Babar Azam Captaincy: ಬಾಬರ್ ಅಜಂ ನಾಯಕತ್ವದಲ್ಲಿ ಪಾಕಿಸ್ತಾನ ತಂಡವು ವಿಶ್ವಕಪ್ 2023ರಲ್ಲಿ ಉತ್ತಮ ಆರಂಭವನ್ನು ಮಾಡಿತ್ತು. ತನ್ನ ಮೊದಲ ಎರಡೂ ಪಂದ್ಯಗಳನ್ನು ಗೆದ್ದಿದ್ದರೂ ಸಹ ಕಳೆದ ದಿನ ನಡೆದ ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲನ್ನು ಎದುರಿಸಬೇಕಾಯಿತು.


COMMERCIAL BREAK
SCROLL TO CONTINUE READING

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 7 ವಿಕೆಟ್‌’ಗಳಿಂದ ಸೋಲಿಸಿತು. ಈ ಮಧ್ಯೆ ವಿಶ್ವಕಪ್ ನಂತರ ಬಾಬರ್ ನಾಯಕತ್ವವನ್ನು ತೊರೆಯಬೇಕು ಎಂದು ತಂಡದ ಮಾಜಿ ನಾಯಕ ಮತ್ತು ಅನುಭವಿ ಆಟಗಾರ ಶೋಯೆಬ್ ಮಲಿಕ್ ಹೇಳಿದ್ದಾರೆ.


ಇದನ್ನೂ ಓದಿ: ಕನ್ನಡಿ ಮುಂದೆ ಅಂದ ಚಂದ ನೋಡಿಕೊಂಡ ಕೋತಿ! ಕಪಿರಾಯನ ಮಂಗನಾಟದ ವಿಡಿಯೋ ವೈರಲ್


ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ತಂಡ ಕೇವಲ 191 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೂ ಮೊದಲು 2023ರ ಏಷ್ಯಾಕಪ್‌’ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡ ಕೇವಲ 128 ರನ್ ಗಳಿಸಿ ಆಲೌಟ್ ಆಗಿತ್ತು ಮತ್ತು 228 ರನ್‌ಗಳಿಂದ ದೊಡ್ಡ ಸೋಲನ್ನು ಎದುರಿಸಬೇಕಾಯಿತು.


ಎ ಸ್ಪೋರ್ಟ್ಸ್‌’ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಶೋಯೆಬ್ ಮಲಿಕ್, “ಇದು ಕೇವಲ ನನ್ನ ಅಭಿಪ್ರಾಯ. ಆಟಗಾರನಾಗಿ ಬಾಬರ್ ತನಗೆ ಹಾಗೂ ತಂಡಕ್ಕೆ ಒಳ್ಳೆಯದನ್ನೇ ಮಾಡಬಹುದು. ಆದರೆ ನಾಯಕನಾಗಿ ಭಿನ್ನವಾಗಿ ಏನನ್ನೂ ಯೋಚಿಸುವುದಿಲ್ಲ. ಒಬ್ಬರ ಬ್ಯಾಟಿಂಗ್ ಮತ್ತು ನಾಯಕತ್ವವನ್ನು ಒಂದೇ ರೀತಿಯಲ್ಲಿ ನೋಡಲು ಸಾಧ್ಯವಿಲ್ಲ, ಎರಡೂ ವಿಭಿನ್ನವಾಗಿವೆ. ಬಹಳ ದಿನಗಳಿಂದ ಕ್ಯಾಪ್ಟನ್ ಆಗಿದ್ದರೂ ಇಲ್ಲಿಯವರೆಗೂ ವಿಶೇಷ ಸಾಧನೆ ಮಾಡಲು ಸಾಧ್ಯವಾಗಿಲ್ಲ” ಎಂದಿದ್ದಾರೆ.


ಬಾಬರ್ ಅಜಂ ಟೀಂ ಇಂಡಿಯಾ ವಿರುದ್ಧ 50 ರನ್ ಗಳಿಸಿದ್ದರು. ಮೊಹಮ್ಮದ್ ರಿಜ್ವಾನ್ ಜತೆ ಉತ್ತಮ ಜೊತೆಯಾಟವನ್ನೂ ಆಡಿದ್ದರು. ಒಂದು ಬಾರಿ ತಂಡದ ಸ್ಕೋರ್ 2 ವಿಕೆಟ್’ಗೆ 155 ರನ್ ಆಗಿತ್ತು. ಇದಾದ ಬಳಿಕ ತಂಡ ಕೇವಲ 36 ರನ್‌’ಗಳಿಗೆ ಕೊನೆಯ 8 ವಿಕೆಟ್‌’ಗಳನ್ನು ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಪಾಕಿಸ್ತಾನಿ ಬ್ಯಾಟ್ಸ್‌’ಮನ್‌’ಗಳಿಗೆ ಆಟವಾಡಲು ಅವಕಾಶವನ್ನೇ ನೀಡಲಿಲ್ಲ.


ಹಾಗಾದರೆ ಮುಂದಿನ ನಾಯಕ ಯಾರು?


ಬಾಬರ್ ಅಜಮ್ ಅವರ ಭವಿಷ್ಯವು 2023ರ ವಿಶ್ವಕಪ್‌’ನಲ್ಲಿ ಅವರ ಪ್ರದರ್ಶನದ ಮೇಲೆ ಅವಲಂಬಿತವಾಗಿದೆ. ಇವರಲ್ಲದೆ ಉಪನಾಯಕ ಶಾದಾಬ್ ಖಾನ್ ಕೂಡ ಅಪಾಯದಲ್ಲಿದ್ದಾರೆ. ಶಾಹೀನ್ ಅಫ್ರಿದಿ ಅವರನ್ನು ಹೊಸ ನಾಯಕನನ್ನಾಗಿ ಮಾಡಲು ಹಲವು ಅನುಭವಿಗಳು ಒಲವು ತೋರಿದ್ದಾರೆ. ಶಾಹೀನ್ ಅವರನ್ನು ಆಕ್ರಮಣಕಾರಿ ನಾಯಕ ಎಂದು ಪರಿಗಣಿಸಲಾಗಿದೆ. ಮತ್ತು ಪಾಕಿಸ್ತಾನ ಸೂಪರ್ ಲೀಗ್‌\ನಲ್ಲಿ ಲಾಹೋರ್ ಖಲಂದರ್ಸ್‌’ಗೆ ಸತತ ಎರಡು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ. ಪಿಎಸ್’ಎಲ್‌’ನಲ್ಲಿ ಇದುವರೆಗೆ ಯಾವುದೇ ನಾಯಕನಿಗೆ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.


ಇದನ್ನೂ ಓದಿ:  2028ರ ಒಲಿಂಪಿಕ್ಸ್’ಗೆ ಕ್ರಿಕೆಟ್ ಸೇರ್ಪಡೆ ಸ್ವಾಗತಿಸಿದ ನೀತಾ ಅಂಬಾನಿ


ನಾಯಕನಾಗಿ ಬಾಬರ್ ಅಜಮ್ ಅವರ ದಾಖಲೆಯ ಬಗ್ಗೆ ಮಾತನಾಡುವುದಾದರೆ, ಅವರು ಇದುವರೆಗೆ 37 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಈ ಅವಧಿಯಲ್ಲಿ ತಂಡ 24 ಪಂದ್ಯಗಳನ್ನು ಗೆದ್ದಿದ್ದರೆ, 11ರಲ್ಲಿ ಸೋತಿದೆ. ಒಂದು ಪಂದ್ಯ ಟೈ ಆಗಿದ್ದರೂ ಒಂದು ಪಂದ್ಯದ ಫಲಿತಾಂಶ ತಿಳಿಯಲಿಲ್ಲ. ಇನ್ನು 20 ಟೆಸ್ಟ್ ಪಂದ್ಯಗಳನ್ನಾಡಿದ್ದು, 10ರಲ್ಲಿ ಗೆದ್ದಿದ್ದರೆ, 6 ಪಂದ್ಯದಲ್ಲಿ ಸೋತಿದ್ದಾರೆ. 4 ಪಂದ್ಯಗಳು ಡ್ರಾ ಆಗಿವೆ. ಅಂತರಾಷ್ಟ್ರೀಯ ಟಿ20 ಬಗ್ಗೆ ಮಾತನಾಡುವುದಾದರೆ, ಬಾಬರ್ ಅಜಮ್ ಪಾಕಿಸ್ತಾನ ಪರವಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ನಾಯಕ. ನಾಯಕನಾಗಿ ಬಾಬರ್ 71 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 42ರಲ್ಲಿ ಗೆಲುವು, 23ರಲ್ಲಿ ಸೋಲು ಕಂಡಿದ್ದಾರೆ. 6 ಪಂದ್ಯಗಳ ಫಲಿತಾಂಶ ಬಂದಿಲ್ಲ. ಬಾಬರ್ 2022ರ ಟಿ20 ವಿಶ್ವಕಪ್‌’ನಲ್ಲಿ ತಂಡವನ್ನು ಫೈನಲ್’ವರೆಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಕಾಣಬೇಕಾಯಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್