T20 World Cup 2024: ಆಸ್ಟ್ರೇಲಿಯಾದ ಮಾಧ್ಯಮಗಳು ಮತ್ತೊಮ್ಮೆ ಟೀಂ ಇಂಡಿಯಾದ(Team India) ವಿರೋಧವಾಗಿ ಲೇಖನ ಬರೆಯುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. 2024 ರ ಟಿ20 ವಿಶ್ವಕಪ್‌ನಲ್ಲಿ(T20 World Cup 2024) ಭಾರತದ ಗೆಲುವು ಸಾಧಿಸುತ್ತದೆ ಎನ್ನುವ ಬಗ್ಗೆ ಅನುಮಾನ ಇತ್ತು, ಈ ಕುರಿತು ಅಂದಾಜು ಮಾಡಿದ್ದ ಆಸಿಸ್‌ ಮಾಧ್ಯಮಗಳು(Australian Media) ಭಾರತ ತಂಡದ ವಿರೋಧವಾಗಿ ಲೇಖನಗಳನ್ನು ಬರೆಯಲು ಆರಂಭಿಸಿದ್ದಾರೆ. ಇತರ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಟೀಂ ಇಂಡಿಯಾದ ಯಶಸ್ಸನ್ನು ಶ್ಲಾಘಿಸಿ ಲೇಖನಗಳನ್ನು ಬರೆದರೆ, ಆಸೀಸ್ ಮಾಧ್ಯಮಗಳು ವೈಫಲ್ಯದ ಮೂಲಕ ದಕ್ಷಿಣ ಆಫ್ರಿಕಾ ಯಶಸ್ಸು ಸಾಧಿಸಿದೆ ಎಂದು ಬರೆದಿವೆ.


COMMERCIAL BREAK
SCROLL TO CONTINUE READING

" ದಕ್ಷಿಣ ಆಫ್ರಿಕಾ ತಂಡವನ್ನು ಉಸಿರುಗಟ್ಟಿಸುವ ಮೂಲಕ, ಭಾರತ ಟಿ20 ವಿಶ್ವಕಪ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ" (Gut-wrenching: South Africa's choke puts India on top of T20 World Cup) ಎಂದು ಶೀರ್ಷಿಕೆ ನೀಡುರುವ ಲೇಖನದಲ್ಲಿ. "ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಎಲ್ಲವೂ ಕೂಡಿ ಬಂದಿದೆ. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿಫಲವಾಗಿದ್ದು, ಅಂಪೈರ್‌ಗಳ ನಿರ್ಧಾರಗಳು ಭಾರತ ತಂಡವನ್ನು ಗೆಲ್ಲುವಂತೆ ಮಾಡಿದೆ " ಎಂದು ತಮ್ಮ ಲೇಖನದಲ್ಲಿ ಬರೆದಿದ್ದಾರೆ. ಫೈನಲ್ ತಲುಪಿದ ಮೇಲೂ ಆಸೀಸ್ ಮಾಧ್ಯಮಗಳು ಹೀಗೆ ವಿಷ ಉಗುಳಿರುವುದು ಭಾರತದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.


ಇದನ್ನೂ ಓದಿ: "ನಾನು ನಿರುದ್ಯೋಗಿ, ಯಾವುದಾದ್ರೂ ಆಫರ್‌ ಇದ್ರೆ ಹೇಳಿ" ಎಂದ ರಾಹುಲ್‌ ದ್ರಾವಿಡ್‌


ಐಸಿಸಿಗೆ(ICC) ಅನುಕೂಲಕರವಾದ ವೇಳಾಪಟ್ಟಿಯೊಂದಿಗೆ ಫೈನಲ್ ತಲುಪಿದ್ದಾಗಿ ಈ ಲೇಕನದಲ್ಲಿ ಆಸಿಸ್‌ ಮಾಧ್ಯಮ ಪ್ರಕಟಿಸಿದೆ. ಪಾಕಿಸ್ತಾನ ಸೇರಿದಂತೆ ಹಲವು ಬ್ರಿಟಿಷ್ ಮಾಧ್ಯಮಗಳು ಭಾರತದ ಗೆಲುವನ್ನು ಕೊಂಡಾಡಿದವು. ತೀವ್ರ ಒತ್ತಡದ ನಡುವೆಯೂ ಭಾರತ ತಂಡ ಸಾಮೂಹಿಕ ಪ್ರದರ್ಶನ ನೀಡಿ ಅದ್ಭುತ ಗೆಲುವಿನೊಂದಿಗೆ ಪ್ರಶಸ್ತಿ ಗೆದ್ದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಹೊಗಳಿ ಟೀಂ ಇಂಡಿಯಾಗೆ ಅಭಿನಂದನೆಗಳ ಮಾಹಾಪೂರವನ್ನೆ ಹರಿಸಿದ್ದರು, ಆದರೆ ಆಸಿಸ್‌ ಮಾಧ್ಯಮವೊಂದು ಭಾರತದ ಗೆಲುವಿಗೆ ವಿಷ ಉಗುಳುವ ಕೆಲಸ ಮಾಡಿದೆ.


ಪಾಕಿಸ್ತಾನದ ಪತ್ರಿಕೆ ಒಂದು ಭಾರತದ ವಿಜಯೋತ್ಸವದ ಫೋಟೋವನ್ನು ಮುಖಪುಟದಲ್ಲಿ ಪ್ರಕಟಿಸಿ, ಭಾರತ ಅಸಾಮಾನ್ಯ ಗೆಲುವು ಸಾಧಿಸಿದೆ ಎಂದು ಬರೆದಿದ್ದಾರೆ.


ಇನ್ನೂ,  ವಿರಾಟ್ ಕೊಹ್ಲಿ(Virat Kholi) ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗೇರ್ ಬದಲಿಸಿ ಭಾರತಕ್ಕೆ ಕಪ್ ತಂದು ಕೊಟ್ಟಿದ್ದಾರೆ ಎಂದು ಲಂಡನ್ ನ ಸಂಡೇ ಟೈಮ್ಸ್ ಲೇಖನವೊಂದರಲ್ಲಿ ಹೇಳಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.