ACC Womens Emerging Asia Cup 2023: ಟೀಮ್ ಇಂಡಿಯಾ ಮಹಿಳಾ ಉದಯೋನ್ಮುಖ ಏಷ್ಯಾ ಕಪ್ 2023 ಪ್ರಶಸ್ತಿಯನ್ನು ಗೆದ್ದಿದೆ. ಹಾಂಕಾಂಗ್ ನಲ್ಲಿ ನಡೆದ ಈ ಟೂರ್ನಿಯ ಫೈನಲ್ ನಲ್ಲಿ ಭಾರತ ಎ ಮಹಿಳಾ ತಂಡ, ಬಾಂಗ್ಲಾದೇಶ ಎ ಮಹಿಳಾ ತಂಡವನ್ನು ಸೋಲಿಸಿತು. ಮಹಿಳೆಯರ ಉದಯೋನ್ಮುಖ ಏಷ್ಯಾ ಕಪ್ 2023 ರಲ್ಲಿ ಒಟ್ಟು 6 ತಂಡಗಳು ಭಾಗವಹಿಸಿದ್ದವು.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗೆ ಬದ್ಧ - ಉನ್ನತ ಶಿಕ್ಷಣ ಸಚಿವ
ಇತಿಹಾಸ ಸೃಷ್ಟಿ:
ಯಾವುದೇ ಪಂದ್ಯವನ್ನು ಆಡದೆ ಟೀಂ ಇಂಡಿಯಾ ಫೈನಲ್ ತಲುಪಿತ್ತು. ಭಾರತ ಎ ಮಹಿಳಾ ಮತ್ತು ಶ್ರೀಲಂಕಾ ಎ ಮಹಿಳೆಯರ ನಡುವಿನ ಟೂರ್ನಿಯ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ನಡೆಯಲಿಲ್ಲ. ಇದಾದ ಬಳಿಕ ಟೀಂ ಇಂಡಿಯಾ ಫೈನಲ್ ಗೆ ಪ್ರವೇಶ ಪಡೆಯಿತು. ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತು. ಈ ಗುರಿಗೆ ಉತ್ತರವಾಗಿ ಮಹಿಳಾ ಬಾಂಗ್ಲಾದೇಶ-ಎ ತಂಡ ಕೇವಲ 96 ರನ್ ಗಳಿಸಲಷ್ಟೇ ಶಕ್ತವಾಯಿತು.
ಟೂರ್ನಿಯಲ್ಲಿ ಟೀಂ ಇಂಡಿಯಾದ ಪಯಣ ಹೀಗಿತ್ತು…
ವುಮೆನ್ ಇಂಡಿಯಾ ಎ (ಭಾರತ ಎ ಮಹಿಳಾ) ಪಂದ್ಯಾವಳಿಯ ಮೊದಲ ಪಂದ್ಯವನ್ನು ಹಾಂಗ್ ಕಾಂಗ್ ವಿರುದ್ಧ ಆಡಿತು, ಇದರಲ್ಲಿ ತಂಡವು 9 ವಿಕೆಟ್ ಗಳಿಂದ ಗೆದ್ದಿತು. ಇದೇ ವೇಳೆ ನೇಪಾಳ ಹಾಗೂ ಪಾಕಿಸ್ತಾನ-ಎ ತಂಡದ ವಿರುದ್ಧದ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಇದಾದ ಬಳಿಕ ಟೀಂ ಇಂಡಿಯಾ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಎ ಮಹಿಳಾ ತಂಡವನ್ನು ಎದುರಿಸಬೇಕಿತ್ತು. ಆದರೆ ಮಳೆಯಿಂದಾಗಿ ಈ ಪಂದ್ಯವನ್ನು ಆಡಲಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡ ‘ಎ’ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಿನ್ನೆಲೆಯಲ್ಲಿ ಫೈನಲ್ ಗೆ ಲಗ್ಗೆ ಇಡಲು ಸಾಧ್ಯವಾಯಿತು.
ಇದನ್ನೂ ಓದಿ: "ದೇವರು ಟೈಮ್ ತಗೊಂಡು ಇವರನ್ನ ಮಾಡಿದ್ದಾನೆ" ಈ ನಟನನ್ನು ಕೊಂಡಾಡಿದ ರಶ್ಮಿಕಾ ಮಂದಣ್ಣ!
ಶ್ರೇಯಾಂಕಾ ಪಾಟೀಲ್ ಮತ್ತೊಮ್ಮೆ ಅದ್ಭುತ ಪ್ರದರ್ಶನ:
ಹಾಂಕಾಂಗ್ ವಿರುದ್ಧ ಭಾರತದ ಮಹಿಳಾ ಬೌಲರ್ ಶ್ರೇಯಾಂಕಾ ಪಾಟೀಲ್ ಗೆಲುವಿನ ಹೀರೋ ಆದರು. ಈ ಪಂದ್ಯದಲ್ಲಿ ಶ್ರೇಯಾಂಕಾ 3 ಓವರ್‌ಗಳಲ್ಲಿ ಕೇವಲ 3 ರನ್ ನೀಡಿ 5 ವಿಕೆಟ್ ಪಡೆದರು. ಶ್ರೇಯಾಂಕಾ ಪಾಟೀಲ್ ಅವರ ಈ ಅದ್ಭುತ ಬೌಲಿಂಗ್‌ನಿಂದಾಗಿ ಇಡೀ ಹಾಂಕಾಂಗ್ ತಂಡ ಕೇವಲ 34 ರನ್ ಗಳಿಗೆ ಆಲೌಟ್ ಆಯಿತು. ಶ್ರೇಯಾಂಕಾ ಪಾಟೀಲ್ ಅವರ ಈ ಅದ್ಭುತ ಪ್ರದರ್ಶನ ಫೈನಲ್‌ನಲ್ಲಿಯೂ ಮುಂದುವರೆದಿದೆ. ಬಾಂಗ್ಲಾದೇಶ ವಿರುದ್ಧ ಶ್ರೇಯಾಂಕಾ ಪಾಟೀಲ್ 4 ವಿಕೆಟ್ ಪಡೆದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ