IND vs WI, 1st Test: ಭಾರತ ಕ್ರಿಕೆಟ್ ತಂಡದಲ್ಲಿ ಒಬ್ಬರಿಂದ ಒಬ್ಬರು ಅದ್ಭುತ ಕ್ರಿಕೆಟಿಗರಿದ್ದಾರೆ. ಮೈದಾನದಲ್ಲಿ ಮೂವರು ಆಟಗಾರರ ಪಾತ್ರವನ್ನು ಒಬ್ಬನೇ ನಿರ್ವಹಿಸ ಬಲ್ಲ ಕ್ರಿಕೆಟಿಗರೂ ಇದ್ದಾರೆ. ಇನ್ನು ಜುಲೈ 12 ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್ ಸಿದ್ಧವಾಗುತ್ತಿದೆ.


COMMERCIAL BREAK
SCROLL TO CONTINUE READING

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಜುಲೈ 12 ರಿಂದ ಡೊಮಿನಿಕಾದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಓರ್ವ ಆಟಗಾರ ಆಡಲಿದ್ದು, ಬ್ಯಾಟಿಂಗ್, ಮಾರಕ ಬೌಲಿಂಗ್ ಮತ್ತು ಚುರುಕುಬುದ್ಧಿಯ ಫೀಲ್ಡಿಂಗ್ ಮಾಡುವ ಸಾಮಾರ್ಥ್ಯ ಹೊಂದಿದ್ದಾನೆ.


ಇದನ್ನೂ ಓದಿ: “ತಪ್ಪನ್ನು ಒಪ್ಪಿಕೊಂಡು ವಿರಾಟ್ ಬಳಿ ಕ್ಷಮೆ ಕೇಳಿ”: ಗಂಭೀರ್’ಗೆ ಪಾಕ್ ಕ್ರಿಕೆಟ್ ದಿಗ್ಗಜನಿಂದ ಕ್ಲಾಸ್


ಭಾರತೀಯ ಕ್ರಿಕೆಟ್ ತಂಡದ ಈ ಆಟಗಾರನು ವೇಗದ ರೀತಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿ ಎದುರಾಳಿಯನ್ನು ಸಂಕಷ್ಟದಲ್ಲಿ ಸಿಲುಕಿಸುವುದು ಖಂಡಿತ. ಫೀಲ್ಡಿಂಗ್ ವೇಳೆಯೂ ಈ ಆಟಗಾರನ ಚುರುಕಿನ ಮುಂದೆ ಎದುರಾಳಿ ತಂಡದ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವುದು ಕಷ್ಟವಾಗಿದೆ. ಈ ಆಟಗಾರ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಧ್ವಂಸಕರಾಗಲು ಸಿದ್ಧರಾಗಿದ್ದಾರೆ.


ನಾವು ಮಾತನಾಡುತ್ತಿರುವುದು ಅಕ್ಷರ್ ಪಟೇಲ್ ಬಗ್ಗೆ. ಟೀಂ ಇಂಡಿಯಾಗೆ ಅಕ್ಷರ್ 3D ಆಟಗಾರನಾಗಿದ್ದು, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರು ವಿಭಾಗಗಳಲ್ಲಿ ಅತ್ಯಂತ ಸಮರ್ಥರಾಗಿದ್ದಾರೆ. ವೆಸ್ಟ್ ಇಂಡೀಸ್ ತಂಡವು ಮೊದಲ ಟೆಸ್ಟ್ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರೊಂದಿಗೆ ಬಹಳ ಎಚ್ಚರಿಕೆಯಿಂದ ಇರಬೇಕು.


ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದ ಪ್ಲೇಯಿಂಗ್ 11ರಲ್ಲಿ ಅಕ್ಷರ್ ಪಟೇಲ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಎರಡು ಟೆಸ್ಟ್ ಪಂದ್ಯಗಳಲ್ಲಿ ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಆಡಲು ಅಕ್ಷರ್ ಪಟೇಲ್ ಪ್ರಬಲ ಸ್ಪರ್ಧಿಯಾಗಿದ್ದಾರೆ. ಅಕ್ಷರ್ ಪಟೇಲ್ 12 ಟೆಸ್ಟ್ ಪಂದ್ಯಗಳಲ್ಲಿ 50 ವಿಕೆಟ್ ಪಡೆದಿದ್ದು, 513 ರನ್ ಕೂಡ ಗಳಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ 5 ಬಾರಿ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇದಲ್ಲದೇ ಅಕ್ಷರ್ ಪಟೇಲ್ ಒಮ್ಮೆ ಪಂದ್ಯವೊಂದರಲ್ಲಿ 11 ವಿಕೆಟ್ ಪಡೆದಿದ್ದಾರೆ.


ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಕ್ಷರ್ ಪಟೇಲ್ ವೆಸ್ಟ್ ಇಂಡೀಸ್‌ಗೆ ದೊಡ್ಡ ಶತ್ರು ಎಂದು ಸಾಬೀತುಪಡಿಸಲಿದ್ದಾರೆ. ಟೀಂ ಇಂಡಿಯಾದಲ್ಲಿ ಅಕ್ಷರ್ ಪಟೇಲ್ ಆಡುತ್ತಿರುವ ಸುದ್ದಿ ಕೇಳಿ ವೆಸ್ಟ್ ಇಂಡೀಸ್ ತಂಡದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆಯಂತೆ. ಟೀಮ್ ಇಂಡಿಯಾದ ಈ ಆಟಗಾರ ಏಕಾಂಗಿಯಾಗಿ ಭಾರತಕ್ಕೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯ ಮತ್ತು ಸರಣಿಯಲ್ಲಿ ಗೆಲುವನ್ನು ತಂದುಕೊಡಬಹುದು.


ಇದನ್ನೂ ಓದಿ:ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನ ಪಡೆಯಲು ಐಪಿಎಲ್ ತಂಡಕ್ಕೆ ರಾಜೀನಾಮೆ ನೀಡಿದ ಕ್ರಿಕೆಟ್ ದಿಗ್ಗಜ!


ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತೀಯ ಟೆಸ್ಟ್ ತಂಡ:


ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರಿತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.