ಪಾಕಿಸ್ತಾನ ವಿರುದ್ಧದ ODI ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಯಾರು?

Highest Run Scorer vs Pakistan: ಇಂದಿನಿಂದ ಏಷ್ಯಾಕಪ್ ಪ್ರಾರಂಭವಾಗಲಿದ್ದು, ಏಕದಿನ ಮಾದರಿಯಲ್ಲಿ ನಡೆಯಲಿದೆ. ಈ ಮಧ್ಯೆ ODIಗಳಲ್ಲಿ ಪಾಕಿಸ್ತಾನದ ವಿರುದ್ಧ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌’ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Written by - Bhavishya Shetty | Last Updated : Aug 30, 2023, 12:24 PM IST
    • ಇಂದಿನಿಂದ ಏಷ್ಯಾಕಪ್ ಪ್ರಾರಂಭವಾಗಲಿದ್ದು ಏಕದಿನ ಮಾದರಿಯಲ್ಲಿ ನಡೆಯಲಿದೆ
    • ಪಾಕಿಸ್ತಾನದ ವಿರುದ್ಧ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌’ಗಳ ಬಗ್ಗೆ ಮಾಹಿತಿ
    • ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ವಿರುದ್ಧ ಏಕದಿನ ಕ್ರಿಕೆಟ್‌’ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ್ದಾರೆ
ಪಾಕಿಸ್ತಾನ ವಿರುದ್ಧದ ODI ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಯಾರು? title=
Highest Run Scorer vs Pakistan

IND vs PAK, Highest Run Scorer vs Pakistan: ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳು ಯಾವಾಗಲೂ ಭಾರೀ ಕುತೂಹಲಕಾರಿಯಾಗಿರುತ್ತದೆ. ಉಭಯ ರಾಷ್ಟ್ರಗಳ ನಡುವಿನ ರಾಜಕೀಯ ಭಿನ್ನಾಭಿಪ್ರಾಯದಿಂದಾಗಿ ಪಾಕಿಸ್ತಾನದ ವಿರುದ್ಧದ ಪಂದ್ಯಗಳು ಹೆಚ್ಚಿನ ಕ್ರೇಜ್ ನೀಡುತ್ತದೆ. ಇನ್ನು ಈ ಹಿಂದೆ ಭಾರತ ಮತ್ತು ಪಾಕಿಸ್ತಾನ ನಡುವೆ ಏಕದಿನ ಪಂದ್ಯಗಳು ನಡೆಯುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಗಡಿಯಲ್ಲಿನ ಉದ್ವಿಗ್ನತೆಯಿಂದಾಗಿ ದ್ವಿಪಕ್ಷೀಯ ಸರಣಿಯನ್ನು ಆಡಲಾಗುತ್ತಿಲ್ಲ.

ಇನ್ನೊಂದೆಡೆ ಇಂದಿನಿಂದ ಏಷ್ಯಾಕಪ್ ಪ್ರಾರಂಭವಾಗಲಿದ್ದು, ಏಕದಿನ ಮಾದರಿಯಲ್ಲಿ ನಡೆಯಲಿದೆ. ಈ ಮಧ್ಯೆ ODIಗಳಲ್ಲಿ ಪಾಕಿಸ್ತಾನದ ವಿರುದ್ಧ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌’ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: ಈ ನಾಲ್ಕು ರಾಶಿಯವರ ಅದೃಷ್ಟ ಕೈ ಹಿಡಿಯಬೇಕಾದರೆ ಇವರು ಚಿನ್ನದ ಉಂಗುರ ಧರಿಸಲೇ ಬೇಕು 

ಸಚಿನ್ ತೆಂಡೂಲ್ಕರ್: ಭಾರತದ ಮಾಜಿ ವಿಶ್ವಕಪ್ ವಿಜೇತ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ವಿರುದ್ಧ ಏಕದಿನ ಕ್ರಿಕೆಟ್‌’ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ್ದಾರೆ. 69 ಪಂದ್ಯಗಳಲ್ಲಿ (67 ಇನ್ನಿಂಗ್ಸ್) 2526 ರನ್ ಗಳಿಸಿದ ಸಚಿನ್ ಅತಿ ಹೆಚ್ಚು ಶತಕ (5) ಮತ್ತು ಅರ್ಧ ಶತಕ (16) ಬಾರಿಸಿದ್ದಾರೆ. ಇನ್ನು, ಪಾಕಿಸ್ತಾನದ ವಿರುದ್ಧ ಅತಿ ಹೆಚ್ಚು ಬೌಂಡರಿಗಳನ್ನು ಸಿಡಿಸಿದ ಅನನ್ಯ ದಾಖಲೆಯನ್ನು ಸಚಿನ್ ಹೆಸರಿನಲ್ಲಿದೆ.

ರಾಹುಲ್ ದ್ರಾವಿಡ್: ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಪಾಕಿಸ್ತಾನದ ವಿರುದ್ಧ 58 ODIಗಳಲ್ಲಿ 36.51 ರ ಸರಾಸರಿಯೊಂದಿಗೆ 2403 ರನ್ ಗಳಿಸಿದ್ದಾರೆ. 55 ಇನ್ನಿಂಗ್ಸ್‌’ಗಳಲ್ಲಿ 2 ಶತಕ ಮತ್ತು 14 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ದ್ರಾವಿಡ್ ಅವರ ಅತ್ಯುತ್ತಮ ಸ್ಕೋರ್ 107 ಆಗಿದೆ.  

ಮೊಹಮ್ಮದ್ ಅಜರುದ್ದೀನ್: ಭಾರತದ ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಅಜರುದ್ದೀನ್ ಒಡಿಐ ಮಾದರಿಯಲ್ಲಿ ಪಾಕಿಸ್ತಾನದ ವಿರುದ್ಧ 3ನೇ ಅತಿ ಹೆಚ್ಚು ರನ್ ಗಳಿಸಿದ್ದಾರೆ. 64 ಪಂದ್ಯಗಳಲ್ಲಿ 31.86 ರ ಶ್ಲಾಘನೀಯ ಸರಾಸರಿಯೊಂದಿಗೆ 1657 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 9 ಅರ್ಧಶತಕಗಳು ಸೇರಿವೆ.

ಸೌರವ್ ಗಂಗೂಲಿ: ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ ಅವರು ಪಾಕಿಸ್ತಾನದ ವಿರುದ್ಧ ಭಾರತಕ್ಕಾಗಿ 4ನೇ ಅತಿ ಹೆಚ್ಚು ODI ರನ್‌’ಗಳನ್ನು (1652) ಗಳಿಸಿದ್ದಾರೆ.  53 ಪಂದ್ಯಗಳಲ್ಲಿ 35.14 ಸರಾಸರಿಯಲ್ಲಿ ಆಡಿದ್ದಾರೆ. ಇದರಲ್ಲಿ 2 ಶತಕ ಮತ್ತು 9 ಅರ್ಧಶತಕಗಳೂ ಸೇರಿವೆ.

ಯುವರಾಜ್ ಸಿಂಗ್: ಭಾರತದ ಮಾಜಿ ಆಲ್‌’ರೌಂಡರ್ ಯುವರಾಜ್ ಸಿಂಗ್ ಅವರು ಪಾಕಿಸ್ತಾನದ ವಿರುದ್ಧ ODIಗಳಲ್ಲಿ 5 ನೇ ಅತಿ ಹೆಚ್ಚು ರನ್ ಗಳಿಸಿದ್ದಾರೆ. 38 ಪಂದ್ಯಗಳಲ್ಲಿ 42.50 ರ ಆಕರ್ಷಕ ಸರಾಸರಿಯೊಂದಿಗೆ 1360 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 12 ಅರ್ಧ ಶತಕಗಳು ಸೇರಿವೆ. 2007 ರಲ್ಲಿ ಕರಾಚಿಯಲ್ಲಿ ಅಜೇಯ 107 ರನ್ ಬಾರಿಸಿದ್ದು, ಯುವರಾಜ್ ಅವರ ಗರಿಷ್ಠ ಸ್ಕೋರ್ ಆಗಿದೆ.

ಇದನ್ನೂ ಓದಿ: ಇಂದಿನಿಂದ Asia Cup 2023 ಶುರು: ಆ ಒಂದು ಪಂದ್ಯ ಪಾಕಿಸ್ತಾನದಲ್ಲಿ ಆಡಬೇಕಿದೆ ಭಾರತ!

ಎಂಎಸ್ ಧೋನಿ: 2011 ರ ವಿಶ್ವಕಪ್ ವಿಜೇತ ನಾಯಕ, ಎಂ ಎಸ್ ಧೋನಿ ಪಾಕಿಸ್ತಾನದ ವಿರುದ್ಧ ODI ಸ್ವರೂಪದಲ್ಲಿ 6 ನೇ ಅತಿ ಹೆಚ್ಚು 1231 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌’ನ 31 ಪಂದ್ಯಗಳಲ್ಲಿ (31 ಇನ್ನಿಂಗ್ಸ್) 53.52 ಸರಾಸರಿ ಹೊಂದಿದ್ದಾರೆ. ಇದರಲ್ಲಿ 2 ಶತಕ ಮತ್ತು ಅರ್ಧ ಶತಕ ಸೇರಿವೆ. ಸಚಿನ್ ಬಳಿಕ ಧೋನಿ ಪಾಕಿಸ್ತಾನದ ವಿರುದ್ಧ ಹೆಚ್ಚು ಅಂದರೆ 25 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News