ಸುಮಾರು 8 ವರ್ಷಗಳ ಬಳಿಕ ಕ್ರಿಕೆಟ್’ಗೆ ಮರಳಿದ ವಿಶ್ವದ ದಿಗ್ಗಜ ಬೌಲರ್! ಈತ ವಿರಾಟ್ ಕೊಹ್ಲಿ ನೆಚ್ಚಿನ ಆಟಗಾರ
Indian Premier League 2024: ಆಸ್ಟ್ರೇಲಿಯಾದ ದಿಗ್ಗಜ ಬೌಲರ್ ಮಿಚೆಲ್ ಸ್ಟಾರ್ಕ್ ಸುಮಾರು 8 ವರ್ಷಗಳ ನಂತರ ಇಂಡಿಯನ್ ಪ್ರೀಮಿಯರ್ ಲೀಗ್’ಗೆ ಮರಳಲು ಸಿದ್ಧರಾಗಿದ್ದಾರೆ.
Indian Premier League 2024: ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಆಗಿದೆ. ಪ್ರತಿಯೊಬ್ಬ ಆಟಗಾರನಿಗೂ ಈ ಟೂರ್ನಿಯಲ್ಲಿ ಆಡಬೇಕು ಎಂಬ ಕನಸಿರುತ್ತದೆ. ಆದರೆ ಒಬ್ಬ ಆಟಗಾರ ಕಳೆದ 8 ವರ್ಷಗಳಿಂದ ಈ ಲೀಗ್’ನಿಂದ ಹೊರಗಿದ್ದಾರೆ. ಇದೀಗ ಈ ಆಟಗಾರ ಮುಂದಿನ ವರ್ಷ ಅಂದರೆ ಐಪಿಎಲ್ 2024ರ ಭಾಗವಾಗಲು ಸಿದ್ಧ ಎಂದು ಘೋಷಿಸಿದ್ದಾರೆ. ಈ ಆಟಗಾರನನ್ನು ಪ್ರಸ್ತುತ ವಿಶ್ವದ ಅತ್ಯಂತ ಡೇಂಜರಸ್ ಬೌಲರ್’ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಮತ್ತೆ ಆರಂಭವಾಗಲಿದೆಯೇ ಭಾರತ vs ಪಾಕಿಸ್ತಾನ ಕ್ರಿಕೆಟ್ ಸರಣಿ! ಅಧ್ಯಕ್ಷ ಬಿನ್ನಿ ಹೇಳಿದ್ದು ಹೀಗೆ…
ಆಸ್ಟ್ರೇಲಿಯಾದ ದಿಗ್ಗಜ ಬೌಲರ್ ಮಿಚೆಲ್ ಸ್ಟಾರ್ಕ್ ಸುಮಾರು 8 ವರ್ಷಗಳ ನಂತರ ಇಂಡಿಯನ್ ಪ್ರೀಮಿಯರ್ ಲೀಗ್’ಗೆ ಮರಳಲು ಸಿದ್ಧರಾಗಿದ್ದಾರೆ. ಮುಂದಿನ ವರ್ಷ ಜೂನ್’ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್’ಎಯಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ದೃಷ್ಟಿಯಿಂದ ಉತ್ತಮವಾಗಿ ತಯಾರಿ ನಡೆಸಲು ಐಪಿಎಲ್’ನಲ್ಲಿ ಭಾಗವಹಿಸುವುದಾಗಿ ಮಿಚೆಲ್ ಸ್ಟಾರ್ಕ್ ಬಹಿರಂಗಪಡಿಸಿದ್ದಾರೆ. ಮಿಚೆಲ್ ಸ್ಟಾರ್ಕ್ ಕೊನೆಯ ಬಾರಿಗೆ 2015 ರಲ್ಲಿ ಐಪಿಎಲ್ ಆಡಿದ್ದರು.
ವಿಲೋ ಟಾಕ್ ಹೆಸರಿನ ಪಾಡ್’ಕ್ಯಾಸ್ಟ್’ನಲ್ಲಿ ಮಿಚೆಲ್ ಸ್ಟಾರ್ಕ್ ಮಾತನಾಡಿದ್ದು, “ನಾನು ಐಪಿಎಲ್ ಆಡಿ 8 ವರ್ಷಗಳಾಗಿವೆ. ಮುಂದಿನ ವರ್ಷ ನಾನು ಖಂಡಿತವಾಗಿಯೂ ಈ ಪಂದ್ಯಾವಳಿಯಲ್ಲಿ ಪುನರಾಗಮನ ಮಾಡಲಿದ್ದೇನೆ. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್’ನಲ್ಲಿ ಇದು ನನಗೆ ಸಾಕಷ್ಟು ನೆರವಾಗಲಿದೆ. ಈ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದೇವೆ. ಅದರ ನಂತರ ನಾವು ಕೆಲವು ಟೆಸ್ಟ್ ಸರಣಿಗಳನ್ನು ಆಡಬೇಕಾಗಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶ್ರೀಕೃಷ್ಣನ ಹೃದಯದಲ್ಲಿದೆ ಈ 4 ರಾಶಿಗಳಿಗೆ ತೀರಾ ವಿಶೇಷ ಸ್ಥಾನ: ಬೇಡಿದನ್ನೆಲ್ಲಾ ಮನಸಾರೆ ನೀಡುವ ದೇವಕಿಸುತ
ಮಿಚೆಲ್ ಸ್ಟಾರ್ಕ್ ಐಪಿಎಲ್’ನಲ್ಲಿ ಕೊನೆಯ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್’ಸಿಬಿ) ತಂಡದ ಭಾಗವಾಗಿದ್ದರು. ಇದುವರೆಗೆ 27 ಐಪಿಎಲ್ ಪಂದ್ಯಗಳನ್ನು ಆಡಿರುವ ಅವರು 7.17 ಎಕಾನಮಿ ದರದಲ್ಲಿ 34 ವಿಕೆಟ್ ಪಡೆದಿದ್ದಾರೆ. ತಮ್ಮ ಕೊನೆಯ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಿದ್ದರು. ಆ ಪಂದ್ಯದಲ್ಲಿ ಸ್ಟಾರ್ಕ್ 4 ಓವರ್ ಗಳಲ್ಲಿ 27 ರನ್ ನೀಡಿ 1 ವಿಕೆಟ್ ಪಡೆದಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.