Team Indiaಗೆ ಪಾಕ್’ನ ಈ 3 ಆಟಗಾರರಿಂದ ಬೆದರಿಕೆ! ಮುಂದೇನ್ಮಾಡ್ತಾರೆ ನಾಯಕ ರೋಹಿತ್?
India vs Pakistan, Asia Cup: ಮುಂಬರುವ ಏಷ್ಯಾಕಪ್ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ಬಾರಿಯ ಟೂರ್ನಿಯನ್ನು ಪಾಕಿಸ್ತಾನ ಮತ್ತು ಶ್ರೀಲಂಕಾ ಆತಿಥ್ಯ ವಹಿಸಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಿಸ್ಸಂಶಯವಾಗಿ ಶ್ರೀಲಂಕಾದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯು ಆಗಸ್ಟ್ 31 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯವು ಸೆಪ್ಟೆಂಬರ್ 17 ರ ಭಾನುವಾರದಂದು ನಡೆಯಲಿದೆ.
India vs Pakistan, Asia Cup: ಭಾರತ ಮತ್ತು ಪಾಕಿಸ್ತಾನ ನಡುವೆ ಯಾವುದೇ ಮೈದಾನದಲ್ಲಿ ಯಾವುದೇ ಪಂದ್ಯ ನಡೆದರೂ ಅಭಿಮಾನಿಗಳ ಸಂಭ್ರಮ ಉತ್ತುಂಗಕ್ಕೇರಿರುತ್ತದೆ. ಆಗ ಕ್ರಿಕೆಟ್ ಮೈದಾನದಕ್ಕು ಪ್ರೇಕ್ಷಕರ ದಂಡು ಕಂಡು ಬರುತ್ತದೆ. ಮುಂಬರುವ ಏಷ್ಯಾಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ (IND vs PAK) ಮುಖಾಮುಖಿಯಾಗಲಿದ್ದು, ಹೈವೋಲ್ಟೇಜ್ ಪಂದ್ಯ ನೋಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: NEET UG 2023 ಕೌನ್ಸಲಿಂಗ್, ಇಲ್ಲಿವೆ ಎಲ್ಲಾ ಅತ್ಯಾವಶ್ಯಕ ವೆಬ್ಸೈಟ್ ಗಳ ಪಟ್ಟಿ
ಮುಂಬರುವ ಏಷ್ಯಾಕಪ್ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ಬಾರಿಯ ಟೂರ್ನಿಯನ್ನು ಪಾಕಿಸ್ತಾನ ಮತ್ತು ಶ್ರೀಲಂಕಾ ಆತಿಥ್ಯ ವಹಿಸಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಿಸ್ಸಂಶಯವಾಗಿ ಶ್ರೀಲಂಕಾದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯು ಆಗಸ್ಟ್ 31 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯವು ಸೆಪ್ಟೆಂಬರ್ 17 ರ ಭಾನುವಾರದಂದು ನಡೆಯಲಿದೆ. ಅಭಿಮಾನಿಗಳು ಶೀಘ್ರದಲ್ಲೇ ಈ ಇಬ್ಬರು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಘರ್ಷಣೆಯನ್ನು ನೋಡುತ್ತಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನದ 3 ಆಟಗಾರರು ಭಾರತಕ್ಕೆ ದೊಡ್ಡ ಅಪಾಯವೆಂದು ಸಾಬೀತುಪಡಿಸಬಹುದು.
ಬಾಬರ್ ಆಜಂ:
ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರ ತಂಡದ ದೊಡ್ಡ ಅಸ್ತ್ರ. ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾ, ಭಾರತೀಯ ಬೌಲರ್ ಗಳಿಗೆ ಸಮಸ್ಯೆಯನ್ನು ಸೃಷ್ಟಿಯಾಗಬಹುದು. ಈ ಬಲಗೈ ಬ್ಯಾಟ್ಸ್‌ಮನ್ ಇದುವರೆಗೆ 100 ಏಕದಿನ ಪಂದ್ಯಗಳಲ್ಲಿ 18 ಶತಕ ಮತ್ತು 26 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರು ಈ ಸ್ವರೂಪದಲ್ಲಿ 5089 ರನ್ ಗಳನ್ನು ಸೇರಿಸಿದ್ದಾರೆ. ಒಟ್ಟಾರೆ ಸ್ಟ್ರೈಕ್ ರೇಟ್ 89.24 ಮತ್ತು 59.17 ಸರಾಸರಿ ಇದೆ.
ಶಾಹೀನ್ ಶಾ ಆಫ್ರಿದಿ:
ಪಾಕಿಸ್ತಾನ ತಂಡವು 23 ವರ್ಷದ ವೇಗಿ ಶಾಹೀನ್ ಶಾ ಆಫ್ರಿದಿ ಮೇಲೆ ಹೆಚ್ಚು ಅವಲಂಬಿತವಾಗಿದೆ. 36 ಏಕದಿನ ಪಂದ್ಯಗಳಲ್ಲಿ ಒಟ್ಟು 70 ವಿಕೆಟ್ ಪಡೆದಿದ್ದಾರೆ. ಎಕಾನಮಿ ದರವು ಕೇವಲ 5.52 ಆಗಿದೆ. ದುಬೈನಲ್ಲಿ ನಡೆದ T20 ವಿಶ್ವಕಪ್-2021 ಪಂದ್ಯದಲ್ಲಿ 3 ದೊಡ್ಡ ಬ್ಯಾಟ್ಸ್‌ಮನ್ ಗಳನ್ನು ಪೆವಿಲಿಯನ್ ಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: PM Modi US Visit: ಎರಡು ಡಜನ್ ಗೂ ಅಧಿಕ ದಿಗ್ಗಜರ ಜೊತೆಗೆ ಮೋದಿ ಭೇಟಿ, ಟ್ವಿಟ್ಟರ್ ಮಾಲೀಕ ಎಲಾನ್ ಮಸ್ಕ್ ಜೊತೆಗೂ ಭೇಟಿ
ಮೊಹಮ್ಮದ್ ರಿಜ್ವಾನ್:
31ರ ಹರೆಯದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮೊಹಮ್ಮದ್ ರಿಜ್ವಾನ್ ಮೇಲೆ ಪಾಕಿಸ್ತಾನ ತಂಡ ಹೆಚ್ಚಿನ ನಿರೀಕ್ಷೆ ಹೊಂದಿದೆ. ಅವರು ಇದುವರೆಗೆ 57 ಏಕದಿನ ಪಂದ್ಯಗಳಲ್ಲಿ 2 ಶತಕ ಮತ್ತು 9 ಅರ್ಧ ಶತಕಗಳ ಸಹಾಯದಿಂದ ಒಟ್ಟು 1408 ರನ್ ಗಳಿಸಿದ್ದಾರೆ. ರಿಜ್ವಾನ್ ಇಲ್ಲಿಯವರೆಗೆ ಭಾರತದ ವಿರುದ್ಧ ಏಕದಿನ ಪಂದ್ಯಗಳಲ್ಲಿ ಆಡಿಲ್ಲ, ಆದ್ದರಿಂದ ಅವರಿಗೆ ಇದು ದೊಡ್ಡ ಪರೀಕ್ಷೆ ಎನ್ನಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ