ಆಸ್ಟ್ರೇಲಿಯಾವನ್ನು 219 ಕ್ಕೆ ಆಲೌಟ್ ಮಾಡಿದ ಭಾರಿತೀಯ ವನಿತೆಯರು !
IND vs AUS :ಮುಂಬೈನ ವಾಂಕಡೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ಮಹಿಳಾ ಅಭ್ಯಾಸ ಪಂದ್ಯ ಆರಂಭ ಗೊಂಡಿದೆ. ಟೆಸ್ಟ್ ಸರಣಿಯ ಮೊದಲ ದಿನವು ಅಂತ್ಯಗೊಂಡಿದ್ದು, ಆಸಿಸ್ ತಂಡವನ್ನು ಭಾರತವು 77.4 ಒವರ್‌ಗಳಲ್ಲಿ 219 ರನ್‌ಗಳಿಗೆ ಆಲ್ ಔಟ್ ಮಾಡಿದೆ. ಭಾರತವು 1 ವಿಕಟ್ ನಷ್ಟಕ್ಕೆ 98 ರನ್ಗಳಿಸಿ ಮೊದಲ ದಿನದ ಪಂದ್ಯವನ್ನು ಅಂತ್ಯಗೊಳಿಸಿದೆ. ಭಾರತದ ಪರ ವಸ್ತ್ರಾಕರ 4 ವಿಕೇಟ್ ಪಡೆದರು.
IND vs AUS Womenʼs test : ಇಂದು ಗುರುವಾರ ಮುಂಬೈನ ವಾಂಕಡೆ ಸ್ಟೇಡಿಯಂನಲ್ಲಿ ನಡೆಯುತ್ತರುವ ಆಸಿಸ್ ಮತ್ತು ಭಾರತೀಯ ಮಹಿಳಾ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತವು 219 ರನ್‌ಗಳಿಗೆ ಆಲ್ ಔಟ್ ಮಾಡಿದೆ. ಮೊದಲ ದಿನದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಬೆತ್ ಮೋನಿ ಹಾಗೂ ಪೋಬೆ ಲಿಚ್‌ಫಿಲ್ಡ್ ಅವರು ಕಣಕ್ಕಿಳಿದರು. ಮೊದಲ ಒವರ್‌ನ ಕೊನೆಯ ಬಾಲ್‌ನಲ್ಲಿ ರನ್ ಕದಿಯಲು ಮುಂದಾದ ಪೋಬೆ ಲಿಚ್‌ಫಿಲ್ಡ್ ರನ್ ಔಟ್ ಆಗುವುದರ ಮೂಲಕ ಪೆವಿಲಿಯನ್‌ಗೆ ಮರಳ ಬೇಕಾಯಿತು. ಇದರ ಬೆನ್ನಲ್ಲೇ ಅಂಕಣಕ್ಕಿಳಿದ ಎಲ್ಲಿಸ್ ಪೆರ್ರಿ ಮೊದಲ ಬಾಲ್‌ನಲ್ಲಿ ಒಂದು ಬೌಂಡರಿ ದಾಖಲಿಸುತ್ತಿದಂತೆಯೇ ವಸ್ತ್ರಾಕರ ಅವರ ಮುಂದಿನ ಬಾಲ್ ನಲ್ಲಿ ಕ್ಲೀನ್ ಬೋಲ್ಡ್ ಆದರು.
2 ವಿಕೆಟ್ ಪತನವಾಗುತ್ತಿದ್ದಂತೆ ಆಸ್ಟರೇಲಿಯಾ ಪರ ನಾಲ್ಕನೇ ಬ್ಯಾಟರ್ ಆಗಿ ತಾಲಿಯಾ ಮೆಕ್‌ಗ್ರಾತ್ ಬಾಟ್ ಮಾಡಲು ಮುಂದಾದರು. ಬೆತ್ ಮೋನಿ ಅವರೊಂದಿಗೆ ಉತ್ತಮ ಜೊತೆಯಾಟಕ್ಕೆ ಮುಂದಾದ ಅವರು ಕೇವಲ 55 ಬಾಲ್‌ಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. 50 ರನ್ ಗಳಿಸುತ್ತಿದಂತೆಯೇ ಇವರ ಇನ್ನಿಂಗ್ಸ್ ಗೆ ಎಸ್ ರಾಣ ಬ್ರೇಕ್ ಹಾಕಿ, ಜೊತೆಯಾಟವನ್ನು ಅಂತ್ಯಗೊಳಿಸಿದರು.
ಇದನ್ನು ಓದಿ-RCB ಸೌರವ್ ಚೌಹಾಣ್ ಅವರನ್ನೇ ಟಾರ್ಗೇಟ್ ಮಾಡಿದ್ದು ಯಾಕೇ ಗೊತ್ತಾ ? ಇಲ್ಲಿದೇ ಚೌಹಾಣ್ T20ಯ ಅಬ್ಬರದ ದಾಖಲೆ!
ಒಂದು ಕಡೆ ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದಿದ್ದ ಬೆತ್ ಮೋನಿ ತಂಡದ ಮೊತ್ತ 100 ರ ಗಡಿಯನ್ನು ದಾಟಲು ನೆರವಾದರು. ಅರ್ಧಶತಕದ ಹೊಸ್ತಿಲಲ್ಲಿ ಬ್ಯಾಟಿಂಗ್ ಮಾಡುತ್ತುರುವಾಗಲೇ 40 ರನ್ ಗಳಿಸಿದ ಬೆತ್ ಮೋನಿ 28ನೇ ಒವರ್‌ನಲ್ಲಿ ವಸ್ತ್ರಾಕರ ಅವರ ಭೌಲಿಂಗ್ ಗೆ ತಮ್ಮ ವಿಕೆಟ್ ಒಪ್ಪಿಸಿದರು.
ಬೆತ್ ಮೋನಿ ಔಟ್ ಆದ ಬೆನ್ನಲ್ಲೇ ತಂಡದ ನಾಯಕಿ ಅಲಿಸ್ಸಾ ಹೀಲಿ ತಂಡವನ್ನು ಮುನ್ನಡೆಸಲು ಮುಂದಾದರು. ಇವರು 38 ರನ್ ಗಳಿಸಿ ತಂಡಕ್ಕೆ ಭರವಸೆ ಆಗುತ್ತಿರುವಾಗ ಶರ್ಮಾ ಅವರಿಗೆ ತಮ್ಮ ವಿಕೆಟ್ ನೀಡಿ ಹೋಗ ಬೇಕಾಯಿತು. ಇದಾದ ಬಳಿಕ ಆಸ್ಟ್ರೇಲಿಯಾ ತಂಡದ ಪರ ಯಾವ ಆಟಗಾರ್ತಿಯರಿಂದಲು ಹೇಳುವಂತಹ ಪ್ರದರ್ಶನ ಬರಲಿಲ್ಲ. 78 ನೇ ಒವರ್ ನಲ್ಲಿ ತಮ್ಮೆಲ್ಲ ವಿಕೆಟ್‌ಗಳನದನು ಕಳೆದುಕೊಂಡು 219 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಬೌಲಿಂಗ್ ನಲ್ಲಿ ಆಸಿಸ್ ತಂಡದ ಆಟಗಾರ್ತಿಯರಿಗೆ ಬೆಂಡೆತ್ತಿದ ಭಾರತದ ವಿನತೆಯರು, ಬ್ಯಾಟಿಂಗ್‌ನಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಲು ಮುಂದಾದರು. ಭಾರತದ ಪರ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮ ಆರಂಭಿಕರಾಗಿ ಮೈದಾನಕ್ಕಿಳೀದರು. ಇಬ್ಬರಿಂದ ಉತ್ತಮ ಜೊತೆಯಾಟ ಬರುತ್ತಿರುವಾಗಲೇ ಬಿರುಸಿನ ಆಟಕ್ಕೆ ಮುಂದಾದ ಶಫಾಲಿ ವರ್ಮ ಅರ್ಧಶತಕದ ಹೊಸ್ತಿನಲ್ಲಿರುವಾಗ ಜೋನಸೀನ್ ಗೆ ತಮ್ಮ ವಿಕೆಟ್ ಒಪಸಪಿಸಿದರು. ಭಾರತ ಮೊದಲನೇ ದಿನದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ.
ಸ್ಮೃತಿ ಮಂದಾನ 43*(49), ಶಫಾಲಿ ವರ್ಮಾ 40 (59) ಹಾಗೂ ಸ್ನೇಹ ರಾಣ 4*(8) ರನ್ ಗಳಿಸಿದ್ಧಾರೆ.
ಆಸ್ಟ್ರೇಲಿಯಾ ತಂಡದ ಸ್ಕೋರ್ ವಿವರ
ಬೆತ್ ಮೋನಿ 40 (94), ಪೋಬೆ ಲಿಚ್‌ಫಿಲ್ಡ್ 0 (0), ಎಲ್ಲಿಸ್‌ಪೆರ್ರಿ 4 (2), ತಾಲಿಯಾ ಮೆಕ್‌ಗ್ರಾತ್ 50 (56), ಅಲಿಸ್ಸಾ ಹೀಲಿ(ನಾಯಕಿ) 38(75), ಅನಾಬೆಲ್ ಸುತರ್ಲಾಂಡ್ 16 (58), ಆಶ್ಲೀಗ್ ಗಾರ್ಡನರ್ 11 (26), ಜೆಸ್ಸ್ ಜೋನಸೆನ್ 19 (61), ಅಲಾನ ಕಿಂಗ್ 5 (11), ಕಿಮ್ ಗಾರ್ತ್(ಅಜೇಯಾ) 28 (71)*, ಲೂರೆನ್ ಚೀತಲ್ 6 (13) ರನ್ ಗಳಿಸಿದ್ಧಾರೆ.
ಭಾರತದ ಬೌಲಿಂಗ್ ವಿವರ
ಪೋಜಾ ವಸ್ತ್ರಾಕರ್ - 16 ಒವರ್‌ಗಳಲ್ಲಿ 53 ರನ್ ನೀಡಿ 4 ವಿಕೆಟ್ ಪಡೆದ್ಧಾರೆ.
ಸ್ನೇಹ್ ರಾಣ - 22.4 ಒವರ್ ಮಾಡಿ 56 ನೀಡುವ ಮೂಲಕ 3 ವಿಕೆಟ್ ಪಡೆದಿದ್ಧಾರೆ.
ದೀಪ್ತಿ ಶರ್ಮಾ - 19 ಒವರ್ ಗಳಲ್ಲಿ 45 ರನ್ ನೀಡಿ 2 ವಿಕೆಟ್ ಪಡಿದಿದ್ಧಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.