ನವದೆಹಲಿ: 2020 ರ ಅಕ್ಟೋಬರ್‌ನಿಂದ 2021 ರ ಸೆಪ್ಟೆಂಬರ್ ವರೆಗೆ ಟೀಮ್ ಇಂಡಿಯಾದ ಹಿರಿಯ ಆಟಗಾರರ ವಾರ್ಷಿಕ ಒಪ್ಪಂದಗಳನ್ನು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಗುರುವಾರ ಪ್ರಕಟಿಸಿದೆ.


COMMERCIAL BREAK
SCROLL TO CONTINUE READING

ಬಿಸಿಸಿಐ (BCCI) ಪತ್ರಿಕಾ ಪ್ರಕಟಣೆಯ ಪ್ರಕಾರ, ಪಾವತಿ ರಚನೆಗಳನ್ನು ಗ್ರೇಡ್ ಎ + ಕಾಂಟ್ರಾಕ್ಟ್ ಗಳಿಸುವ ಆಟಗಾರರು ₹ 7 ಕೋಟಿ, ಗ್ರೇಡ್ ಎ ಗಳಿಸುವ ಆಟಗಾರರು ₹ 5 ಕೋಟಿ, ಗ್ರೇಡ್ ಬಿ ಗಳಿಸುವ ಆಟಗಾರರು ₹ 3 ಕೋಟಿ, ಮತ್ತು ಗ್ರೇಡ್ ಸಿ ಗಳಿಸುವ ಆಟಗಾರರು ₹ 1 ಕೋಟಿ ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. 


ಇದನ್ನೂ ಓದಿ: Ind vs Eng: ಮೂರನೇ T20 ಪಂದ್ಯದ ಸೋಲಿನ ಕಾರಣ ಹೇಳಿದ ಕೊಹ್ಲಿ!


ಒಟ್ಟು 28 ಕ್ರಿಕೆಟಿಗರಿಗೆ ನಾಲ್ಕು ವಿಭಾಗಗಳಲ್ಲಿ ಕೇಂದ್ರ ಗುತ್ತಿಗೆ ನೀಡಲಾಯಿತು. ಎ + ವಿಭಾಗದ ಪಟ್ಟಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಮತ್ತು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಉಳಿಸಿಕೊಳ್ಳಲಾಗಿದೆ.


ಇದನ್ನೂ ಓದಿ: Saba Karim: 'ಭಾರತ ತಂಡಕ್ಕೆ ಇಬ್ಬರು‌ ಧೋನಿ ಸಿಗಲಿದ್ದಾರಂತೆ'


ಏತನ್ಮಧ್ಯೆ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಶಿಖರ್ ಧವನ್, ಕೆ.ಎಲ್ ರಾಹುಲ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಗ್ರೇಡ್ ಎ ಗುತ್ತಿಗೆಗೆ ಒಳಪಡಿಸಲಾಗಿದೆ. ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ, ವೇಗಿಗಳಾದ ಉಮೇಶ್ ಯಾದವ್, ಭುವನೇಶರ್ ಕುಮಾರ್, ಮತ್ತು ಶಾರ್ದುಲ್ ಠಾಕೂರ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್‌ವಾಲ್ ಅವರನ್ನು ಗ್ರೇಡ್ ಬಿ ಒಪ್ಪಂದದಡಿಯಲ್ಲಿ ಇರಿಸಲಾಗಿದೆ.


ಇದನ್ನೂ ಓದಿ: Vijay Hazare Trophy Final: 4ನೇ ಬಾರಿಗೆ 'ವಿಜಯ್ ಹಜಾರೆ ಟ್ರೋಫಿ' ಗೆದ್ದ ಮುಂಬೈ ತಂಡ!


ಕುಲದೀಪ್ ಯಾದವ್, ನವದೀಪ್ ಸೈನಿ, ದೀಪಕ್ ಚಹರ್, ಶುಬ್ಮನ್ ಗಿಲ್, ಹನುಮಾ ವಿಹಾರಿ, ಆಕ್ಸಾರ್ ಪಟೇಲ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಗ್ರೂಪ್ ಸಿ ಅಡಿಯಲ್ಲಿ ಇರಿಸಲಾಗಿದೆ. ಆಲ್ರೌಂಡರ್ ಕೇದಾರ್ ಜಾಧವ್ ಅವರಿಗೆ ಈ ಬಾರಿ ಕೇಂದ್ರ ಗುತ್ತಿಗೆ ನೀಡಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.