಹ್ವಾನಿಸುತ್ತಾರೆ ಎಂದು ಬರೆದುಕೊಳ್ಳುವ ಮೂಲಕ ಈ ವದಂತಿಗಳನ್ನು ತಳ್ಳಿ ಹಾಕಿದ್ದಾರೆ.


ಆಥಿಯಾ-ರಾಹುಲ್ ಮುಂಬೈನಲ್ಲಿ ಹೊಸ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಈ ಇಬ್ಬರು 'ಲಿವ್-ಇನ್ ರಿಲೇಷನ್ ಶಿಪ್'ನಲ್ಲಿರಲು ಪ್ಲಾನ್ ಮಾಡುತ್ತಿದ್ದಾರೆ ಎಂಬ ವದಂತಿಗಳನ್ನು ಅಥಿಯಾ ಈ ಹಿಂದೆ ತಳ್ಳಿಹಾಕಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ