ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು 100 ನೇ ಗೆಲುವು ಸಾಧಿಸಲು ಶ್ರೀಕರ್ ಭರತ್ ಪಂದ್ಯದ ಕೊನೆಯ ಎಸೆತದಲ್ಲಿ ಸಿಡಿಸಿದ ಸಿಕ್ಸರ್ ಸಹಾಯ ಮಾಡಿತು.


COMMERCIAL BREAK
SCROLL TO CONTINUE READING

ಈಗ ವಿರಾಟ್ ಕೊಹ್ಲಿ ನೇತೃತ್ವದ ತಂಡವು ದೆಹಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಲೀಗ್‌ನ ಅಂತಿಮ ಪಂದ್ಯದಲ್ಲಿ 100 ಐಪಿಎಲ್ ಪಂದ್ಯಗಳನ್ನು ಗೆದ್ದ 4 ನೇ ಫ್ರಾಂಚೈಸ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.ಈ ಪಂದ್ಯದ ಮೊದಲು, ಆರ್‌ಸಿಬಿ (RCB) 209 ಪಂದ್ಯಗಳಿಂದ 99 ಗೆಲುವುಗಳನ್ನು ತಮ್ಮ ಹೆಸರಿಗೆ ಹೊಂದಿತ್ತು. ಅವರು ಮುಂಬೈ ಇಂಡಿಯನ್ಸ್ (MI), ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಕೋಲ್ಕತಾ ನೈಟ್ ರೈಡರ್ಸ್ (KKR) ಇತರ ಮೂರು ತಂಡಗಳೊಂದಿಗೆ 100-ಗೆಲುವಿನ ಗಡಿಯನ್ನು ತಲುಪಿದ 4 ನೇ ಫ್ರಾಂಚೈಸಿ ಎನಿಸಿಕೊಂಡಿದೆ.


ಸಮಂತಾ ಮತ್ತು ನಾಗಚೈತನ್ಯ ವಿಚ್ಚೇದನಕ್ಕೆ ನಾಗಾರ್ಜುನ್ ಹೇಳಿದ್ದೇನು ಗೊತ್ತೇ?


ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು  216 ಪಂದ್ಯಗಳಿಂದ ಒಟ್ಟು 126 ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಎಂಎಸ್ ಧೋನಿ ನೇತೃತ್ವದ ಸೂಪರ್ ಕಿಂಗ್ಸ್ 192 ಪಂದ್ಯಗಳಲ್ಲಿ 115 ಗೆಲುವಿನೊಂದಿಗೆ ಎರಡನೇ ಸ್ಥಾನದಲ್ಲಿದೆ.ಕೊಲ್ಕತ್ತಾ  205 ಪಂದ್ಯಗಳಲ್ಲಿ 105 ಪಂದ್ಯಗಳನ್ನು ಗೆದ್ದಿದೆ.


ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಮುಖಾಮುಖಿಯಲ್ಲಿ ದೆಹಲಿ ತಂಡವನ್ನು ಬೆಂಗಳೂರು ಏಳು ವಿಕೆಟ್‌ಗಳಿಂದ ಸೋಲಿಸಿತು.ಶ್ರೀಕರ್ ಭರತ್ ಅಜೇಯ 78 ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 51 ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ ಆರ್‌ಸಿಬಿ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಅಗ್ರಸ್ಥಾನದಲ್ಲಿರುವ ತಂಡವನ್ನು ಸೋಲಿಸಿದರು.


ಇದನ್ನೂ ಓದಿ-"ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡಕ್ಕೆ ಪೂರ್ಣಾವಧಿ ಕೋಚ್ ಆಗಬಾರದು"


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.