Australia vs India: `ಭಾರತ ತಂಡವನ್ನು ಎಂದೆಂದಿಗೂ ಲಘುವಾಗಿ ಪರಿಗಣಿಸಬೇಡಿ`
ಭಾರತ ಕ್ರಿಕೆಟ್ ತಂಡವು ಆಸಿಸ್ ವಿರುದ್ಧ ಸಾಧಿಸಿರುವ ಐತಿಹಾಸಿಕ ಗೆಲುವಿನ ಕುರಿತಾಗಿ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ಮುಖ್ಯ ತರಬೇತುದಾರ ಜಸ್ಟಿನ್ ಲ್ಯಾಂಗರ್ ಆ ದೇಶದ ತಂಡವನ್ನು ಎಂದೆಂದಿಗೂ ಲಘುವಾಗಿ ಪರಿಗಣಿಸಬೇಡಿ` ಎಂದು ಪ್ರತಿಕ್ರಿಯಿಸಿದ್ದಾರೆ.
ನವದೆಹಲಿ: ಭಾರತ ಕ್ರಿಕೆಟ್ ತಂಡವು ಆಸಿಸ್ ವಿರುದ್ಧ ಸಾಧಿಸಿರುವ ಐತಿಹಾಸಿಕ ಗೆಲುವಿನ ಕುರಿತಾಗಿ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ಮುಖ್ಯ ತರಬೇತುದಾರ ಜಸ್ಟಿನ್ ಲ್ಯಾಂಗರ್ ಆ ದೇಶದ ತಂಡವನ್ನು ಎಂದೆಂದಿಗೂ ಲಘುವಾಗಿ ಪರಿಗಣಿಸಬೇಡಿ' ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ಟೆಸ್ಟ್ ಗೆಲುವಿನ ನಂತರ ದ್ರಾವಿಡ್ ಗೆ ಮೆಚ್ಚುಗೆಯ ಸುರಿಮಳೆ ಗೈಯುತ್ತಿರುವುದೇಕೆ?
'ಇದು ನಂಬಲಾಗದ ಟೆಸ್ಟ್ ಸರಣಿಯಾಗಿದೆ ಮತ್ತು ಕೊನೆಯಲ್ಲಿ ಯಾವಾಗಲೂ ವಿಜೇತ ಅಥವಾ ಸೋತವನು ಇರುತ್ತಾನೆ.ಇಂದು ಟೆಸ್ಟ್ ಕ್ರಿಕೆಟ್ ನ ಗೆಲುವಾಗಿದೆ.ಇದು ನಮಗೆ ಧೀರ್ಘ ಸಮಯದವರೆಗೆ ಕಾಡಲಿದೆ.ಈ ಸಂಪೂರ್ಣ ಗೆಲುವಿಗೆ ಭಾರತವು ಅರ್ಹವಾಗಿದೆ. ಅವರು ಅತ್ಯುತ್ತಮವಾಗಿ ಆಡಿದ್ದಾರೆ, ಆದರೆ ಇದರಿಂದ ನಾವು ಪಾಠವನ್ನು ಕಲಿತಿದ್ದೇವೆ "ಎಂದು ಲ್ಯಾಂಗರ್ ಚಾನೆಲ್ 7 ಗೆ ತಿಳಿಸಿದರು.
Australia vs India: ಭಾರತ ತಂಡದ ಐತಿಹಾಸಿಕ ಟೆಸ್ಟ್ ಗೆಲುವಿಗೆ Memes ಗಳ ಸುರಿಮಳೆ
ಅಡಿಲೇಡ್ ಸೋಲಿನ ನಂತರದ ಮತ್ತು ವಿಶೇಷವಾಗಿ ಜಸ್ಪ್ರಿತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅವರಂತಹ ದೊಡ್ಡ ಆಟಗಾರರನ್ನು ಗಾಯದ ನಡುವೆಯೂ ನೀಡಿರುವ ಪ್ರದರ್ಶನ ಅದ್ಬುತ ಎಂದು ಹೇಳಿದರು.
ಭಾರತವು ಹೊಸ ಸ್ಟಾರ್ ಗಳಾದ ಶುಬ್ಮನ್ ಗಿಲ್(Shubman Gill) , ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ರನ್ನು ಕಂಡುಹಿಡಿದಿದೆ, ಅವರು ಎಂದಿಗೂ ಸೋಲದ ಮನೋಭಾವದಿಂದ ಆಸೀಸ್ ತಂಡವನ್ನು ಆಶ್ಚರ್ಯಗೊಳಿಸಿದರು.
ಇದನ್ನೂ ಓದಿ: Ind vs Aus: ಟೆಸ್ಟ್ ಗೆದ್ದ 'ಟೀಮ್ ಇಂಡಿಯಾಗೆ' ಬಿಸಿಸಿಐನಿಂದ ಭರ್ಜರಿ ಗಿಫ್ಟ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ