ನವದೆಹಲಿ: ಎರಡು ದಿನಗಳ ನಂತರ, ದೆಹಲಿಯಲ್ಲಿ ಭಾರತ (India vs Bangladesh) ಟಿ 20 ಪಂದ್ಯ ನಡೆಲಿದೆ. ಅದಕ್ಕೂ ಮೊದಲು, ಬಾಂಗ್ಲಾದೇಶದ ಕೋಚ್ ರಸ್ಸೆಲ್ ಡೊಮಿಂಗೊ ​​ಅವರು ರಾಷ್ಟ್ರ ರಾಜಧಾನಿಯಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿಲ್ಲ, ಆದರೆ ಎರಡೂ ತಂಡಗಳು ಈ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ದೀಪಾವಳಿಯ ನಂತರ, ದೆಹಲಿಯಲ್ಲಿ ಮಾಲಿನ್ಯದ ಮಟ್ಟವು ಸಾಕಷ್ಟು ಹೆಚ್ಚಾಗಿದೆ. ಹವಾಮಾನವು ನಿರಂತರವಾಗಿ ಹದಗೆಡುತ್ತಿದೆ, ಇದರಿಂದಾಗಿ ಎಲ್ಲರೂ ನಗರದಲ್ಲಿ ನಡೆಯಲಿರುವವ ಪಂದ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಪಂದ್ಯವು ನವೆಂಬರ್ 3 ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.


ಅತಿಥಿ ತಂಡದ ತರಬೇತುದಾರ ಏನು ಹೇಳಿದರು?
ಡೊಮಿಂಗೊ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ಹವಾಮಾನವು ಉತ್ತಮವಾಗಿದೆ, ಹೆಚ್ಚು ಶಾಖ ಅಥವಾ ಹೆಚ್ಚು ಗಾಳಿ ಇಲ್ಲ. ಆದರೆ ಮಂಜು ಒಂದು ಕಳವಳಕಾರಿಯಾಗಿದೆ. ನಾವಿದರ ಬಗ್ಗೆ ದೂರು ನೀಡುತ್ತಿಲ್ಲ. ಆದರೆ ಇದು ಉತ್ತಮ ವಾತಾವರಣವಲ್ಲ" ಎಂದರು.


"ನಮ್ಮ ಸಿದ್ಧತೆಗಳು ಪೂರ್ಣಗೊಂಡಿದೆಯೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಮಾಲಿನ್ಯದಿಂದಾಗಿ ನಮ್ಮ ತಂಡದ ಕೆಲವು ಆಟಗಾರರು ಕಣ್ಣು ಮತ್ತು ಗಂಟಲಿನ ಸಮಸ್ಯೆಯಿಂದಾಗಿ ಬಳಲುತ್ತಿದ್ದಾರೆ. ನಾನು ಆರು ಅಥವಾ ಏಳು ಗಂಟೆಗಳಿಗಿಂತ ಹೆಚ್ಚು ಕಾಲ ಮೈದಾನದಲ್ಲಿರಲು ಬಯಸುವುದಿಲ್ಲ. ನಾವು ಮೂರು ಗಂಟೆಗಳ ಪಂದ್ಯ ಮತ್ತು ಮೂರು ಗಂಟೆಗಳ ಅಭ್ಯಾಸವನ್ನು ಆಡುತ್ತಿದ್ದೇವೆ" ಎಂದು ಡೊಮಿಂಗೊ ​​ಹೇಳಿದರು.