ನವದೆಹಲಿ: ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ T20 ಅಂತಾರಾಷ್ಟ್ರೀಯ ಆಟಗಾರ ಆರನ್ ಫಿಂಚ್ ಮಂಗಳವಾರದಂದು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.ಆದರೆ ಅವರು ಇತರ ಅಂತರಾಷ್ಟ್ರೀಯ ಲೀಗ್ ಪಂದ್ಯಗಳಲ್ಲಿ ಆಡುವುದನ್ನು ಮುಂದುವರೆಸುತ್ತಾರೆ ಎನ್ನಲಾಗಿದೆ.ಈಗ ಅವರ ವಿದಾಯದ ಕುರಿತ ಮಾಹಿತಿಯನ್ನು ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ತಮ್ಮ ಟ್ವೀಟ್ ಮೂಲಕ ತಿಳಿಸಿದೆ.


COMMERCIAL BREAK
SCROLL TO CONTINUE READING

ಹಾಗೆ ನೋಡಿದರೆ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಫಿಂಚ್‌ನ ನಿವೃತ್ತಿ ಮೊದಲೇ ಊಹಿಸಲಾಗಿತ್ತು ಎಂದು ಹೇಳಬಹುದು.ಕೇವಲ ಐದು ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು ಕೊನೆಯ ಬಾರಿಗೆ 2018 ರಲ್ಲಿ ಟೆಸ್ಟ್ ಪಂದ್ಯವನ್ನು ಆಡಿದ್ದರು.ಇನ್ನೂ ಏಕದಿನ ಪಂದ್ಯಗಳಲ್ಲೂ ಅಂತಹ ನಿರೀಕ್ಷಿತ ಪ್ರದರ್ಶನವನ್ನು ನೀಡಿರಲಿಲ್ಲ.ಹೀಗಾಗಿ ಅವರು ಕಳೆದ ವರ್ಷ ಏಕದಿನ ಕ್ರಿಕೆಟ್ಗೆ ಕೂಡ ವಿದಾಯವನ್ನು ಹೇಳಿದ್ದರು.PF Rules : ಪಿಎಫ್‌ ಖಾತೆದಾರರ ಗಮನಕ್ಕೆ : ಖಾತೆಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿ


ಅವರು 2021 ರಲ್ಲಿ ದುಬೈನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಟಿ20 ವಿಶ್ವಕಪ್ ನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.ಆದರೆ, ಅವರ ನೇತೃತ್ವದ ಆಸ್ಟ್ರೇಲಿಯಾ ತಂಡ ಕಳೆದ ವರ್ಷ ತವರಿನಲ್ಲಿ ನಡೆದ ಸೆಮಿಫೈನಲ್ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.


ಆರನ್ ಫಿಂಚ್ ತಮ್ಮ ವೃತ್ತಿ ಜೀವನದಲ್ಲಿ ಸ್ವರೂಪಗಳಲ್ಲಿ 254 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು.ಅದರಲ್ಲಿ ಐದು ಟೆಸ್ಟ್ ಪಂದ್ಯಗಳು, 146 ಏಕದಿನ ಪಂದ್ಯ, 103 ಟಿ20 ಪಂದ್ಯಗಳು ಸೇರಿವೆ.ಎಲ್ಲಾ ಸ್ವರೂಪಗಳಲ್ಲಿ ಸೇರಿ ಅವರು 8,804 ರನ್ ಗಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.