Asia Cup 2023: ಏಷ್ಯಾಕಪ್ 2023 ಇಂದಿನಿಂದ ಪ್ರಾರಂಭವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳು ಆಡಲಿವೆ. ಆದರೆ ಪಂದ್ಯಾವಳಿ ಪ್ರಾರಂಭವಾಗುವ ಕೆಲವು ಗಂಟೆಗಳ ಮೊದಲು, ತಂಡವೊಂದು ಪ್ರಮುಖ ಬದಲಾವಣೆಯನ್ನು ಮಾಡಿದೆ. 2023ರ ಏಷ್ಯಾಕಪ್‌ ತಂಡದಲ್ಲಿ 30 ವರ್ಷದ ಆಟಗಾರನನ್ನು ಇದ್ದಕ್ಕಿದ್ದಂತೆ ಸೇರಿಸಿಕೊಳ್ಳಲಾಗಿದೆ. ಈ ಆಟಗಾರ ಕಳೆದ ವರ್ಷ ಡಿಸೆಂಬರ್‌’ನಲ್ಲಿ ಭಾರತದ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪಾಕಿಸ್ತಾನ ವಿರುದ್ಧದ ODI ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಯಾರು?


ಟೂರ್ನಿ ಆರಂಭಕ್ಕೂ ಮುನ್ನವೇ ಬಾಂಗ್ಲಾದೇಶ ತಂಡ ದೊಡ್ಡ ಹಿನ್ನಡೆ ಅನುಭವಿಸಿದೆ. ತಂಡದ ಸ್ಟಾರ್ ಓಪನರ್ ಲಿಟನ್ ದಾಸ್ ಇಡೀ ಏಷ್ಯಾಕಪ್ ನಿಂದ ಹೊರಗುಳಿದಿದ್ದಾರೆ. ಹೀಗಾಗಿ ಇಂದು 30ರ ಹರೆಯದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಅನಾಮುಲ್ ಹಕ್ ಬಿಜೋಯ್ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಅನಾಮುಲ್ ಹಕ್ ಬಿಜೋಯ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತದ ವಿರುದ್ಧ ಸ್ವದೇಶಿ ಸರಣಿಯಲ್ಲಿ ತಮ್ಮ ಕೊನೆಯ ODI ಆಡಿದ್ದರು.


ಇದನ್ನೂ ಓದಿ: ಇಂದಿನಿಂದ Asia Cup 2023 ಶುರು: ಆ ಒಂದು ಪಂದ್ಯ ಪಾಕಿಸ್ತಾನದಲ್ಲಿ ಆಡಬೇಕಿದೆ ಭಾರತ! ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ


ಅನಾಮುಲ್ ಹಕ್ ಬಿಜೋಯ್ ಅಂಕಿಅಂಶ:


ಅನಾಮುಲ್ ಹಕ್ ಬಿಜೋಯ್ ಬಾಂಗ್ಲಾದೇಶ ಪರ 44 ಏಕದಿನ ಪಂದ್ಯಗಳಲ್ಲಿ 30.58 ಸರಾಸರಿಯಲ್ಲಿ ಐದು ಅರ್ಧ ಶತಕ ಮತ್ತು ಮೂರು ಶತಕಗಳೊಂದಿಗೆ 1254 ರನ್ ಗಳಿಸಿದ್ದಾರೆ. ಅನಾಮುಲ್ ಹಕ್ ಬಿಜೋಯ್ ಬ್ಯಾಕ್‌ ಅಪ್ ವಿಕೆಟ್‌ ಕೀಪರ್ (ಮುಶ್ಫಿಕರ್ ರಹೀಮ್ ಅವರ ಬ್ಯಾಕಪ್) ಆಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.